ಪ್ರೀಮಿಯರ್ ಗ್ಲೋಬಲ್ ರೇಸ್: 2ನೇ ಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಅಭಿಲಾಷ್

ತಿರುವನಂತಪುರ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್ ಅಭಿಲಾಷ್ ಟೋಮಿ ಅವರು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ರೇಸ್ ಅನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೆಪ್ಟೆಂಬರ್ 4, 2022 ರಂದು ಫ್ರಾನ್ಸ್‌ನ ಲೆಸ್ ಸೇಬಲ್ಸ್-ಡಿ'ಒಲೋನ್‌ನಿಂದ ಆರಂಭವಾದ ವಿಶ್ವದಾದ್ಯಂತ ಏಕವ್ಯಕ್ತಿ ನೌಕಾಯಾನ ರೇಸ್‌ನಲ್ಲಿ ಅಭಿಲಾಷ್ ಅವರು ಎರಡನೇ ಸ್ಥಾನ ಪಡೆದರು.
ಗೋಲ್ಡನ್ ಗ್ಲೋಬ್ ರೇಸ್ ಅನ್ನು ವಿಶ್ವದ ಅತ್ಯಂತ ಕಠಿಣ ನೌಕಾಯಾನ ರೇಸ್ ಎಂದು ಪರಿಗಣಿಸಲಾಗಿದೆ.
''ಭಾರತದ ಅಭಿಲಾಷ್ ಟೋಮಿ (43) ಪ್ರಪಂಚದಾದ್ಯಂತ ಏಕವ್ಯಕ್ತಿ ರೇಸ್ ಅನ್ನು 2ನೇ ಸ್ಥಾನದೊಂದಿಗೆ ಮುಗಿಸಿದ್ದಾರೆ" ಎಂದು ಓಟದ ಅಧಿಕೃತ ಪುಟದಲ್ಲಿ ಪ್ರಕಟಣೆ ತಿಳಿಸಿದೆ.
Next Story





