ಸುಡಾನ್ ನಲ್ಲಿ ಮುಂದುವರಿದ ಘರ್ಷಣೆ

ಖಾರ್ಟಮ್, ಎ.29: ಕದನ ವಿರಾಮ ವಿಸ್ತರಿಸಲು ಸೇನಾ ಪಡೆ ಮತ್ತು ಅರೆಸೇನಾ ಪಡೆ ಸಮ್ಮತಿಸಿದ್ದರೂ ಸುಡಾನ್ನಲ್ಲಿ ಘರ್ಷಣೆ ಯಥಾಪ್ರಕಾರ ಮುಂದುವರಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜಧಾನಿ ಖಾರ್ಟಮ್ನಲ್ಲಿ ಗುಂಡಿನ ಸದ್ದು ನಿರಂತರವಾಗಿ ಮೊಳಗುತ್ತಿದ್ದು ಹಲವೆಡೆ ಬೆಂಕಿ ಆವರಿಸಿಕೊಂಡಿದೆ. ದೇಶದಾದ್ಯಂತ ನೀರು, ವಿದ್ಯುತ್ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸುಡಾನ್ ವಾಯುಕ್ಷೇತ್ರದಲ್ಲಿ ಹಾರುತ್ತಿದ್ದ ತನ್ನ ಸಾರಿಗೆ ವಿಮಾನದತ್ತ ಗುಂಡು ಹಾರಿಸಲಾಗಿದೆ ಎಂದು ಟರ್ಕಿಯ ರಕ್ಷಣಾ ಇಲಾಖೆ ಹೇಳಿದೆ.
Next Story