ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷರಾಗಿ ಸೈಯದ್ ಸಾದತುಲ್ಲಾ ಹುಸೇನಿ ಪುನರಾಯ್ಕೆ

ಹೊಸದಿಲ್ಲಿ: ಜಮಾಅತೆ ಇಸ್ಲಾಮಿ ಹಿಂದ್ ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸೈಯದ್ ಸಾದತುಲ್ಲಾ ಹುಸೇನಿ ಪುನರಾಯ್ಕೆ ಅಗಿದ್ದಾರೆ. ಆಯ್ಕೆ ಪ್ರಕ್ರಿಯೆಯು ಹೊಸದಿಲ್ಲಿಯಲ್ಲಿ ನಡೆಯಿತು. ಎಪ್ರಿಲ್ 27 ರಂದು ಜಮಾಅತ್ ಪ್ರಧಾನ ಕಛೇರಿಯಲ್ಲಿ ನಡೆದ ಮರ್ಕಝಿ ಮಜ್ಲಿಸ್-ಇ ನುಮಾಯಿಂದಗಾನ್ (ಪ್ರತಿನಿಧಿಗಳ ಕೌನ್ಸಿಲ್) ನಲ್ಲಿ ಒಟ್ಟು 162 ಸದಸ್ಯರು ಭಾಗವಹಿಸಿದ್ದರು.
ಜಮಾಅತ್ ನ ಸಂವಿಧಾನದಂತೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಮೊದಲು ಚರ್ಚೆ ಹಾಗೂ ಸಮಾಲೋಚನೆಗಳನ್ನು ನಡೆಸಲಾಯಿತು.
ಮೂಲತಃ ಮಹಾರಾಷ್ಟ್ರದ ನಾಂದೇಡ್‌ನವರಾದ ಅವರು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಸಂಸ್ಥೆಯ ವಿದ್ಯಾರ್ಥಿ ವಿಭಾಗ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (SIO) ಆಫ್ ಇಂಡಿಯಾದ ಅಧ್ಯಕ್ಷರೂ ಆಗಿದ್ದರು.
ಇಸ್ಲಾಂಮೀ ಆಂದೋಲನಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳು ಮತ್ತು ಶೈಕ್ಷಣಿಕ ಪ್ರಬಂಧಗಳನ್ನು ಬರೆದಿರುವ ಸಾದತುಲ್ಲಾ ಹುಸೇನಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯುನಿಕೇಶನ್ ನಲ್ಲಿ ಪದವಿ ಪಡೆದಿದ್ದಾರೆ.
2023 ರಿಂದ 2027 ರ ಅವಧಿಗೆ ಜಮಾಅತೆ ಇಸ್ಲಾಮಿ ಹಿಂದ್‌ನ ಕೇಂದ್ರ ಸಲಹಾ ಮಂಡಳಿಯ ಸದಸ್ಯರಾಗಿ ಟಿ. ಆರಿಫ್ ಅಲಿ-ಕೇರಳ, ಮುಹಮ್ಮದ್ ಸಲೀಮ್ ಇಂಜಿನಿಯರ್ -ರಾಜಸ್ಥಾನ, ಮುಹಮ್ಮದ್ ಜಾಫರ್ - ದಿಲ್ಲಿ, ಡಾ. ಸೈಯದ್ ಖಾಸಿಂ ರಸೂಲ್ ಇಲ್ಯಾಸ್ - ದಿಲ್ಲಿ, ಮೌಲಾನಾ ಮುಹಮ್ಮದ್ ರಝಿ-ಉಲ್-ಇಸ್ಲಾಂ ನದ್ವಿ- ದಿಲ್ಲಿ, ಎಸ್. ಅಮಿನುಲ್ ಹಸನ್ - ಕರ್ನಾಟಕ, ಮಲಿಕ್ ಮುತಾಸಿಮ್ ಖಾನ್ - ತೆಲಂಗಾಣ, ಡಾ.ಹಸನ್ ರಝಾ - ಜಾರ್ಖಂಡ್, ಮುಜ್ತಬ ಫಾರೂಕ್ - ಮಹಾರಾಷ್ಟ್ರ, ಮೌಲಾನಾ ವಲಿಯುಲ್ಲಾ ಸಯೀದಿ ಫಲಾಹಿ - ಉತ್ತರ ಪ್ರದೇಶ (ಪೂರ್ವ), ಮುಹಮ್ಮದ್ ಅಬ್ದುಲ್ ಜಬ್ಬಾರ್ ಸಿದ್ದಿಕಿ - ತೆಲಂಗಾಣ, ಡಾ. ಸಲೀಂ ಖಾನ್ - ಮಹಾರಾಷ್ಟ್ರ ರಹಮತುನ್ನಿಸಾ- ಕೇರಳ, ಮುಹಮ್ಮದ್ ಇಕ್ಬಾಲ್ ಮುಲ್ಲಾ - ಕರ್ನಾಟಕ, ಅತಿಯಾ ಸಿದ್ದಿಖ - ತೆಲಂಗಾಣ, ಮೌಲಾನಾ ಮುಹಿಯುದ್ದೀನ್ ಘಾಜಿ - ಉತ್ತರ ಪ್ರದೇಶ (ಪೂರ್ವ), MI ಅಬ್ದುಲ್ ಅಝೀಝ್ - ಕೇರಳ, ಅಬ್ದುಲ್ ಸಲಾಂ ಎಂ. - ಕೇರಳ, ಶಬ್ಬೀರ್ ಆಲಂ ಖಾನ್ - ಬಿಹಾರ, ಡಾ. ಮಲಿಕ್ ಫೈಸಲ್ ಫಲಾಹಿ - ಉತ್ತರ ಪ್ರದೇಶ (ಪೂರ್ವ), ಇಜಾಝ್ ಅಹಮದ್ ಅಸ್ಲಂ - ತಮಿಳುನಾಡು, ಡಾ.ಫಹೀಮುದ್ದೀನ್ ಅಹ್ಮದ್ - ಉತ್ತರ ಪ್ರದೇಶ (ಪಶ್ಚಿಮ), ಡಾ. ಮುಹಮ್ಮದ್ ತಾಹಾ ಮತೀನ್ - ಕರ್ನಾಟಕ ಆಯ್ಕೆಯಾಗಿದ್ದಾರೆ.







