Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತಂತ್ರಜ್ಞಾನದ ಲಾಭಗಳನ್ನು ಜನರಿಗೆ...

ತಂತ್ರಜ್ಞಾನದ ಲಾಭಗಳನ್ನು ಜನರಿಗೆ ತಲುಪಿಸಲು ಸರಕಾರ ನಿರಂತರ ಶ್ರಮಿಸುತ್ತಿದೆ: ಪ್ರಧಾನಿ ಮೋದಿ

28 April 2023 9:51 PM IST
share
ತಂತ್ರಜ್ಞಾನದ ಲಾಭಗಳನ್ನು ಜನರಿಗೆ ತಲುಪಿಸಲು ಸರಕಾರ ನಿರಂತರ ಶ್ರಮಿಸುತ್ತಿದೆ: ಪ್ರಧಾನಿ ಮೋದಿ

ಹೊಸದಿಲ್ಲಿ,ಎ.28: ತಂತ್ರಜ್ಞಾನದ ಲಾಭಗಳನ್ನು ಜನರಿಗೆ ತಲುಪಿಸಲು ತನ್ನ ಸರಕಾರವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದರು.

ದೇಶಾದ್ಯಂತ 85 ಜಿಲ್ಲೆಗಳ ಎರಡು ಕೋಟಿ ಜನರಿಗೆ ಪ್ರಯೋಜನವನ್ನು ಒದಗಿಸುವ 91 ಎಫ್ಎಂ ಟ್ರಾನ್ಸ್ಮಿಟರ್ ಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಮೋದಿ ರೇಡಿಯೊಂದಿಗೆ ತನ್ನ ತಲೆಮಾರಿನ ಭಾವನಾತ್ಮಕ ಸಂಬಂಧಕ್ಕೆ ಒತ್ತು ನೀಡಿದರು. ರೇಡಿಯೊ ಮೂಲಕ ಮಾತ್ರ ದೇಶದ ಜನರೊಂದಿಗೆ ಭಾವನಾತ್ಮಕ ಸಂಬಂಧ ಸಾಧ್ಯ ಎಂದರು. ರವಿವಾರ ಪ್ರಸಾರಗೊಳ್ಳಲಿರುವ ತನ್ನ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮವನ್ನು ಪ್ರಸ್ತಾಪಿಸಿ,ಈ ಸರಣಿ ಕಾರ್ಯಕ್ರಮಗಳ ಮೂಲಕ ಸ್ವಚ್ಛ ಭಾರತ ಅಭಿಯಾನ,ಬೇಟಿ ಬಚಾವೊ ಬೇಟಿ ಪಢಾವೊ ಮತ್ತು ಹರ್ ಘರ್ ತಿರಂಗಾದಂತಹ ಸರಕಾರದ ಉಪಕ್ರಮಗಳು ಜನರಿಗೆ ತಲುಪಿವೆ. ಹೀಗಾಗಿ ಒಂದು ರೀತಿಯಲ್ಲಿ ತಾನೂ ಆಕಾಶವಾಣಿ ತಂಡದ ಭಾಗವಾಗಿದ್ದೇನೆ ಎಂದರು.

91 ಎಫ್ಎಂ ಟ್ರಾನ್ಸ್ಮಿಟರ್ ಗಳ ಉದ್ಘಾಟನೆಯು ಇಂತಹ ಸೌಲಭ್ಯಗಳನ್ನು ಹೊಂದಿರದ ಅವಕಾಶವಂಚಿತ ಜನರಿಗೆ ಆದ್ಯತೆಯನ್ನು ನೀಡುವ ಸರಕಾರದ ನೀತಿಗೆ ಅನುಗುಣವಾಗಿದೆ ಎಂದ ಮೋದಿ,ತಂತ್ರಜ್ಞಾನಗಳನ್ನು ಜನರಿಗೆ ತಲುಪಿಸಲು ಸರಕಾರವು ನಿರಂತರವಾಗಿ ಶ್ರಮಿಸುತ್ತಿದೆ. ಭಾರತವು ತನ್ನ ಸಂಪೂರ್ಣ ಸಾಮರ್ಥ್ಯಕ್ಕೆ ಏರಬೇಕಿದ್ದರೆ ಯಾವುದೇ ಭಾರತೀಯರು ಅವಕಾಶದ ಕೊರತೆಯನ್ನು ಅನುಭವಿಸಬಾರದು. ಆಧುನಿಕ ತಂತ್ರಜ್ಞಾನವು ಎಲ್ಲರಿಗೂ ಲಭ್ಯವಾಗಬೇಕು ಮತ್ತು ಅದು ಕೈಗೆಟಕುವಂತಿರಬೇಕು ಎನ್ನುವುದು ಮುಖ್ಯವಾಗಿದೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ದೇಶವು ಕಂಡಿರುವ ತಂತ್ರಜ್ಞಾನ ಕ್ರಾಂತಿಯು ರೇಡಿಯೊವನ್ನು ಮತ್ತು ವಿಶೇಷವಾಗಿ ಎಫ್ಎಂ ಅನ್ನು ಹೊಸ ಅವತಾರದಲ್ಲಿ ಪ್ರಸ್ತತ ಪಡಿಸಿದೆ ಎಂದರು. ಅಂತರ್ಜಾಲ ಬಳಕೆಯು ಹೆಚ್ಚುತ್ತಿರುವುದನ್ನು ಬೆಟ್ಟು ಮಾಡಿದ ಅವರು,ಪಾಡ್ಕಾಸ್ಟ್ ಗಳು ಮತ್ತು ಆನ್ಲೈನ್ ಎಫ್ಎಂ ಮೂಲಕ ರೇಡಿಯೊ ನವೀನ ರೀತಿಗಳಲ್ಲಿ ಮುಂಚೂಣಿಗೆ ಬಂದಿದೆ ಎಂದರು.
ದೂರದರ್ಶನದ ಉಚಿತ ಡಿಟಿಎಚ್ ಸೌಲಭ್ಯವನ್ನು 4.30 ಕೋ.ಮನೆಗಳಿಗೆ ಒದಗಿಸಲಾಗಿದೆ ಮತ್ತು ಜಗತ್ತಿನ ಕುರಿತು ನೈಜ ಸಮಯದ ಮಾಹಿತಿಗಳು ಗ್ರಾಮೀಣ ಕುಟುಂಬಗಳ ಮನೆಬಾಗಿಲಿಗೆ ಮತ್ತು ಗಡಿ ಪ್ರದೇಶಗಳಿಗೆ ತಲುಪುತ್ತಿವೆ ಎಂದು ಹೇಳಿದರು.
ದಶಕಗಳಿಂದಲೂ ಶಿಕ್ಷಣ ಮತ್ತು ಮನರಂಜನೆಯಿಂದ ವಂಚಿತಗೊಂಡಿದ್ದ ಸಮಾಜದ ವರ್ಗಗಳಿಗೆ ಅವು ಇಂದು ದೊರೆಯುತ್ತಿವೆ ಎಂದು ಒತ್ತಿ ಹೇಳಿದ ಪ್ರಧಾನಿ,‘ಇದು ಸಮಾಜದ ವಿವಿಧ ವರ್ಗಗಳ ನಡುವಿನ ಅಸಮಾನತೆಯನ್ನು ತೊಡೆದುಹಾಕಿದೆ ಮತ್ತು ಪ್ರತಿಯೊಬ್ಬರಿಗೂ ಗುಣಮಟ್ಟದ ಮಾಹಿತಿಯನ್ನೊದಗಿಸುತ್ತಿದೆ. ಡಿಟಿಎಚ್ ಅಥವಾ ಎಫ್ಎಂ ಆಗಿರಲಿ,ಅದು ಭಾರತದ ಭವಿಷ್ಯದೊಳಗೆ ಇಣುಕಿ ನೋಡುವ ಅವಕಾಶವನ್ನು ನೀಡುತ್ತದೆ. ಈ ಭವಿಷ್ಯಕ್ಕಾಗಿ ನಮ್ಮನ್ನು ನಾವು ಸಜ್ಜಾಗಿಸಿಕೊಳ್ಳಬೇಕು ’ಎಂದು ಹೇಳಿದರು.
ಭಾಷಾ ವೈವಿಧ್ಯತೆಯ ಆಯಾಮದ ಕುರಿತೂ ಅವರು ಮಾತನಾಡಿದರು.
ದೇಶವನ್ನು ಮತ್ತು ಅದರ 140 ಕೋ.ಪ್ರಜೆಗಳನ್ನು ಸಂಪರ್ಕಿಸುವುದು ಆಕಾಶವಾಣಿಯಂತಹ ಎಲ್ಲ ಸಂವಹನ ವಾಹಿನಿಗಳ ಧ್ಯೇಯವಾಗಿದೆ ಎಂದರು.


ಟ್ರಾನ್ಸ್ಮಿಟರ್ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ 18 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು,ಜನ ಪ್ರತಿನಿಧಿಗಳು ಪದ್ಮ ಪ್ರಶಸ್ತಿ ಪುರಸ್ಕೃತರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಡಿಜಿಟಲ್ ಇಂಡಿಯಾ ರೇಡಿಯೋಕ್ಕೆ ಹೊಸ ಶ್ರೋತೃಗಳನ್ನು ನೀಡಿರುವುದು ಮಾತ್ರವಲ್ಲ,ಅದು ಹೊಸ ಚಿಂತನೆಯ ಪ್ರಕ್ರಿಯೆಯನ್ನೂ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ

ರವಿವಾರ ಪ್ರಸಾರಗೊಳ್ಳಲಿರುವ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್ ’ನ ನೂರನೇ ಸಂಚಿಕೆಗೆ ಸರಕಾರವು ಅಬ್ಬರದ ಪ್ರಚಾರವನ್ನು ನೀಡುತ್ತಿದ್ದು,ಎರಡು ದಿನಗಳ ಮುನ್ನ 91 ಎಫ್ಎಂ ಟ್ರಾನ್ಸ್ಮಿಟರ್ಗಳ ಉದ್ಘಾಟನೆ ಗಮನಾರ್ಹವಾಗಿದೆ.

share
Next Story
X