ಪುತ್ತೂರು: ಚೈತ್ರಾ ಇಲೆಕ್ಟ್ರಾನಿಕ್ಸ್ ಅಂಗಡಿ ಮಾಲಕ ಆತ್ಮಹತ್ಯೆ

ಪುತ್ತೂರು: ನಗರದ ದರ್ಬೆಯಲ್ಲಿರುವ ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಅಕ್ಸಸರೀಸ್ ಶಾಪ್‍ನ ಮಾಲಕ ರಮೇಶ್ ಕೆ.ವಿ (49) ಶನಿವಾರ ಬೆಳಗ್ಗೆ ತನ್ನ ಶಾಪ್‍ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರಮೇಶ್ ಅವರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾದ್ದು, ಪುತ್ತೂರಿನ ಜೇಸಿ ಸಂಸ್ಥೆ, ಲಿಟ್ಲ್ ಫ್ಲವರ್ ಸ್ಕೂಲ್, ಸಂತ ವಿಕ್ಟರ್ ಸ್ಕೂಲ್ ಗಳಲ್ಲಿ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
Next Story





