ಗೃಹಬಂಧನದ ವೇಳೆ ಪೊಲೀಸ್ ರಕ್ಷಣೆಗಾಗಿ ಎಂಟು ಲಕ್ಷ ರೂ.ಪಾವತಿಸಲು ಗೌತಮ್ ನವ್ಲಾಖಾಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ,ಎ.27: ಪೊಲೀಸ್ ರಕ್ಷಣೆಯನ್ನು ಒದಗಿಸಿದ್ದಕ್ಕಾಗಿ ಎಂಟು ಲ.ರೂ.ಗಳನ್ನು ಪಾವತಿಸುವಂತೆ ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದಲ್ಲಿ ಗೃಹಬಂಧನದಲ್ಲಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರ್ದೇಶನ ನೀಡಿದೆ.
ಕಳೆದ ವರ್ಷದ ನ.10ರಂದು ಗೃಹಬಂಧನ ಆದೇಶವನ್ನು ಹೊರಡಿಸಿದ್ದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಪೊಲೀಸ್ ರಕ್ಷಣೆಯ ವೆಚ್ಚವಾಗಿ 2.4 ಲ.ರೂ.ಗಳನ್ನು ಠೇವಣಿಯಿಡುವಂತೆ ನವ್ಲಾಖಾರಿಗೆ ಸೂಚಿಸಿತ್ತು.
ಒಟ್ಟು 66 ಲ.ರೂ.ಗಳು ಬಾಕಿಯಿವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ಶುಕ್ರವಾರ ತಿಳಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಈ ನಿರ್ದೇಶನವನ್ನು ಹೊರಡಿಸಿತು.
ತನ್ನನ್ನು ಗೃಹಬಂಧನದಲ್ಲಿಡಲಾಗಿರುವ ಮುಂಬೈನ ಸಾರ್ವಜನಿಕ ಗ್ರಂಥಾಲಯದಿಂದ ನಗರದಲ್ಲಿಯ ಬೇರೆ ಯಾವುದಾದರೂ ಸ್ಥಳಕ್ಕೆ ವರ್ಗಾಯಿಸುವಂತೆ ಕೋರಿ ನವ್ಲಾಖಾ ಸಲ್ಲಿಸಿರುವ ಅರ್ಜಿಗೆ ಎರಡು ವಾರಗಳಲ್ಲಿ ಉತ್ತರಿಸುವಂತೆಯೂ ನ್ಯಾಯಾಲಯವು ರಾಜು ಅವರಿಗೆ ಆದೇಶಿಸಿತು.
Next Story





