ಮಹಿಳೆ ನಾಪತ್ತೆ: ದೂರು ದಾಖಲು

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಿಳಿಯೂರು ಗ್ರಾಮದ ಕಾನ ಮನೆ ನಿವಾಸಿ ಶ್ವೇತಾ (24) ಎಂಬವರು ಎ. 24 ರಿಂದ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಅಣ್ಣು ಮೇರ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆಯಾದಾಕೆ ವಿವಾಹಿತೆಯಾಗಿದ್ದು, ಗಂಡನ ಮನೆಯಲ್ಲಿ ಸರಿ ಬಾರದೇ ತವರು ಮನೆಗೆ ಬಂದಿದ್ದರು. ಎಪ್ರಿಲ್ 24 ರ ಸಂಜೆಯಿಂದ ಅವರು ನಾಪತ್ತೆಯಾಗಿದ್ದರೆಂದು ತಿಳಿಸಲಾಗಿದೆ. ಈಕೆ ಕನ್ನಡ ಹಾಗೂ ತುಳು ಭಾಷೆಯನ್ನು ಮಾತನಾಡುವ, ಸಾದಾರಣ ಕಪ್ಪು ಮೈ ಬಣ್ಣದವರಾಗಿದ್ದು, ಎಲ್ಲಿಯಾದರೂ ಕಂಡಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story