ಮೌಲಾನಾ ಅಝಾದ್ ಮಾದರಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಉಡುಪಿ, ಎ.29: ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯ ನಿರ್ವಹಿಸುತ್ತಿ ರುವ ಕಾರ್ಕಳ ಮತ್ತು ಕಾಪುನ ಮೌಲಾನಾ ಆಝಾದ್(ಆಂಗ್ಲ ಮಾಧ್ಯಮ) ಮಾದರಿ ಶಾಲೆಗಳಲ್ಲಿ 6, 7 ಮತ್ತು 8ನೇ ತರಗತಿಯ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಅಜಾದ್ ಭವನ, ಪಶು ಚಿಕಿತ್ಸಾಲಯದ ಹತ್ತಿರ, ಅಲೆವೂರು ರಸ್ತೆ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2573596, ಮುಖ್ಯೋಪಾಧ್ಯಾಯರು, ಮೌಲಾನಾ ಆಝಾದ್ ಮಾದರಿ ಶಾಲೆ, ಕಾರ್ಕಳ ದೂರವಾಣಿ ಸಂಖ್ಯೆ: 8762434245, ತಾಲೂಕು ವಿಸ್ತರಣಾಧಿಕಾರಿಗಳು, ಉಡುಪಿ ದೂರವಾಣಿ ಸಂಖ್ಯೆ: 8762388543 ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮಿನಿ ವಿಧಾನಸೌಧ, ತಾಲೂಕು ಆಫೀಸ್ ಕಂಪೌಂಡ್, ಕಾರ್ಕಳ ದೂ.ಸಂಖ್ಯೆ:08258-231101ನ್ನು ಸಂಪರ್ಕಿಸಬಹುದು ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.