ಬಿಜೆಪಿ ಮಂಗಳೂರಿನ ಮಲ್ಲಿಗೆಯನ್ನು ಮರೆತ್ತಿದ್ದು, ಮೂಲ ಸಂಸ್ಕೃತಿಯನ್ನು ನಾಶಮಾಡಲು ಹೊರಟಿದೆ: ಡಾ. ಅಜಯ್ ಕುಮಾರ್ ಆರೋಪ

ಮಂಗಳೂರು, ಎ.28: ಬಿಜೆಪಿ ಮಂಗಳೂರಿನ ಮಲ್ಲಿಗೆಯನ್ನು ಮರೆತದ್ದು ಮತ್ತು ಮೂಲ ಸಂಸ್ಕೃತಿಯನ್ನು ನಾಶಮಾಡಲು ಹೊರಟಿರುವ ಕಾರಣದಿಂದಾಗಿ ದ.ಕ. ಜಿಲ್ಲೆಯ ಅಭಿವೃದ್ಧಿಗೆ ಧಕ್ಕೆ ಉಂಟಾಗಿದೆ ಎಂದು ಎಐಸಿಸಿ ವಕ್ತಾರ, ಝಾರ್ಖಂಡ್‌ನ ಮಾಜಿ ಸಂಸದ ಡಾ. ಅಜಯ್ ಕುಮಾರ್ ತಿಳಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಗಳೂರು ಮಲ್ಲಿಗೆಯನ್ನು ಕ್ರಿಶ್ಚಿಯನ್ನರು ಬೆಳೆಯುತ್ತಾರೆ. ಮುಸ್ಲಿಮರು ಮಾರುಕಟ್ಟೆ ಒದಗಿಸುತ್ತಾರೆ. ಹಿಂದುಗಳು ಖರೀದಿಸಿ ಮುಡಿಯುತ್ತಾರೆ. ಇದು ಮಂಗಳೂರಿನ ಸಂಸ್ಕೃತಿಯಾಗಿದೆ. ಮಂಗಳೂರಿನ , ಕರಾವಳಿಯ ಮತ್ತು ಕರ್ನಾಟಕದ ನಿಜವಾದ ಸೌಂದರ್ಯವಾಗಿದೆ. ಇಂತಹ ಸೌಂದರ್ಯವನ್ನು ಬಿಜೆಪಿ ಹಾಳು ಮಾಡಿದೆ ಎಂದರು. ವಿದ್ಯಾವಂತರು, ಬುದ್ಧಿವಂತರು ಮತ್ತು ಆನೇಕ ವಿದ್ಯಾ ಸಂಸ್ಥೆಗಳಿರುವ ಮಂಗಳೂರಿನಲ್ಲಿ ಐಟಿ , ದೊಡ್ಡ ಕೈಗಾರಿಕೆಗಳ ಬೆಳವಣಿಗೆಗೆ ಎಲ್ಲ ಅನುಕೂಲತೆಗಳು ಇದ್ದರೂ ಇಲ್ಲಿಗೆ ಯಾವುದೇ ಕಂಪೆನಿಗಳು ಬರುತ್ತಿಲ್ಲ. ಎಲ್ಲವೂ ಮೈಸೂರು, ಬೆಂಗಳೂರಿಗೆ ರವಾನೆಯಾಗುತ್ತಿದೆ. ಐಟಿ ಹಬ್, ಟೆಕ್ಸ್‌ಟೈಲ್ಸ್ ಹಬ್ ಇಲ್ಲ ಮುಂಗಳೂರಿನ ಯುವ ಜನತೆ ಉದ್ಯೋಗಕ್ಕಾಗಿ ಬೇರೆ ಜಲ್ಲೆಗಳಿಗೆ ತೆರಳಬೇಕಾದ ಸ್ಥಿತಿ ಇದೆ. ಯುವ ಜನತೆಗೆ ತಮ್ಮ ಹೆತ್ತವರೊಂದಿಗೆ ಒಟ್ಟಿಗೆ ನೆಮ್ಮದಿಯಿಂದ ಬದುಕುವ ವಾತಾವರಣ ಇಲ್ಲ. ಇಂತಹ ಎಲ್ಲ ಸಮಸ್ಯೆಗಳಿಗೆ ಬಿಜೆಪಿ ಕಾರಣವಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಕರಾವಳಿ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ದಶಸಂಕಲ್ಪ ಯೋಜನೆಗಳನ್ನು ಪ್ರಕಟಿಸಿದೆ. ಪ್ರವಾಸೋದ್ಯಮಕ್ಕೆ ಬಹಳಷ್ಟು ಅವಕಾಶಗಳಿದೆ. ಆದರೆ ಬಿಜೆಪಿಗೆ ಅಭಿವೃದ್ಧಿಯಲ್ಲಿ ನಂಬಿಕೆ ಇಲ್ಲ. ಅಭಿವೃದ್ಧಿ ರಾಜಕೀಯ ಬಿಜೆಪಿಗೆ ಗೊತ್ತಿಲ್ಲ. ಅದು ದ್ವೇಷ ಹರಡುವ ಮೂಲಕ ಲಾಭ ಪಡೆಯುತ್ತಿದೆ. ಕಾಂಗ್ರೆಸ್ ಜಾರಿಗೊಳಿಸಲಿರುವ ಗ್ಯಾರಂಟಿಯ ಬಗ್ಗೆ ಬಿಜೆಪಿ ಲೆವಡಿ ಮಾಡುತ್ತಿದೆ. ಆದರೆ ಇದು ಬಡ ಕುಟುಂಬಕ್ಕೆ ಆಸರೆಯಾಗಲಿದೆ. ಹೆಚ್ಚುವರಿ ಆದಾಯ ಲಭ್ಯವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಐಸಿಸಿ ವಕ್ತಾರರಾದ ಚರಣ್ ಸಿಂಗ್ ಸಪ್ರಾ, ಲಾವಣ್ಯ ಬಲ್ಲಾಳ್, ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ವಕ್ತಾರ ಎಸಿ ವಿನಯ ರಾಜ್ ಮತ್ತಿತರರು ಉಪಸ್ಥಿತರಿದ್ದರು. ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಬೆಂಗಳೂರು ಮತ್ತು ಮೈಸೂರಿಗಿಂತ ದೊಡ್ಡದಾಗಿರುವ ಕರಾವಳಿ ಅಭಿವೃದ್ಧಿ ಕಾರಿಡಾರ್‌ನ್ನು ನಿರ್ಮಿಸಲಿದೆ. -ಎಐಸಿಸಿ ವಕ್ತಾರ , ಮಾಜಿ ಸಂಸದ ಡಾ. ಅಜಯ್ ಕುಮಾರ್
Next Story





