ಬೆಂಗಳೂರು ದಕ್ಷಿಣ ಕ್ಷೇತ್ರ: 7 ಕೋಟಿ ರೂ.ಜಪ್ತಿ ವರದಿಗೆ ಜಿಲ್ಲಾಧಿಕಾರಿ ಸ್ಪಷ್ಟನೆ

ಬೆಂಗಳೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಾಂಕ ಎ.17ರ ತಡರಾತ್ರಿ ಸುಮಾರು 7ಕೋಟಿ ರೂ. ಹಣ ಜಪ್ತಿಯಾಗಿರುವ ಬಗ್ಗೆ ಖಾಸಗಿ ಸುದ್ದಿವಾಹಿನಿಯಲ್ಲಿ ವರದಿಯಾಗಿದ್ದು, ಅಂತಹ ಯಾವುದೇ ಘಟನೆ ವರದಿಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ದಯಾನಂದ್ ಸ್ಪಷ್ಟಣೆ ನೀಡಿದ್ದಾರೆ.
ಈ ಸಂಬಂಧ ಚುನಾವಣಾ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರಿಂದ ವರದಿ ಪಡೆದಿದ್ದು, ಖಾಸಗಿ ಸುದ್ದಿವಾಹಿನಿ ಸಂಪಾದಕರಿಗೆ ಪತ್ರ ಬರೆಯಲಾಗಿದ್ದು, ಹೆಚ್ಚಿನ ವಿವರಗಳು ಹಾಗೂ ಸಾಕ್ಷ್ಯಾಧಾರಗಳನ್ನು ಸಲ್ಲಿಸದೆ ಇರುವುದರಿಂದ ಈ ವಾಹಿನಿಯಲ್ಲಿ ಪ್ರಸಾರವಾಗಿದ್ದ, ಸುದ್ದಿ ತುಣುಕು ಸತ್ಯಕ್ಕೆ ದೂರವಾಗಿದ್ದು, ನಿರಾಧಾರಿತ ‘ಸುಳ್ಳು ಸುದ್ದಿ’ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಜಿಲ್ಲಾ ಅಪರ ಚುನಾವಣಾಧಿಕಾರಿ ಹಾಗೂ ನಗರ ಜಿಲ್ಲಾಧಿಕಾರಿ ದಯಾನಂದ ತಿಳಿಸಿದ್ದಾರೆ.
Next Story