ಮಾವಿನ ಮರದಿಂದ ಬಿದ್ದು ಯುವಕ ಸ್ಥಳದಲ್ಲೇ ಮೃತ್ಯು

ಉಳ್ಳಾಲ: ಹಣ್ಣು ಕೀಳಲೆಂದು ಮಾವಿನ ಮರವೇರಿದ್ದ ವ್ಯಕ್ತಿಯೋರ್ವರು ಬಿದ್ದು ಸ್ಥಳದಲ್ಲೇ ಮೃತ ಪಟ್ಟ ಘಟನೆ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿಯ ಬೀಚ್ ರಸ್ತೆಯಲ್ಲಿ ಇಂದು ಸಂಜೆ ನಡೆದಿದೆ.
ಉಳ್ಳಾಲ ಮೊಗವೀರ ಪಟ್ಣ ನಿವಾಸಿ ನಿತಿನ್ ಸುವರ್ಣ (37) ಮೃತರು ಎಂದು ಗುರುತಿಸಲಾಗಿದೆ.
ವಿವಾಹಿತರಾಗಿರುವ ನಿತಿನ್ ಅವರು ಇಂದು ಸಂಜೆ ಅಬ್ಬಕ್ಕ ವೃತ್ತದ ಬೀಚ್ ರಸ್ತೆ ಬದಿಯಲ್ಲಿದ್ದ ಮಾವಿನ ಮರ ಏರಿ ಹಣ್ಣು ಕೀಳುತ್ತಿದ್ದರೆನ್ನಲಾಗಿದೆ. ಈ ವೇಳೆ ನಿತಿನ್ ಆಯ ತಪ್ಪಿ ಬಿದ್ದಿದ್ದು ತಲೆಗೆ ಕಲ್ಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story





