Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜನ ಒಮ್ಮೆ ಸುಳ್ಳು ನಂಬುತ್ತಾರೆ, ಪ್ರತೀ...

ಜನ ಒಮ್ಮೆ ಸುಳ್ಳು ನಂಬುತ್ತಾರೆ, ಪ್ರತೀ ಬಾರಿ ನಂಬಲ್ಲ: ವಿನಯಕುಮಾರ್ ಸೊರಕೆ

28 April 2023 11:40 PM IST
share

ವಿನಯ ಕುಮಾರ್ ಸೊರಕೆ, ಎನ್‌ಎಸ್‌ಯುಐಯಲ್ಲಿ ಇರುವಾಗಲೇ ಚುನಾವಣೆ ಸ್ಪರ್ಧಿಸುವ ಅವಕಾಶ ಪಡೆದುಕೊಂಡು ಸಣ್ಣ ಪ್ರಾಯದಲ್ಲಿಯೇ ಶಾಸಕ ರಾದವರು. ದ.ಕ. ಜಿಲ್ಲೆಯ ಪುತ್ತೂರು ಕ್ಷೇತ್ರದಲ್ಲಿ ಎರಡು ಬಾರಿ, ಕಾಪು ಕ್ಷೇತ್ರದಲ್ಲಿ ಒಂದು ಬಾರಿ ಮತ್ತು ಉಡುಪಿ ಸಂಸದರಾಗಿ ಒಂದು ಅವಧಿಗೆ ಆಯ್ಕೆಯಾಗಿದ್ದ ಅವರು, ಹಿಂದಿನ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರು. ಕಾಪು ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಸೊರಕೆ, ಈ ಬಾರಿ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ವಾರ್ತಾಭಾರತಿ ಡಿಜಿಟಲ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಮನದ ಮಾತುಗಳನ್ನು ಹೇಳಿಕೊಂಡಿದ್ದಾರೆ.


► ಹೇಗಿದೆ ಪ್ರಚಾರ ? ಮತದಾರರ ಪ್ರತಿಕ್ರಿಯೆ ಹೇಗಿದೆ ?

ಕಳೆದ ಬಾರಿ ನಮ್ಮ ಬಗ್ಗೆ ಸತತವಾಗಿ ಅಪಪ್ರಚಾರ ಮಾಡಿದರು. ಸುಳ್ಳು ಒಂದು ಬಾರಿ ನಡೆಯುತ್ತದೆ. ಆದರೆ ಪ್ರತಿ ಬಾರಿಯೂ ನಡೆಯುವುದಿಲ್ಲ. ಇವತ್ತು ಜನರಿಗೆ ಅರ್ಥ ಆಗಿದೆ. ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ.

►ನಿಮ್ಮ ಚುನಾವಣೆ ಪ್ರಚಾರದ ಮುಖ್ಯ ವಿಷಯ ಗಳೇನು? ಮತದಾರರಿಗೆ ನೀವು ಏನು ಹೇಳು ತ್ತಿದ್ದೀರಿ?

ನನಗೆ ಪ್ರತಿ ಚುನಾವಣೆಯಲ್ಲೂ ಗ್ರಾಮದ ಅಭಿವೃದ್ಧಿ, ಜನರ ಸೇವೆಯೇ ಮುಖ್ಯ ವಿಷಯವಾಗಿರುತ್ತದೆ. ಅದಕ್ಕೆ ಆದ್ಯತೆ ನೀಡಿ ಸಾಮಾಜಿಕ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ.


► ಬಿಜೆಪಿ ಅಭ್ಯರ್ಥಿ ಬದಲಾದ ಬಳಿಕ ನಿಮಗೆ ಕಠಿಣ ಸ್ಪರ್ಧೆ ಎದುರಾಗಿದೆ, ಈ ಭಯ ನಿಮ್ಮನ್ನು ಕಾಡುತ್ತಿದೆ ಎಂಬ ಅಭಿಪ್ರಾಯವಿದೆ. ಆ ಬಗ್ಗೆ ಏನು ಹೇಳ್ತೀರಿ...?

ಇದೆಲ್ಲ ಅಪಪ್ರಚಾರ. ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ನಾಮಪತ್ರ ಸಲ್ಲಿಸುವಾಗ ಬಳ್ಳಾರಿ, ಬೆಂಗಳೂರು, ಮುಂಬೈಯಿಂದ ಜನ ಕರೆದು ಕೊಂಡು ಬಂದಿದ್ದರು. ಕೇವಲ ಹಣದ ಬಲದಿಂದ ಹಾಗೂ ಜಾತಿಯ ಹೆಸರಿನಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಕಳೆದ ೪೦ವರ್ಷಗಳಿಂದ ನಾನು ಎಲ್ಲ ಜಾತಿ, ಸಮುದಾಯದವರ ಜೊತೆ ಬೆರೆತು ಕೆಲಸ ಮಾಡಿಕೊಂಡು ಬಂದಿದ್ದೇನೆ. ಅದನ್ನು ಗುರ್ಮೆ ಸುರಗೇಶ್ ಶೆಟ್ಟಿ ಎದುರಾಳಿಯಾದ ತಕ್ಷಣ ಬದಲಾಯಿಸಲು ಆಗುವುದಿಲ್ಲ.
ಕಳೆದ ಚುನಾವಣೆಯಲ್ಲಿ ಸೋತರೂ, ಗೆದ್ದರೂ ಜನರ ಜೊತೆ ಇರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಈ ಹಿಂದೆ ಪುತ್ತೂರು ಶಾಸಕನಾಗಿ, ಉಡುಪಿ ಸಂಸದನಾಗಿ ಬಳಿಕ ಸೋಲಾದರೂ ನಾನು ಜನರ ಮಧ್ಯೆಯೇ ಇದ್ದೆ. ಸೋತಾಗ ನಾನು ವಿರೋಧ ಪಕ್ಷವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಕೊರೋನ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿನೆ ಮಾಡಿದ್ದೇನೆ. ಟೋಲ್ ಗೇಟ್ ದುಪ್ಪಟ್ಟು ದರ ವಸೂಲಿ ವಿರುದ್ಧ ಹೋರಾಟ ಮಾಡಿದ್ದೇನೆ.

►ಇದು ನಾನು ಸ್ಪರ್ಧಿಸುತ್ತಿರುವ ಕೊನೆಯ ಚುನಾವಣೆ ಎಂಬ ತಮ್ಮ ಹೇಳಿಕೆ ಅನುಕಂಪ ಗಿಟ್ಟಿಸುವ ರಾಜಕೀಯ ತಂತ್ರ ಅಂತ ಹೇಳಲಾಗುತ್ತಿದೆ... ಹೌದಾ?
ಕಾಂಗ್ರೆಸ್‌ನಲ್ಲಿ ೭೦ ವರ್ಷ ಆದ ನಂತರವೂ ಸ್ಪರ್ಧಿಸಲು ನಿಯಮ ಇದೆ. ನಮ್ಮ ಮೇಲೆ ಈವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ನಾನು ಪಕ್ಷದ ನಿಯಮ, ತತ್ವ ಒಪ್ಪಿಕೊಂಡು ಬಂದವನು. ಇದು ನನ್ನ ಕೊನೆಯ ಚುನಾವಣೆ ಎಂಬ ಹೇಳಿಕೆಯಲ್ಲಿ ಅನುಕಂಪ ಗಿಟ್ಟಿಸಲು ಏನಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ನಾನು ಸೋತ ಬಗ್ಗೆ ಜನರಿಗೆ ಅನುಕಂಪ ಇದ್ದೆ ಇದೆ. ಸೋಲಿಸಿರುವುದು ತಪ್ಪಾಯಿತು ಎಂಬ ಮನೋಭಾವನೆ ಜನರಿಗಿದೆ.

►ದೂರದ ಪುತ್ತೂರಿನವರಿಗಿಂತ ನಮ್ಮದೇ ಕ್ಷೇತ್ರದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನೇ ಶಾಸಕರನ್ನಾಗಿ ಮಾಡುವ ಎಂಬ ಬಿಜೆಪಿಯವರ ಪ್ರಚಾರದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಶೋಭಾ ಕರಂದ್ಲಾಜೆ, ಸದಾನಂದ ಗೌಡ, ರಘುಪತಿ ಭಟ್ ಎಲ್ಲಿಯವರು? ಅವರ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ. ನಾನು ಉಡುಪಿಗೆ ಬಂದು ೨೩ ವರ್ಷವಾಯಿತು. ನನ್ನ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತಾರೆ. ಗುರ್ಮೆ ಸುರೇಶ್ ಶೆಟ್ಟಿ ಮೂಲತಃ ಬಳ್ಳಾರಿಯವರು. ಪ್ರತಿ ಚುನಾವಣೆಯಲ್ಲೂ ಯಾಕೆ ಈ ವಿಷಯವನ್ನು ಎತ್ತಿಕೊಳ್ಳುತ್ತಾರೆ. ಮೊದಲು ಅವರು ಶೋಭಾ ಕರಂದ್ಲಾಜೆಯನ್ನು ಕೇಳಲಿ. ಸೋತ ನಂತರ ಕೂಡ ನಾನು ಶಾಸಕರಿಗಿಂತ ಜಾಸ್ತಿ  ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಸೋತ ಬಳಿಕ ಬೆಂಗಳೂರು ಅಥವಾ ಬೇರೆ ಕಡೆ ಹೋಗಿ ನಾನು ಕುಳಿತಿಲ್ಲ. ಸಂಸದರಿಗಿಂತ ಜಾಸ್ತಿ ನಾನು ಕೆಲಸ ಮಾಡುತ್ತಿದ್ದೇನೆ. ಎಲ್ಲ ಸಮುದಾಯದವರೊಂದಿಗೆ ಬೆರೆತು ಕೆಲಸ ಮಾಡುವುದು ನಮ್ಮ ಧರ್ಮ.

► ಕಾಪು ಕ್ಷೇತ್ರದಲ್ಲಿ ಈ ಬಾರಿ ಉಳಿದೆಲ್ಲಗಿಂತ ಜಾತಿ ರಾಜಕಾರಣವೇ ಮುಖ್ಯ ವಿಷಯವಾಗುತ್ತಿದೆಯೇ ?
ನನ್ನ ೪೦ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಜಾತಿ ಆಧಾರದಲ್ಲಿ ಚುನಾವಣೆ ಎದುರಿಸಿಲ್ಲ. ನನಗೆ ಬಂಟ ಸಮುದಾಯದವರು ಕೂಡ ಆತ್ಮೀಯರಿದ್ದಾರೆ. ಅವರು ಕೂಡ ನನಗೆ ಆಮಂತ್ರಣ ಕೊಡುತ್ತಾರೆ. ಸುರೇಶ್ ಶೆಟ್ಟಿ ಅಭ್ಯರ್ಥಿಯಾರು ಎಂಬ ಕಾರಣಕ್ಕೆ ಆ ಸಮುದಾಯವನ್ನು ಬಿಡಲು ಆಗುತ್ತದೆಯೇ? ಇವರು ಜಾತಿಯನ್ನು ಇಟ್ಟುಕೊಂಡು ಬಂಡವಾಳ ಮಾಡಿಕೊಳ್ಳಲು ನೋಡುತ್ತಿದ್ದಾರೆ.

►ಕಾಪು ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಎಸ್‌ಡಿಪಿಐ ಸ್ಪರ್ಧೆಯಿಂದ  ಮತ ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಹುದೇ ?

ಇದೆಲ್ಲ ಬಿಜೆಪಿಯವರ ಕಲ್ಪನೆ. ಜೆಡಿಎಸ್ ಪಕ್ಷ ಎಲ್ಲಿದೆ? ಕಳೆದ ಬಾರಿ ಬೈಂದೂರಿನಿಂದ, ಈ ಬಾರಿ ದಿಲ್ಲಿಯ ವ್ಯಕ್ತಿಯನ್ನು ಕರೆತಂದು ಇಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದಾರೆ. ಮತದಾರರ ಪಟ್ಟಿಯಲ್ಲೂ ಅವರ ಹೆಸರು ಇಲ್ಲ. ಇದು ಜೆಡಿಎಸ್‌ಗೆ ಬಿಜೆಪಿಯವರೇ ಕೊಟ್ಟ ಅಭ್ಯರ್ಥಿ.

 ►ಈ ಬಾರಿ ಗೆದ್ದರೆ ಕಾಪು ಕ್ಷೇತ್ರದ ಜನರಿಗೆ ನಿಮ್ಮ ಭರವಸೆ ಏನು ? ಇಲ್ಲಿನ ಅಭಿವೃದ್ಧಿಗೆ ನಿಮ್ಮ ವಿಷನ್ ಏನು ?
ನಾವು ಕಾಪು ಕ್ಷೇತ್ರದ ಅಭಿವೃದ್ಧಿಗಾಗಿ ನೀಲಿ ನಕಾಶೆ ತಯಾರಿಸಿ ೨೦೧೩ರಲ್ಲಿಯೇ ಚಾಲನೆ ನೀಡಿದ್ದೇವೆ. ಮೊದಲು ಕಾಪುವಿಗೆ ಅಸ್ತಿತ್ವ ಇರಲಿಲ್ಲ. ಬೇರೆ ಕ್ಷೇತ್ರಗಳನ್ನು ಅವಲಂಬಿಸಿರಬೇಕಾ ಗಿತ್ತು. ಕಾಪು ಪ್ರತಿಷ್ಠಿತ ಕ್ಷೇತ್ರ. ಬೇರೆ ಬೇರೆ ಧರ್ಮ, ಜಾತಿ, ವಿಭಿನ್ನ ಸಂಸ್ಕೃತಿಯ ಜನ ಬದುಕುವ ಊರು. ಇಲ್ಲಿಗೆ ರಾಜ ಮುದ್ರೆ ನೀಡಬೇಕು ಎಂಬ ಉದ್ದೇಶದಿಂದ ಕಾಪು ತಾಲೂಕು ಆಗಿ ಮಾಡಿದ್ದೇನೆ. ಅಲ್ಲದೆ ಮೂರು ಗ್ರಾಮಗಳನ್ನು ಸೇರಿಸಿ ಪುರಸಭೆ ಮಾಡಿದೆ. ನಗರಾಭಿವೃದ್ಧಿ ಸಚಿವನಾಗಿ ೧೫೦ ಕೋಟಿ ರೂ. ಅನುದಾನ ನೀಡಿದೆ. ಕಾಪುವಿನ ಸರ್ವತೋಮುಖ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಕಾಪು ಅಂದರೆ ಎಲ್ಲರನ್ನೂ ಕಾಯುವ ರಕ್ಷಣಾಪುರ. ಎಲ್ಲರನ್ನೂ ರಕ್ಷಿಸುವ ಊರು. ನಾನು ಆ ರೀತಿಯಲ್ಲಿ ಕಾಪು ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಚಾಲನೆ ಕೊಟ್ಟಿದ್ದೇವೆ.

►ಕಳೆದ ಬಾರಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಶೂನ್ಯ ಸಂಪಾದನೆ. ಈ ಬಾರಿ ಏನಾಗಬಹುದು ?

ಕಳೆದ ಬಾರಿ ಸುಳ್ಳು ಪ್ರಚಾರದಿಂದಾಗಿ ಐದು ಕ್ಷೇತ್ರಗಳಲ್ಲೂ ಸೋಲಾಗಿದೆ. ಈ ಬಾರಿ ರಿವರ್ಸ್ ಹೊಡೆಯುತ್ತದೆ. ಐದರಲ್ಲಿ ಐದು ಕೂಡ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ಶೇ.೪೦ ಕಮಿಷನ್ ಸರಕಾರದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಅಕ್ರಮ ಮರಳುಗಾರಿಕೆ, ಕ್ರಷರ್, ಕ್ಲಬ್‌ಗಳಿಂದ ಅವರು ಹಣ ಮಾಡಿಕೊಂಡರೇ ಹೊರತು ಜನರ ಸಂರಕ್ಷಣೆಗೆ ಈ ಸರಕಾರ 
ಬಂದಿಲ್ಲ.  
ಈ ಬಾರಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಬಿಜೆಪಿ ಕೂಡ ಹೊಸ ಮುಖಗಳನ್ನು ಸ್ಪರ್ಧೆಗಿಳಿಸಿದೆ. ಆದರೆ ಆ ಹೊಸ ಮುಖಗಳು ಸರಿ ಇರಬೇಕಲ್ಲವೇ? ಯಾರದೋ ಮುಖವನ್ನು ತಂದು ಇಟ್ಟರೆ ಆಗುತ್ತದೆಯೇ? ಜನ ಒಪ್ಪುವ ಮುಖ ಇರಬೇಕಲ್ಲವೇ?

ಕ್ಷೇತ್ರದ ಜನತೆ ವಿನಯ ಕುಮಾರ್ ಸೊರಕೆಯವರಿಗೆ ಯಾಕೆ ಮತ ಹಾಕಬೇಕು? ಬಿಜೆಪಿಯ ಅಭ್ಯರ್ಥಿಗಿಂತ ನೀವು ಹೇಗೆ ಉತ್ತಮ ?
ನನ್ನ ಮೇಲೆ ಜನಪರ ಹೋರಾಟ ಮಾಡಿದಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಆದರೆ ಗುರ್ಮೆ ಸುರೇಶ್ ಶೆಟ್ಟಿ ವಿರುದ್ಧ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದಕ್ಕೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದು ಪ್ರಕರಣದ 
ವಾರೆಂಟ್‌ಗೆ ಅವರು ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ಅಲ್ಲದೆ ೪೨೦ ಪ್ರಕರಣಗಳು ಕೂಡ ಅವರ ಮೇಲಿದೆ. ನನಗೆ ಶಾಸಕನಾಗಿ, ಸಂಸದನಾಗಿ, ಮಂತ್ರಿಯಾಗಿ ಅನುಭವ ಇದೆ. ೧೦೦ಕ್ಕೆ ೧೦೦ ಈ ಬಾರಿ ಕಾಂಗ್ರೆಸ್ ಸರಕಾರ ಬರುತ್ತದೆ. ಶಾಸಕನಾಗಿ ಗೆದ್ದು ಬಂದರೆ ಸಚಿವ ಸಂಪುಟದಲ್ಲೂ ಅವಕಾಶ ಸಿಗುವ ಸಾಧ್ಯತೆ ಇದೆ.
ಗುರ್ಮೆ ಅವರ ಬಗ್ಗೆ ನನಗೆ ವೈಯಕ್ತಿಕ ಧ್ವೇಷ ಇಲ್ಲ. ಅವರು ನನ್ನ ಒಳ್ಳೆಯ ಸ್ನೇಹಿತರು. ಆದರೆ ಅವರು ಜಾತಿ ಆಧಾರದ ಮೇಲೆ ಹೋಗುವುದು ಸರಿಯಲ್ಲ. ಅಂತಹ ರಾಜಕೀಯ ನಮ್ಮ ಕ್ಷೇತ್ರದಲ್ಲಿ ಇರಲಿಲ್ಲ. ನಾವೆಲ್ಲ ಕೇವಲ ಪಕ್ಷದ ನೆಲೆಯಲ್ಲಿ ಚುನಾವಣೆ ಎದುರಿಸುತ್ತಿದ್ದೆವು. ಎಲ್ಲ ಧರ್ಮ, ಜಾತಿಯವರು ಕೂಡ ಪಕ್ಷದಲ್ಲಿ ಇರುತ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು.
ಕಳೆದ ವರ್ಷ ಕಾಪು ಮಾರಿಯಮ್ಮ ದೇವಸ್ಥಾನದಲ್ಲಿ ಬೇರೆ ಧರ್ಮದವರಿಗೆ ಅಂಗಡಿ ಇಡಲು ಅವಕಾಶ ಕೊಡಲಿಲ್ಲ. ಆಗ ದೇವಸ್ಥಾನದ ಕಾರ್ಯಾಧ್ಯಕ್ಷರಾಗಿದ್ದ ಗುರ್ಮೆ ಸುರೇಶ್ ಶೆಟ್ಟಿ ಒಂದು ಶಬ್ದ ಕೂಡ ಮಾತನಾಡಿಲ್ಲ. ಈ ದೇವಸ್ಥಾನಕ್ಕೆ ಬಹಳ ಹಿಂದಿನಿಂದ ಸೌಹಾರ್ದದ ಚರಿತ್ರೆ ಇದೆ. ಗುರ್ಮೆ ಅವರಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಎಷ್ಟು ತಿಳುವಳಿಕೆ ಇದೆ ಎಂಬುದು ನನಗೆ ಗೊತ್ತಿಲ್ಲ. ನಾನು ಶಾಸಕನಾಗಿದ್ದಾಗ ಚಾಲನೆ ಕೊಟ್ಟ ಅನೇಕ ಕಾರ್ಯಕ್ರಮಗಳನ್ನು ಮತ್ತೆ ಮುಂದುವರಿಸಿ ಕಾಪುವಿನ ಸಮಗ್ರ ಅಭಿವೃದ್ಧಿ ಮಾಡಬೇಕಾಗಿದೆ. ಅದಕ್ಕೆ ನನಗೆ ಒಂದು ಅವಕಾಶ ಕೊಡಿ ಎಂದು ಜನರಲ್ಲಿ ಕೇಳುತ್ತಿದ್ದೇನೆ.


ಸಂದರ್ಶನ: ಅವಿನಾಶ್ ಕಾಮತ್
ಬರಹ ರೂಪ: ನಝೀರ್ ಪೊಲ್ಯ

share
Next Story
X