ಆಪರೇಶನ್ ಕಾವೇರಿ: ಸುಡಾನ್‌ನಿಂದ 231 ಭಾರತೀಯರಿದ್ದ ಇನ್ನೊಂದು ವಿಮಾನ ಹೊಸದಿಲ್ಲಿಗೆ ಆಗಮನ

ಹೊಸದಿಲ್ಲಿ,ಎ.29: ಅಂತರ್ಯುದ್ಧದಿಂದ ತತ್ತರಿಸಿರುವ ಸುಡಾನ್ನಿಂದ 231 ಭಾರತೀಯ ಪ್ರಯಾಣಿಕರನ್ನು ಹೊತ್ತಿದ್ದ ಇನ್ನೊಂದು ವಿಮಾನವು ಶನಿವಾರ ಹೊಸದಿಲ್ಲಿಯಲ್ಲಿ ಬಂದಿಳಿದಿದೆ.
ಸುಡಾನ್ ನಿಂದ ತೆರವುಗೊಳಿಸಲಾದ ಭಾರತೀಯರು ‘ಭಾರತ್ ಮಾತಾ ಕಿ ಜೈ’ ಹಾಗೂ ‘ವಂದೇ ಮಾತರಂ’ನಂತಹ ಘೋಷಣೆಗಳನ್ನು ಕೂಗಿದರು. ಆಪರೇಷನ್ ಕಾವೇರಿ ಮೂಲಕ ತಮ್ಮನ್ನು ರಕ್ಷಣೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್ ಅವರನ್ನು ಅಭಿನಂದಿಸಿದರು.
ಸುಡಾನ್ ನ ವಾದಿ ಸೈದ್ ನದಲ್ಲಿರುವ ಏರ್‌ಫೀಲ್ಡ್ ನಲ್ಲಿ ವಿಮಾನಸಂಚಾರ ನಿರ್ದೇಶನ ವ್ಯವಸ್ಥೆ, ಇಂಧನದ ಅಲಭ್ಯತೆ ಮತ್ತು ವಿಮಾನವು ರಾತ್ರಿ ಹೊತ್ತು ಇಳಿಯಲು ಬೇಕಾದ ಸೂಕ್ತ ದೀಪದಬೆಳಕಿನ ವ್ಯವಸ್ಥೆಯಿಲ್ಲದ ಹೊರತಾಗಿಯೂ ಅಲ್ಲಿ ಭಾರತೀಯ ವಾಯುಪಡೆ ಹಾಗೂ ಗರುಡ ಕಮಾಂಡೊಗಳು ನಡುರಾತ್ರಿಯಲ್ಲಿ ಭಾರತೀಯರ ಏರ್ಲಿಫ್ಟ್ ಅನ್ನು ಯಶಸ್ವಿಯಾಗಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
Next Story





