ಸಾದೃಶ್ಯ ಚಿತ್ರಕಲಾ ಪ್ರದರ್ಶನ-ತ್ರಿವರ್ಣ ಕಲಾ ತರಗತಿ ಉದ್ಘಾಟನೆ

ಕಾರ್ಕಳ: ಬೈಲೂರಿನಲ್ಲಿ ನಡೆಯುತ್ತಿರುವ ತ್ರಿವರ್ಣ ಚಿತ್ರಕಲಾ ತರಗತಿ ಮತ್ತು ಸಾದೃಶ್ಯ ಚಿತ್ರಕಲಾ ಪ್ರದರ್ಶನವನ್ನು ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ನಿರ್ದೇಶಕ ಯು.ಸಿ.ನಿರಂಜನ್ ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆ ಗಳಿಗೆ ಚಿತ್ರಕಲಾ ಕ್ಷೇತ್ರದ ಅವಶ್ಯಕತೆ ಅತ್ಯಗತ್ಯ. ಇಂತಹ ಕಲಿಕೆಗೆ ಪೂರಕವಾಗಿ ಹಿರಿಯರು ಕಿರಿಯರೆನ್ನದೇ ಈ ಕ್ಷೇತ್ರದ ಅಳವಡಿಕೆಗೆ ತ್ರಿವರ್ಣ ಕಲಾ ಸಂಸ್ಥೆ ಬದ್ಧವಾಗಿದ್ದು, ೭೫ ವರ್ಷದವರೆಗಿನ ವಿದ್ಯಾರ್ಥಿಯರ ಸಾದೃಶ್ಯ ಎಂಬ ಚಿತ್ರಕಲಾ ಪ್ರದರ್ಶನ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಹಿರಿಯ ಸಾಮಾಜ ಸೇವಕ ವಿಕ್ರಂ ಹೆಗ್ಡೆ, ಚಲನಚಿತ್ರ ನಟ, ನಾಟಕ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು, ಬೈಲೂರು ಕೌಡೂರಿನ ಗ್ರಾಪಂ ಅಧ್ಯಕ್ಷ ಜಗದೀಶ್ ಪೂಜಾರಿ, ನೀರೆ ಬೈಲೂರು ಗ್ರಾಪಂ ಅಧ್ಯಕ್ಷ ಶಾಲಿನಿ ರವೀಂದ್ರ ಸುವರ್ಣ, ಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಜಾತ ಶೆಟ್ಟಿ, ಕಲಾ ಕೇಂದ್ರದ ಮುಖ್ಯಸ್ಥ ಹರೀಶ್ ಸಾಗಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಗ್ನ್ಯಾ ಆರ್.ಕೆ. ಮತ್ತು ದೇವಾಂಗಣ ಎನ್.ಆರ್. ಪ್ರಾರ್ಥಿಸಿದರು. ಕಲಾವಿದ ಹರೀಶ್ ಸಾಗಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜ್ವಲ್ ನಿಟ್ಟೆ ವಂದಿಸಿದರು. ಚೇತನಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ತ್ರಿವರ್ಣ ಕಲಾ ಕೇಂದ್ರ ಮಣಿಪಾಲ, ಕುಂದಾಪುರ, ಆನ್‌ಲೈನ್ ತರಗತಿಯಲ್ಲಿ ಅಧ್ಯಯನಗೈಯಲಿರುವ ೧೯ ರಿಂದ ೭೫ ವಯೋಮಿತಿಯ ಪ್ರತಿಭಾನ್ವಿತ ಆಯ್ದ ೬೩ ವಿದ್ಯಾರ್ಥಿ ಕಲಾವಿದರ ೬೩ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿದೆ.
Next Story





