ಬೈಕಂಪಾಡಿ, ಕುಳಾಯಿ ವಾರ್ಡ್‌ನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಪರ ಮತಯಾಚನೆ

ಸುರತ್ಕಲ್: ಇಲ್ಲಿನ ಬೈಕಂಪಾಡಿ 10ನೇ ವಾರ್ಡ್ ಮತ್ತು ಕುಳಾಯಿ ವಾರ್ಡ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಉತ್ತರ ಅಭ್ಯರ್ಥಿ ಇನಾಯತ್ ಅಲಿ ಪರ ಮತಯಾಚನೆ ನಡೆಸಿದರು. ಮುಖಂಡ ಮಾಜಿ ಕಾರ್ಪೊರೇಟರ್ ಹಾಗೂ ಕಾಂಗ್ರೆಸ್ ಮುಖಂಡ ಪುರುಷೋತ್ತಮ ಚಿತ್ರಾಪುರ ಅವರ ನೇತೃತ್ವದಲ್ಲಿ ಕುಳಾಯಿ ವಾರ್ಡ್, ಬೈಕಂಪಾಡಿ 10ನೇ ವಾರ್ಡ್ ನ ಕೋಡಿಕಲ್, ಬೈಕಂಪಾಡಿ, ಚಿತ್ರಾಪುರ ಭಾಗದಲ್ಲಿ ಅಬ್ಬರದ ಪ್ರಚಾರ ಕಾರ್ಯ ನಡೆಸಿದರು. ಈ ವೇಳೆ ಮಾತನಾಡಿದ ಪುರುಷೋತ್ತಮ ಚಿತ್ರಾಪುರ, ಕಾಂಗ್ರೆಸ್ ಮಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಪರವಾಗಿ ಕಾರ್ಯಕರ್ತರು ಸೇರಿಕೊಂಡು ಪ್ರಚಾರದಲ್ಲಿ ತೊಡಗಿದ್ದೇವೆ. ಕಾಂಗ್ರೆಸ್ ನ ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಮತದಾರರೂ ಬಹಳ ಹುಮ್ಮಸ್ಸಿನಿಂದ ನಮ್ಮನ್ನು ಬರಮಾಡಿಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇನಾಯತ್ ಅಲಿ ಪ್ರಚಂಡ ಬಹುಮತ ಪಡೆದು ಜಯಗಳಿಸಲಿದ್ದಾರೆ ಎಂದರು. ಈ ವೇಳೆ ಮುಖಂಡರಾದ ರವಿ ಎನ್. ಶಿಯಾನ್ ಹೊಸಬೆಟ್ಟು ಮೊದಲಾದವರು ಉಪಸ್ತಿತರಿದ್ದರು.

Next Story