ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಚುನಾವಣಾಪೂರ್ವ ಪ್ರಗತಿ ಸಮೀಕ್ಷೆ

ಉಡುಪಿ, ಎ.29: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ಚುನಾವಣಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ ಕೊಡವೂರು ಮಾತನಾಡಿ ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸಿಗೆ ಪೂರಕವಾದ ವಾತಾವರಣವಿದ್ದು ವಿವಿಧ ವಾರ್ಡುಗಳಲ್ಲಿ ಇರುವ ಕೆಲವು ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಹೋಗುವುದು ಅತಿ ಮುಖ್ಯ ಎಂದರು.
ಕೇರಳ ಲೋಕಸಭಾ ಸದಸ್ಯ ಹಾಗೂ ಉಸ್ತುವಾರಿ ಟಿ.ಎನ್.ಪ್ರತಾಪನ್ ಮಾತನಾಡಿ ಕಾಂಗ್ರೆಸಿನ ಗ್ಯಾರಂಟಿ ಕಾರ್ಡ್‌ನ ವಿತರಣೆಯು ಸಮರ್ಪಕವಾಗಿ ನಡೆಯುವಂತೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಬೇಕು. ಮತದಾರ ರಿಗೆ ಪಕ್ಷ ನೀಡುವ ಈ ಸೌಲಭ್ಯಗಳನ್ನು ಮನವರಿಕೆ ಮಾಡಿದಲ್ಲಿ ಮತಗಳಿಸಲು ಪೂರಕ ವಾತಾವರಣ ಕಲ್ಪಿಸಿದಂತಾ ಗುವುದು ಎಂದರು.
ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗ ಉಸ್ತುವಾರಿಗಳಾದ ರೋಜಿ ಜಾನ್ ಮಾರ್ಗದರ್ಶನ ನೀಡಿದರು. ಮುಂದಿನ ದಿನಗಳಲ್ಲಿ ಪ್ರಚಾರ ಕ್ಕಾಗಿ ಪ್ರಿಯಾಂಕ ಗಾಂಧಿ ಅವರನ್ನು ಜಿಲ್ಲೆಗೆ ಕರೆತರುವಂತೆ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಕಾರ್ಯಕರ್ತರು ಪ್ರಥಮ ಹಂತದ ಮನೆಮನೆ ಪ್ರಚಾರವನ್ನು ಸಂಪೂರ್ಣ ಗೊಳಿಸುವಂತೆ ನಿಗಾವಹಿಸಲು ಹಾಗೂ ಪ್ರತೀ ಕ್ಷೇತ್ರಗಳಲ್ಲಿಯೂ ಗ್ಯಾರಂಟಿ ಕಾರ್ಡ್ ಸಮರ್ಪಕವಾಗಿ ವಿತರಣೆ ನಡೆಯುತ್ತಿರುವ ಬಗ್ಗೆ ಪರಿಶೀಲಿಸಲು ಉಸ್ತುವಾರಿಗಳನ್ನು ಕಳುಹಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರು ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಪಕ್ಷದ ಮುಖಂಡ ಎಂ.ಎ.ಗಪೂರ್, ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೆರೋನಿಕೋ ಕರ್ನೇಲಿಯೋ, ಪ್ರಖ್ಯಾತ ಶೆಟ್ಟಿ, ಅಣ್ಣಯ್ಯ ಸೇರಿಗಾರ್, ಹರೀಶ್ ಕಿಣಿ, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ಕುಶಲ್ ಶೆಟ್ಟ್ವಿ, ಅಮೃತ್ ಶೆಣೈ, ಪ್ರಶಾಂತ ಜತ್ತನ್ನ, ಜಯಕುಮಾರ್, ದಿನಕರ ಹೇರೂರು, ರೋಶನಿ ಒಲಿವರಾ, ವಿಶ್ವಾಸ್ ಅಮೀನ್, ಮಾಹಬಲ ಕುಂದರ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ವಂದಿಸಿದರು.







