ಮೇ 2ರಂದು ತುಂಬೆ ಫಾ.ಮುಲ್ಲರ್ ಆಸ್ಪತ್ರೆಯ ದಶಮನೋತ್ಸವ ಸಂಭ್ರಮ

ಮಂಗಳೂರು, ಎ.28: ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಸಹ ಸಂಸ್ಥೆಯಾಗಿರುವ ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಯ ದಶಮಾನೋತ್ಸವ ಸಂಭ್ರಮಾಚರಣೆ ಮೇ 2ರಂದು ಬೆಳಗ್ಗೆ 10:30ಕ್ಕೆ ತುಂಬೆ ಆಸ್ಪತ್ರೆಯ ಆವರಣದಲ್ಲಿ ಜರುಗಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ, ಮಂಗಳೂರು ಬಿಷಪ್, ಫಾ.ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷ ಅ.ವಂ. ಪೀಟರ್ ಪಾವ್ಲ್ ಸಲ್ದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು. ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ, ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ.ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವೈದ್ಯಕೀಯ ಅಧೀಕ್ಷಕ ಡಾ.ಕಿರಣ್ ಶೆಟ್ಟಿ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವಂ. ಭಗಿನಿ, ಧನ್ಯಾ ದೇವಸ್ಯ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು. ಇದೇ ವೇಳೆ ದಶಮನೋತ್ಸವ ಸ್ಮರಣಾರ್ಥ ಮುಲ್ಲರ್ ತುಂಬೆ ಸಂಚಿಕೆ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯ ತುಂಬೆಯ ಡಾಕ್ಯುಮೆಂಟರಿ ಅನಾವರಣಗೊಳ್ಳಲಿದೆ. ಈ ಸಂಸ್ಥೆಯಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸಿದ ವೈದ್ಯರು, ಸಿಬ್ಬಂದಿಯನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು. ವಂ.ಫಾದರ್ ಆಗಸ್ಟಸ್ ಮುಲ್ಲರ್ 1880ನೇ ಇಸವಿಯಲ್ಲಿ ಮಂಗಳೂರಿನ ಕಂಕನಾಡಿಯಲ್ಲಿ ಸ್ಥಾಪಿಸಿರುವ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ಇಂದು ವಿಸ್ತಾರವಾಗಿ ಬೆಳೆದಿದ್ದು, ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಗೆ ಹೆಸರುವಾಸಿಯಾಗಿದೆ. ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆ ಈ ಸೇವಾ ಸಂಸ್ಥೆಯ ಸಹ ಸಂಸ್ಥೆಯಾಗಿದೆ. ತುಂಬೆಯ ಬಿ.ಎ. ಸಮೂಹ ಸಂಸ್ಥೆಯಿಂದ ಇದನ್ನು 2013ರ ಮೇ 1ರಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ಖರೀದಿಸಿತ್ತು. 2013ರ ಜೂನ್ 2ರಂದು ಇದು ಉದ್ಘಾಟನೆಗೊಂಡಿತ್ತು ಎಂದವರು ವಿವರಿಸಿದರು. ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯು 50 ಹಾಸಿಗೆಗಳಿಂದ ಈಗ 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿದೆ. ಮಲ್ಟಿ ಸ್ಪೆಷಾಲಿಟಿಯಿಂದ ಹಿಡಿದು ಸೂಪರ್ ಸ್ಪೆಷಾಲಿಟಿ ಸೇವೆಗಳು ಇಲ್ಲಿ ಲಭ್ಯವಿವೆ. ಘೆಅಆಏ ಪ್ರವೇಶ ಪೂರ್ವ ಮಾನ್ಯತೆ ಪಡೆದಿದೆ. 24 ತಾಸುಗಳ ತುರ್ತು ಮತ್ತು ಅಪಘಾತ ಚಿಕಿತ್ಸೆ, 16 ಸ್ಲೈಸ್ ಸಿಟಿ ಸ್ಕ್ಯಾನ್, 2್ಡ47 ಪ್ರಯೋಗಾಲಯದ ಸೇವೆಗಳು, ಔಷಧಾಲಯ, ಪ್ರಸೂತಿ/ಹೆರಿಗೆ ವಿಭಾಗ, ಸುಸರ್ಚಿತ ಶಸ್ತ್ರಚಿಕಿತ್ಸಾ ಕೊಠಡಿಗಳು, ದಾದಿಯರ ಸೇವೆಗಳಿಗೆ ಹೆಸರು ವಾಸಿಯಾಗಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ಜನರ ಅದರಲ್ಲೂ ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಕಳೆದ ವರ್ಷ ದಶಮಾ ನೋತ್ಸವದ ಕೊಡುಗೆಯಾಗಿ ಬಂಟ್ವಾಳ ತಾಲೂಕಿನ ಪ್ರಥಮ ಬಿಎಸ್ಸಿ ನರ್ಸಿಂಗ್ ಕಾಲೇಜನ್ನು (40 ಸೀಟುಗಳು) ಆರಂಭಿಸಿದೆ ಹಾಗೂ ಕಾಲೇಜಿನ ಹೊಸ ಕಟ್ಟಡ ನಿರ್ಮಾಣ ಭರದಿಂದ ಸಾಗಿದೆ ಎಂದು ತಿಳಿಸಿದರು. ಆಸ್ಪತ್ರೆಯು ದಶಮನೋತ್ಸವ ಪ್ರಯುಕ್ತ ಮೇ 1ರಂದು ಎಲ್ಲ ವಿಭಾಗಗಳ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಶಿಬಿರದ ಸೌಲಭ್ಯವನ್ನು ಒಂದು ತಿಂಗಳಿಗೆ ಉಚಿತವಾಗಿ ಒದಗಿಸಲಾಗುತ್ತದೆ. ಸುದ್ದಿ ಗೋಷ್ಠಿಯಲ್ಲಿ ಎಫ್‌ಎಂಎಂಸಿ ಡೀನ್ ಡಾ.ಆ್ಯಂಟೋನಿ ಸಿಲ್ವನ್ ಡಿಸೋಜ, ಸಹಾಯಕ ಆಡಳಿತಾಧಿಕಾರಿ ಎಫ್‌ಎಂಎಂಸಿಎಚ್ ವಂ.ಜಾರ್ಜ್ ಜೀವನ್ ಸಿಕ್ವೇರ, ಆಡಳಿತಾಧಿಕಾರಿ ಎಫ್‌ಎಂಎಚ್‌ಟಿ, ವಂ.ಸಿಲ್ವೆಸ್ಟರ್ ಲೋಬೊ, ಸಹಾಯಕ ಆಡಳಿತಾಧಿಕಾರಿ ಎಫ್‌ಎಂಎಂಸಿಎಚ್ ಡಾ.ನೆಲ್ಸನ್ ಧೀರಜ್ ಪಾಯಸ್, ವೈದ್ಯಕೀಯ ಅಧೀಕ್ಷಕ ಎಫ್‌ಎಂಎಚ್‌ಟಿ ಡಾ.ಕಿರಣ್ ಶೆಟ್ಟಿ, ಮುಖ್ಯ ನರ್ಸಿಂಗ್ ಅಧಿಕಾರಿ ಎಫ್‌ಎಂಎಂಟಿ ಧನ್ಯಾ ದೇವಸ್ಯ ಉಪಸ್ಥಿತರಿದ್ದರು. ಮುಂದಿನ ಕಾರ್ಯ ಯೋಜನೆಗಳು ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊಸದಾಗಿ ಆರಂಭಿಸಿದ Audiology and Speech Language Pathology ವಿಭಾಗವನ್ನು ಹಾಗೂ ಡಯಾಲಿಸಿಸ್ ವಿಭಾಗಕ್ಕೆ ಹೊಸದಾಗಿ ಸೇರ್ಪಡೆಯಾದ ಹೊಸ 2 ಯಂತ್ರಗಳ ಉದ್ಘಾಟನೆಯನ್ನು ಮೇ 1ರಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕೊವೆಲ್ಲೋ ನೆರವೇರಿಸುವರು. *ಎನ್‌ಎಬಿಎಚ್ ಪೂರ್ಣ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಶಸ್ತ್ರಚಿಕಿತ್ಸೆಗಳಾದ ಅರ್ಥೋಸ್ಕೊಪಿ/ಕೀ ಹೋಲ್, ಮೊಣಕಾಲು, ಕೀಲು, ಬದಲಾವಣೆ ಸರ್ಜರಿ ನಡೆಸಲು ಹೆಚ್ಚಿನ ಗಮನ ಹರಿಸಲಾಗುವುದು. ಈ ಎಲ್ಲ ಸೇವೆಗಳು /ಐ ರೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಅನುಕೂಲಕರವಾಗಿದೆ. *2023-23 ಶೈಕ್ಷಣಿಕ ವರ್ಷದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯಲ್ಲಿ ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭಿಸಲಾಗಿದೆ. ಈ ಕಾಲೇಜನ್ನು ಈಗಿರುವ 40 ಸೀಟ್‌ಗಳ ಸಂಖ್ಯೆಯನ್ನು 100ಕ್ಕೆ ವಿಸ್ತರಿಸಲಾಗುವುದು. *ಜಿಎನ್‌ಎಂ ಪ್ರೋಗ್ರಾಂ ಮತ್ತು ಕೆಲವು ಎಎಚ್‌ಎಸ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಚಿಂತನೆ. ಅದಲ್ಲದೆ ಬಡ ರೋಗಿಗಳಿಗೆ ಪ್ರತಿ ವರ್ಷ ಸುಮಾರು 75 ಲಕ್ಷ ರೂ. ರಿಯಾಯಿತಿ ನೀಡಲಾಗುತ್ತಿದೆ.
Next Story