100ನೇ ಸಂಚಿಕೆ ಪೂರೈಸಿದ ಪ್ರಧಾನಿ ಮೋದಿ ಅವರ 'ಮನ್ ಕಿ ಬಾತ್' ಮಾಸಿಕ ರೇಡಿಯೊ ಕಾರ್ಯಕ್ರಮ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ(Prime Minister Narendra Modi) ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ರವಿವಾರ ತನ್ನ 100 ನೇ ಸಂಚಿಕೆಯನ್ನು ಪೂರೈಸಿದೆ.
ಈ ಸಂಚಿಕೆಯನ್ನು ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನೇರ ಪ್ರಸಾರ ಮಾಡಲಾಗಿದ್ದು, ಈ ಮೈಲಿಗಲ್ಲು "ಐತಿಹಾಸಿಕ" ಎಂದು ಪರಿಗಣಿಸಲಾಗಿದೆ.
"ಮನ್ ಕಿ ಬಾತ್" ಕೂಡ ದೇಶವಾಸಿಗಳ ಒಳ್ಳೆಯತನ ಹಾಗೂ ಸಕಾರಾತ್ಮಕತೆಯ ವಿಶಿಷ್ಟ ಹಬ್ಬವಾಗಿದೆ. ಪ್ರತಿ ತಿಂಗಳು ಬರುವ ಹಬ್ಬ, ನಾವೆಲ್ಲರೂ ಹೆಚ್ಚು ನಿರೀಕ್ಷಿಸುತ್ತೇವೆ. ನಾವು ಇದರಲ್ಲಿ ಸಕಾರಾತ್ಮಕತೆಯನ್ನು ಇದರಲ್ಲಿ ಜನರ ಭಾಗವಹಿಸುವಿಕೆಯನ್ನು ಆಚರಿಸುತ್ತೇವೆ. ಮನ್ ಕಿ ಬಾತ್ ಕೋಟ್ಯಂತರ ಭಾರತೀಯರ 'ಮನ್ ಕಿ ಬಾತ್', ಇದು ಅವರ ಭಾವನೆಗಳ ಅಭಿವ್ಯಕ್ತಿಯಾಗಿದೆ'' ಎಂದು ಮೋದಿ ಹೇಳಿದ್ದಾರೆ.
"ಅಕ್ಟೋಬರ್ 3, 2014 ರ ವಿಜಯ ದಶಮಿಯ ಹಬ್ಬ. ನಾವೆಲ್ಲರೂ ಒಟ್ಟಾಗಿ ವಿಜಯ ದಶಮಿಯ ದಿನದಂದು 'ಮನ್ ಕಿ ಬಾತ್' ಪ್ರಯಾಣವನ್ನು ಆರಂಭಿಸಿದ್ದೇವೆ. ವಿಜಯ ದಶಮಿಯು ಕೆಡುಕಿನ ಮೇಲೆ ಒಳಿತಿನ ವಿಜಯದ ಹಬ್ಬವಾಗಿದೆ.
ಬೇಟಿ ಬಚಾವೋ ಬೇಟಿ ಪಢಾವೋ, ಅಥವಾ ಸ್ವಚ್ಛ ಭಾರತ್ ಆಂದೋಲನ, ಖಾದಿ ಅಥವಾ ಪ್ರಕೃತಿಯ ಮೇಲಿನ ಪ್ರೀತಿ, ಆಝಾದಿ ಕಾ ಅಮೃತ್ ಮಹೋತ್ಸವ ಅಥವಾ ಅಮೃತ ಸರೋವರ, 'ಮನ್ ಕಿ ಬಾತ್' ಸಂಬಂಧ ಹೊಂದಿರುವ ಯಾವುದೇ ವಿಷಯವು ಸಾಮೂಹಿಕ ಚಳುವಳಿಯಾಗಿ ಮಾರ್ಪಟ್ಟಿದೆ ಎಂದು ಮೋದಿ ಹೇಳಿದರು.
"ನನಗೆ 'ಮನ್ ಕಿ ಬಾತ್' ಕೇವಲ ಕಾರ್ಯಕ್ರಮವಲ್ಲ, ನನಗೆ ಇದು ನಂಬಿಕೆ, ಪೂಜೆ ಅಥವಾ ವ್ರತದ ವಿಷಯವಾಗಿದೆ. ಜನರು ದೇವರನ್ನು ಪೂಜಿಸಲು ಹೋದಾಗ ಅವರು ಪ್ರಸಾದವನ್ನು ತರುತ್ತಾರೆ. ನನಗೆ, 'ಮನ್ ಕಿ ಬಾತ್' ಎಂಬುದು ಜನತಾ-ಜನಾರ್ದನ್ ರೂಪದಲ್ಲಿ ದೇವರ ಪಾದದಲ್ಲಿ ಪ್ರಸಾದದಂತಿದೆ. 'ಮನ್ ಕಿ ಬಾತ್' ನನ್ನ ಅಸ್ತಿತ್ವದ ಆಧ್ಯಾತ್ಮಿಕ ಪ್ರಯಾಣವಾಗಿದೆ ಎಂದು ಮೋದಿ ಹೇಳಿದ್ದಾರೆ.