ಮತದಾನ ಜಾಗೃತಿಯ ಸಾಕ್ಷ್ಯಚಿತ್ರದಲ್ಲಿ ಅಂಬಾಗಿಲಿನ ಶತಾಯುಷಿ ಅಜ್ಜಿ!

ಉಡುಪಿ, ಎ.29: ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಅಂಚೆ ಮತದಾನದ ಅವಕಾಶ ವನ್ನು ಕಲ್ಪಿಸಿಕೊಡಲಾಗಿದ್ದು, ಮತದಾನ ಅಧಿಕಾರಿಗಳ ತಂಡವು ಮತದಾರರ ಮನೆಗಳಿಗೆ ತೆರಳಿ ಹಿರಿಯ ನಾಗರಿಕ ಮತದಾರಿಗೆ ಅಂಚೆ ಮತ ಪತ್ರವನ್ನು ನೀಡಿ ಮತದಾನ ನಡೆಸುವ ಪ್ರಕ್ರಿಯೆಯ ಕುರಿತು ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯು ಸಾಕ್ಷ್ಯಚಿತ್ರವನ್ನು ಸಿದ್ದಪಡಿಸಿದೆ.
ಅಂಬಾಗಿಲು ನಿವಾಸಿ ಶತಾಯುಷಿ ಕಲ್ಯಾಣಿ ಪ್ರಭು ತುಂಬು ಸ್ಪೂರ್ತಿಯಿಂದ ಈ ಸಾಕ್ಷ್ಯಚಿತ್ರದಲ್ಲಿ ಪಾಲ್ಗೊಂಡಿ ದ್ದಾರೆ. ಜಿಲ್ಲಾಧಿಕಾರಿ ಕೂರ್ಮರಾವ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮಾರ್ಗದರ್ಶನದಲ್ಲಿ ಸಿದ್ದಗೊಂಡಿರುವ ಈ ಸಾಕ್ಷ್ಯಚಿತ್ರದ ನಿರ್ದೇಶನವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಮಾಡಿದ್ದಾರೆ.
ಡಯಟ್ ಉಪಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಪರೀಕ್ಷಾರ್ಥಿ ತಹಸಿಲ್ದಾರ್ ನೀಲಾಬಾಯಿ ಲಮಾಣಿ ಮತ್ತು ಮಹೇಶ್ ಗಸ್ತೆ, ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುಧೀರ್ ಪ್ರಭು, ಪೋಲಿಸ್ ಸಹಾಯಕ ಉಪನಿರೀಕ್ಷಕ ನಾರಾಯಣ ಸಾಕ್ಷ್ಯಚಿತ್ರದಲ್ಲಿ ಭಾಗವಹಿಸಿದ್ದಾರೆ. ಚಿತ್ರೀಕರಣವನ್ನು ಎಚ್.ಕೆ. ಸ್ಟುಡಿಯೋದ ಹರೀಶ್ ನಿರ್ವಹಿಸಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್‌ನ ಯುಟ್ಯೂಬ್ ಚಾನೆಲ್‌ನಲ್ಲಿ ಈ ಸಾಕ್ಷ ಚಿತ್ರವು ವೀಕ್ಷಣೆಗೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.