ಉಪ್ಪಿನಂಗಡಿ: ರಿಕ್ಷಾ ಚಾಲಕನಿಗೆ ತಂಡದಿಂದ ಹಲ್ಲೆ; ಪ್ರಕರಣ ದಾಖಲು

ಉಪ್ಪಿನಂಗಡಿ: ರಿಕ್ಷಾ ಚಾಲಕನೋರ್ವನಿಗೆ ತಂಡವೊಂದು ಹಲ್ಲೆ ನಡೆಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಾಡಿ ಗ್ರಾಮದ ಪೇರಮಜಲು ನಿವಾಸಿ ವಿಶ್ವನಾಥ ಬಿ. ಎಂಬವರು ದೂರು ನೀಡಿದ್ದು, ತಾನು ಎ.27ರಂದು ಸಂಜೆ ರಿಕ್ಷಾಕ್ಕೆ ಪೆಟ್ರೋಲ್ ಹಾಕಲೆಂದು ಅಡ್ಡಹೊಳೆ ಕಡೆಗೆ ತೆರಳುತ್ತಿರುವ ಸಂದರ್ಭ ಅಡ್ಡ ಸೇತುವೆಯ ಬಳಿ ಹಿಂದಿನಿಂದ ಬಂದ ಬಂದ ಕಾರು ಓವರ್‍ಟೇಕ್ ಮಾಡುತ್ತಾ ತಾನು ಚಲಾಯಿಸುತ್ತಿದ್ದ ಅಟೋ ರಿಕ್ಷಾದ ತೀರಾ ಬದಿಗೆ ಬಂದಿದ್ದು, ಇದರಿಂದ ಗಲಿಬಿಲಿಗೊಂಡ ನಾನು ಅವರಿಗೆ ನೋಡಿಕೊಂಡು ಚಲಾಯಿಸುವಂತೆ ತಿಳಿಸಿದೆನು. ಬಳಿಕ ಶಿರಾಡಿ ಗ್ರಾಮದ ಅಡ್ಡಹೊಳೆ ಪೆಟ್ರೋಲ್ ಬಂಕ್ ಬಳಿ ತಾನು ತಲುಪುತ್ತಿದ್ದಂತೆಯೇ ತನ್ನ ಅಟೋ ರಿಕ್ಷಾಕ್ಕೆ ಅಡ್ಡವಾಗಿ ಕಾರನ್ನು ನಿಲ್ಲಿಸಿ ಕಾರಿನಿಂದ ಇಳಿದ 7-8 ಮಂದಿಯಿದ್ದ ತಂಡ ನನ್ನ ಮೇಲೆ ಹಲ್ಲೆ ನಡೆಸಿ, ನನಗೆ ಜೀವ ಬೆದರಿಕೆಯೊಡ್ಡಿ, ಪರಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





