ಸಂಸದ/ಎಂಎಲ್ಎ ನ್ಯಾಯಾಲಯದಿಂದ ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ದೋಷಿ: 10 ವರ್ಷಗಳ ಜೈಲು ಶಿಕ್ಷೆ
ಗ್ಯಾಂಗ್ ಸ್ಟರ್ ಆ್ಯಕ್ಟ್ ಪ್ರಕರಣ

ಗ್ಯಾಂಗ್ ಸ್ಟರ್ ಆ್ಯಕ್ಟ್ ಪ್ರಕರಣ
ಹೊಸದಿಲ್ಲಿ: ಗ್ಯಾಂಗ್ ಸ್ಟರ್-ರಾಜಕಾರಣಿ, ಮುಖ್ತಾರ್ ಅನ್ಸಾರಿಯನ್ನು ಗ್ಯಾಂಗ್‌ಸ್ಟರ್ ಆ್ಯಕ್ಟ್ ಪ್ರಕರಣದಲ್ಲಿ ಉತ್ತರಪ್ರದೇಶದ ಘಾಜಿಪುರದ ಸಂಸದ/ಎಂಎಲ್‌ಎ ನ್ಯಾಯಾಲಯ ಶನಿವಾರ ದೋಷಿ ಎಂದು ಘೋಷಿಸಿದ್ದು, ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡವನ್ನೂ ವಿಧಿಸಿದೆ ಎಂದು Live Law ವರದಿ ಮಾಡಿದೆ.
2005ರ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಅಪಹರಣ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶದ ಘಾಜಿಪುರದ ಸಂಸದ/ಶಾಸಕ ನ್ಯಾಯಾಲಯ ಶನಿವಾರ ದೋಷಿ ಎಂದು ತೀರ್ಪು ನೀಡಿದೆ.
ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ತಾರ್ ಅನ್ಸಾರಿಯ ಹಿರಿಯ ಸಹೋದರ ಹಾಗೂ ಬಿಎಸ್‌ಪಿ ಸಂಸದ ಅಫ್ಜಲ್ ಅನ್ಸಾರಿ ಮೇಲಿನ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ. ಅನ್ಸಾರಿ ಸಹೋದರರ ವಿರುದ್ಧ 2007ರಲ್ಲಿ ಗ್ಯಾಂಗ್ ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
Next Story





