1111 ಬೂತ್‌ಗಳಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ

ಉಡುಪಿ, ಎ.30: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯ 1111 ಬೂತ್‌ಗಳಲ್ಲಿ ಇಂದು ಮಹಾ ಸಂಪರ್ಕ ಅಭಿ ಯಾನ ನಡೆಯಿತು.
ಪ್ರತಿಯೊಂದು ಬೂತ್‌ಗಳಲ್ಲಿ ಅಧ್ಯಕ್ಷ, ಶಕ್ತಿಕೇಂದ್ರ ಅಧ್ಯಕ್ಷ, ಮಹಾಶಕ್ತಿ ಕೇಂದ್ರ ಅಧ್ಯಕ್ಷ, ಪೇಜ್ ಪ್ರಮುಖರು, ನಗರಸಭಾ ಸದಸ್ಯರು, ಜನಪ್ರತಿನಿಧಿಗಳು ಸೇರಿ ಸರಾಸರಿ 70ರಿಂದ 100 ಕಾರ್ಯಕರ್ತರಂತೆ ಮನೆ ಮನೆ ಸಂಪರ್ಕ ಮಾಡಿದರು. ಹೀಗೆ ಜಿಲ್ಲೆಯಲ್ಲಿ ಒಂದು ಲಕ್ಷ ಕಾರ್ಯಕರ್ತರು ಮಹಾ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ
Next Story