ಯುವಿಸಿಇ ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ತೆರವುಗೊಳಿಸುವಂತೆ ಬೆಂ.ವಿವಿ ಆದೇಶ

ಬೆಂಗಳೂರು, ಎ.28: ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿವಿ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆದ ಯುವಿಸಿಇ ನ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಹಾಸ್ಟೆಲ್‍ಗಳಿಂದ ಕೂಡಲೇ ತೆರೆವು ಗೊಳಿಸುವಂತೆ ಬೆಂಗಳೂರು ವಿಶ್ವ ವಿದ್ಯಾಲಯವು ಆದೇಶ ಹೊರಡಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಅವರಣದಲ್ಲಿರುವ ಸಿವಿಲ್ ಇಂಜಿನಿಯರಿಂಗ್ ಹಾಸ್ಟೆಲ್, ಮಹಿಳಾ ಹಾಸ್ಟೆಲ್ ಮತ್ತು ಪುರುಷರ ಹಾಸ್ಟೆಲ್‍ಗಳಿಂದ ಯುವಿಸಿಇ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮೇ 1ರಿಂದ ತೆರವುಗೊಳಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಯುವಿಸಿಇ ಸಂಸ್ಥೆಯು ಬೆಂಗಳೂರು ವಿವಿಯಿಂದ ವಿಭಜನೆಯಾದ ಕಾರಣ ಅದು ಹೊಸ ವಿಶ್ವವಿದ್ಯಾಲಯವಾಗಿದೆ. ಹಾಗಾಗಿ ಈ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸರಕಾರದಿಂದ ಬೆಂಗಳೂರು ವಿವಿ ಯಾವುದೇ ಅನುದಾನ ಬಿಡುಗಡೆಯಾಗುವುದಿಲ್ಲ. ಅಲ್ಲಿ ಅಧ್ಯಯನ ಮಾಡುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೆಂಗಳೂರು ವಿವಿ ಹಾಸ್ಟೆಲ್‍ನಲ್ಲಿ ಅವಕಾಶ ಕೊಡಲಾಗುವುದಿಲ್ಲ ಎಂದು ತಿಳಿಸಿದೆ.
Next Story