Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮತ್ತೆ ಬಂದಿದೆ ಮೇ ದಿನ: ವಿಮೋಚನೆ ಎಂದು?

ಮತ್ತೆ ಬಂದಿದೆ ಮೇ ದಿನ: ವಿಮೋಚನೆ ಎಂದು?

ಲಿಂಗರಾಜು ಮಳವಳ್ಳಿ, ಬೆಂಗಳೂರುಲಿಂಗರಾಜು ಮಳವಳ್ಳಿ, ಬೆಂಗಳೂರು1 May 2023 9:47 AM IST
share
ಮತ್ತೆ ಬಂದಿದೆ ಮೇ ದಿನ: ವಿಮೋಚನೆ ಎಂದು?

ಚುನಾವಣೆ ಹೊಸ್ತಿಲಿನ ಈ ಮೇ ದಿನದಂದು ಎಲ್ಲವನ್ನೂ ಒಂದೇ ಬಾರಿಗೆ ಸರಿಪಡಿಸುವ ಮ್ಯಾಜಿಕ್ ಸಾಧ್ಯವಿಲ್ಲ. ಭವಿಷ್ಯದಲ್ಲಿ ಕಾರ್ಮಿಕ ಚಳವಳಿಯನ್ನು ತಮ್ಮ ಸಂಘಟನೆಗಳ ರಾಜಕೀಯ ಕಾರ್ಯಕ್ರಮಗಳ ಆಧಾರದಲ್ಲಿ, ಅಂತಿಮ ಗುರಿ ತಲುಪಲು ಒಟ್ಟು ಚಳವಳಿ ಯನ್ನು ಮುರಿದು ಕಟ್ಟುವ ಸಾಹಸಕ್ಕೆ ಕಾರ್ಮಿಕ ಸಂಘಟನೆಗಳು ಕೈ ಹಾಕಬೇಕಿದೆ. ಅಂಥದೊಂದು ಪ್ರತಿಜ್ಞೆಗೆ ಈ ಬಾರಿಯ ಮೇ ದಿನ ಸಾಕ್ಷಿಯಾಗಲಿ ಎಂದು ಆಶಿಸೋಣ!

ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಬಂದಿದೆ ಮೇ ದಿನ. ಸಂಪತ್ತೆಲ್ಲ ನಮ್ಮದೇ, ಇಡೀ ಭೂಗೋಳವನೆ ಕೇಳುವೆವು, ಬೆವರನು ಸುರಿಸಿ ದುಡಿಯುವ ಜನ ಎಂದು ಕೂಗಿ ಹೇಳಿದ ದಿನವಿದು. ಸಂಪತ್ತಿನ ಸೃಷ್ಟಿಕರ್ತರಾದ ಕಾರ್ಮಿಕರು ಜಗದಗಲ ಆಚರಿಸುವ ಮೇ ದಿನ, ಸಂಘರ್ಷದ ಕುಲುಮೆಯಲ್ಲಿ ಅರಳಿದ ಕುಸುಮ.

1880ರ ಹೊತ್ತಿಗೆ ಪ್ರಪಂಚದಲ್ಲೇ ಅತಿ ವೇಗವಾಗಿ ಬೆಳೆಯುತ್ತಿದ್ದ ಅಮೆರಿಕದ ಚಿಕಾಗೋ ನಗರ, ಬಂಡವಾಳದಾರರ ಸ್ವರ್ಗವಾಗಿ ಬದಲಾ ಗುತ್ತಿತ್ತು. ಕಾರ್ಮಿಕ ವರ್ಗವೂ ಬೆಳೆಯುತ್ತಿತ್ತು. ಆರು ಕಾಸಿನ ಸಂಬಳಕ್ಕೆ 14 ಗಂಟೆಗಳ ನಿರಂತರ ಕೆಲಸ, ಕಾರ್ಮಿಕರ ರಕ್ಷಣೆಗೆ ಕಾನೂನುಗಳೇ ಇಲ್ಲದ ಕಾಲದಲ್ಲಿ ಬರ್ಬರ ಶೋಷಣೆಯನ್ನು ಪ್ರಶ್ನಿಸುವಂತಿರಲಿಲ್ಲ. ಆದರೂ ಅಲ್ಲಲ್ಲಿ ಸಣ್ಣ ಪ್ರಮಾಣದ ಪ್ರತಿಭಟನೆಗಳು ಶುರುವಾಗಿದ್ದವು.

8 ಗಂಟೆ ದುಡಿಮೆ ಉಳಿದ 16 ಗಂಟೆ ವಿಶ್ರಾಂತಿ ಮತ್ತು ನಿದ್ರೆಗೆ ಅಗತ್ಯ ಎಂದು ವೈಜ್ಞಾನಿಕ ಮತ್ತು ತಾತ್ವಿಕ ತಳಹದಿ ಮೇಲೆ ಹೋರಾಟಗಳು ಶುರುವಾದವು. ಮನುಷ್ಯನ ದುಡಿಮೆಯ ಸಾಮರ್ಥ್ಯ ಆಧರಿಸಿ, ಇಂದು
ದುಡಿದು ನಾಳೆಯೂ ಅದೇ ಚೈತನ್ಯ-ಲವಲವಿಕೆಯಿಂದ ಕಾರ್ಖಾನೆಗೆ ದುಡಿಮೆಗೆ ಬರಬೇಕಿದ್ದಲ್ಲಿ ಹೆಚ್ಚಿನ ವಿಶ್ರಾಂತಿ ಅತ್ಯಗತ್ಯವಿತ್ತು. ಆದರೆ ಬಂಡವಾಳದಾರರು ಕಾರ್ಮಿಕ ಸಂಘಟನೆಗಳ ಈ ಬೇಡಿಕೆಗೆ ಕಿಮ್ಮತ್ತು ಕೊಡಲಿಲ್ಲ. ಮಾತ್ರವಲ್ಲ ಪ್ರಭುತ್ವವನ್ನು ಬಳಸಿ ಹೋರಾಟವನ್ನು ಶತಾಯಗತಾಯ ಹತ್ತಿಕ್ಕುವ ದಾಳಿಗಳನ್ನು ನಡೆಸಲಾಯಿತು. ಪರಿಣಾಮ
ವಾಗಿ 8 ಗಂಟೆ ಕೆಲಸದ ಬೇಡಿಕೆಗಾಗಿ ನಡೆಯುತ್ತಿದ್ದ ಹೋರಾಟಗಳು ಇನ್ನಷ್ಟು ಮೊನಚಾದವು. ಚಿಕಾಗೋ ನಗರದ ಇತಿಹಾಸದಲ್ಲೇ ಎಂದೂ ಕೇಳರಿಯದ ರೀತಿಯ ಕಾರ್ಮಿಕರ ಮೆರವಣಿಗೆಗಳು ಸಾಗಿದವು. ಹನ್ನರೆಡು ಸಾವಿರ ಕಾರ್ಖಾನೆಗಳ ಸುಮಾರು 3 ಲಕ್ಷದ 40 ಸಾವಿರ ಕಾರ್ಮಿಕರು ತಮ್ಮ ಕೆಲಸಗಳನ್ನು ನಿಲ್ಲಿಸಿ ಬೀದಿಗಿಳಿದಿದ್ದರು. 7 ಜನ ಹೋರಾಟಗಾರರನ್ನು ದೇಶದ್ರೋಹ, ವಿದ್ವಂಸಕ ಕೃತ್ಯ ನಡೆಸಿದರು ಎಂದು
ದೂರಿ, ಗಲ್ಲು ಶಿಕ್ಷೆ, ಕೆಲವರಿಗೆ 15 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾ
ಗುತ್ತದೆ. ಇದು ಐತಿಹಾಸಿಕ ಹೇ ಮಾರ್ಕೆಟ್ ಪ್ರಕರಣ ಎಂದು ಚರಿತ್ರೆಯಲ್ಲಿ ದಾಖಲಾಗಿದೆ. 1886ರಲ್ಲಿ ನಡೆದ ಈ ಹೋರಾಟವೇ ಮೇ 1 ಅಂತರ್‌ರಾಷ್ಟ್ರೀಯ ಕಾರ್ಮಿಕ ದಿನದ ಘೋಷಣೆಗೆ ಸಾಕ್ಷಿ ಪ್ರಜ್ಞೆಯಾಗಿದೆ.

ಭಾರತದಲ್ಲಿ ರಾಷ್ಟ್ರೀಯ ಚಳವಳಿಯ ಜೊತೆಜೊತೆಯಾಗಿ ಕಾರ್ಮಿಕ ಚಳವಳಿಯೂ ಬೆಳೆದು ಬಂದಿದೆ. 1907ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಹತ್ತು ದಿನಗಳ ಕಾಲ ನಡೆದ ರೈಲ್ವೆ ಕಾರ್ಮಿಕರ ಮುಷ್ಕರ, ಕೊಲ್ಕತಾ ನಗರವನ್ನು ದೇಶದ ಇತರ ನಗರಗಳಿಂದ ಸಂಪರ್ಕ
ವನ್ನೇ ಕಡಿತಗೊಳಿಸುವ ರೀತಿಯಲ್ಲಿ ನಡೆದಿತ್ತು. ಈ ಮುಷ್ಕರ ಬ್ರಿಟಿಷ್
ಆಳ್ವಿಕೆಯ ಪ್ರತಿಷ್ಠೆಗೆ ಗಂಭೀರವಾದ ಹೊಡೆತವಾಗಿದೆ. ಈ ಒಂದು ಹೊಡೆತವು ಅದರ ಶಕ್ತಿಯ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸಿತು
ಎಂದು ಸೋವಿಯತ್‌ನ ಭಾರತಶಾಸ್ತ್ರಜ್ಞ ಎ.ಐ.ಲೆವ್ಕೋವ್ಸ್ಕಿ ಹೇಳುತ್ತಾರೆ. ಇದಲ್ಲದೆ ಬಾಂಬೆ, ಕಲ್ಕತ್ತಾ, ಮದ್ರಾಸ್ ಇತರೆಡೆ ನಡೆಸಿದ ಕಾರ್ಮಿಕರ ಬೃಹತ್ ಮುಷ್ಕರಗಳು ರಾಷ್ಟ್ರೀಯ ವಿಮೋಚನೆಗೆ ತನ್ನದೇ ಆದ ಮಹತ್ತರ ಕೊಡುಗೆಯನ್ನೂ ನೀಡಿದೆ.

ಸೋಜಿಗದ ಸಂಗತಿ ಎಂದರೆ, ಚಿಕಾಗೋ ಕಾರ್ಮಿಕರ ಹೋರಾಟಕ್ಕೂ
24 ವರ್ಷಗಳ ಮೊದಲೇ ಇಂಡಿಯಾದಲ್ಲಿ ಎಂಟು ಗಂಟೆ ದುಡಿಮೆಗಾಗಿ
ಹೋರಾಟ ನಡೆದಿತ್ತು. 1862 ಎಪ್ರಿಲ್  ಮೇ ನಲ್ಲಿ ಹೌರಾ ರೈಲ್ವೆಯ ಕಾರ್ಮಿಕರು 8 ಗಂಟೆಯ ಕೆಲಸದ ಅವಧಿಯ ಬೇಡಿಕೆಯನ್ನಿಟ್ಟು ಮುಷ್ಕರ
ವನ್ನು ನಡೆಸಿದ್ದರು. ಭಾರತದ ಕಾರ್ಮಿಕ ವರ್ಗದ ಚರಿತ್ರೆಯಲ್ಲಿ ಇದೊಂದು
ಐತಿಹಾಸಿಕ ವಿದ್ಯಮಾನವಾಗಿದೆ.

ಕರ್ನಾಟಕದಲ್ಲಿ ಮೇ ದಿನಾಚರಣೆ ಆರಂಭವೇ ರಕ್ತಸಿಕ್ತವಾದುದು. ಮೇ ದಿನಾಚರಣೆಯನ್ನು ಭದ್ರಾವತಿ ಲೇಬರ್ ಅಸೋಸಿಯೇಷನ್ 1942ರಲ್ಲಿ ಭದ್ರಾವತಿಯಲ್ಲಿ ಮೊದಲ ಬಾರಿಗೆ ಆಚರಿಸಿದ ದಾಖಲೆ ಇದೆ. ಸಭೆ, ಸಮಾರಂಭ, ಮೆರವಣಿಗೆಗೆ ನಿಷೇಧ ವಿಧಿಸಲಾಗಿದ್ದ ಕಾಲದಲ್ಲಿ ಪೊಲೀಸರಿಂದ ಮೇ ದಿನದ ಮೆರವಣಿಗೆಗೆ ಅನುಮತಿ ಸಿಕ್ಕಿರಲಿಲ್ಲ. ಆದಾಗ್ಯೂ ಕೆಂಬಾವುಟಗಳೊಂದಿಗೆ ಕಾರ್ಮಿಕರ ಬೃಹತ್
ಮೆರವಣಿಗೆ ನಡೆಸಿದ ಕಾರ್ಮಿಕರು, ಮೇ ದಿನವನ್ನು ಸ್ಮರಣೀಯ ವಾಗಿಸಿದ್ದರು. ಇದಾದ ಎರಡು ದಿನಗಳ ತರುವಾಯ ಫ್ಯಾಕ್ಟರಿ ಒಳಗೆ ನುಗ್ಗಿದ ಪೊಲೀಸರು ಕಾರ್ಮಿಕ ನಾಯಕರನ್ನು ಬಂಧಿಸಿದಾಗ, ಇದರ ವಿರುದ್ಧ ತಿರುಗಿಬಿದ್ದ ಕಾರ್ಮಿಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಇದೇ ಸಂದರ್ಭವನ್ನು ಬಳಸಿ ಕಾರ್ಮಿಕರ ಒಗ್ಗಟ್ಟನ್ನು ಮುರಿಯಲು ಮುಂದಾದ ಪೊಲೀಸರು ತಮ್ಮ ಕೋವಿಗಳೊಂದಿಗೆ ದಾಳಿಗಿಳಿದರು. ಪರಿಣಾಮ, ಮೂರು ವರ್ಷದ ಮಗು ಸೇರಿದಂತೆ ಇಬ್ಬರು ಕಾರ್ಮಿಕರು ಬಲಿದಾನಗೈದರು. ಹೀಗೆ ಕರುನಾಡಿನಲ್ಲಿ ಮೇ ದಿನ ಪ್ರಭುತ್ವದ ವಿರುದ್ಧ ರಕ್ತ ಹರಿಸಿಯೇ ಆರಂಭವಾಯಿತು.

1905ರಲ್ಲಿ ಬಂಗಾಳ ಪ್ರೆಸ್ ವರ್ಕರ್ಸ್‌ ಯೂನಿಯನ್ ಎಂಬ ಹೆಸರಿನಲ್ಲಿ ಮೊದಲ ಸಂಘಟಿತ ಕಾರ್ಮಿಕ ಸಂಘ ಅಸ್ತಿತ್ವಕ್ಕೆ ಬಂದಿದ್ದರ ಉಲ್ಲೇಖಗಳಿವೆ. ಹೀಗಾಗಿ ಭಾರತದ ಕಾರ್ಮಿಕ ವರ್ಗದ ಚಳವಳಿಗೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. 1920ರಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸ್ಥಾಪನೆಯೊಂದಿಗೆ ಆರಂಭಗೊಂಡು, ನೂರು ವರ್ಷಗಳ ಕಾರ್ಮಿಕ ಚಳವಳಿ ತನ್ನ ಧೀರೋದ್ಧಾತ್ತ ಹೋರಾಟಗಳ ಮೂಲಕ ಬಹಳಷ್ಟು ಗಳಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಬ್ರಿಟಿಷ್ ವೈಸರಾಯ್ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದ ವೇಳೆ (1942 ರಿಂದ 1946) ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಹಲವು ಕಾನೂನು ಗಳನ್ನು ಜಾರಿಗೆ ತರುವ ಜತೆಗೆ, 14 ಗಂಟೆ ಕೆಲಸದ ಅವಧಿಯನ್ನು ರದ್ದು ಮಾಡಿ, 8 ಗಂಟೆಗೆ ಇಳಿಸಿದರು. ಹೀಗೆ ಕಾರ್ಮಿಕರ ಹಕ್ಕುಗಳ ರಕ್ಷಣೆ ಗಾಗಿನ ಕಾನೂನುಗಳನ್ನು ಭಾರತದ ಕಾರ್ಮಿಕ ವರ್ಗ ತನ್ನ ಸುದೀರ್ಘ ಚಳವಳಿ ಮೂಲಕ ದಕ್ಕಿಸಿಕೊಂಡಿದೆ. ಕಾರ್ಮಿಕ ಚಳವಳಿ ಬಿರುಸಾಗಿ ಬೆಳೆಯುತ್ತಲೇ, ಭಾರತದ ಕಾರ್ಮಿಕ ವರ್ಗ ವಿಮೋಚನಾ ದಾರಿ ಯಾವುದು? ಎಂಬ ಸೈದ್ಧಾಂತಿಕ ಜಿಜ್ಞಾಸೆಯ ಕಾರಣಕ್ಕಾಗಿ ಹಲವು ಕವಲುಗಳಾಗಿ ಒಡೆದದ್ದು ಈಗ ಇತಿಹಾಸ.

ದೇಶದ ಕಾರ್ಮಿಕ ಚಳವಳಿಯನ್ನು ಅನುಸರಿಸಿ ರಾಜ್ಯದ ಕಾರ್ಮಿಕ ಚಳವಳಿಯೂ ಬೆಳೆದಿದೆ. ಹೋರಾಟಗಳ ಮೂಲಕವೇ ಹಕ್ಕು, ಸವಲತ್ತು
ಗಳನ್ನು ಗಳಿಸಿದೆ. ಎಪ್ಪತ್ತರ ದಶಕದಲ್ಲಿ ಸೂರಿ-ಎಂ.ಎಸ್.ಕೃಷ್ಣನ್ ಜೋಡಿ
ರಾಜ್ಯದ ಕಾರ್ಮಿಕರನ್ನು ಸಂಘಟನೆಯತ್ತ ಸೆಳೆಯುವ ಅಯಸ್ಕಾಂತದ ಶಕ್ತಿ ಯನ್ನು ಹೊಂದಿತ್ತು. ಕಾರ್ಮಿಕರಿಂದಾಗಿಯೇ ಈ ಇಬ್ಬರೂ ನಾಯಕರು ಶಾಸನ ಸಭೆಗೆ ಆಯ್ಕೆಯಾಗಿದ್ದರು ಎಂಬುದು ಈ ಸಂದರ್ಭಕ್ಕೆ ಗಮನಾರ್ಹ ಸಂಗತಿ. ಏರುಗತಿಯಲ್ಲಿ ಸಾಗಿದ್ದ ಕಾರ್ಮಿಕ ಚಳವಳಿಗೆ ನವ
ಉದಾರವಾದಿ ನೀತಿಗಳು ರಕ್ಕಸ ಅಲೆಗಳಂತೆ ಅಪ್ಪಳಿಸಿದ್ದೇ, ಅದು ತನ್ನ
ಮೊದಲಿನ ಮೊನಚು ಕಳೆದುಕೊಂಡು ಮೊಂಡಾಗುತ್ತಾ ಬಂದಿದ್ದೂ ಹೌದು. ಇದಕ್ಕೆ ಕಾಲದ ಕಾರಣಗಳೇನೇ ಇದ್ದರೂ, ಕಾರ್ಮಿಕ ವರ್ಗದ
ನಾಯಕತ್ವವೂ ಅಷ್ಟೇ ಕಾರಣ ಎಂಬುದು ಸತ್ಯ. ಕಾರ್ಮಿಕ ವರ್ಗಕ್ಕೆ ತನ್ನ ವರ್ಗದ ರಾಜಕೀಯ ಪ್ರಜ್ಞೆಯನ್ನು ಮೂಡಿಸು ವಲ್ಲಿನ ವೈಫಲ್ಯದಿಂದಾಗಿ ಬಂಡವಾಳಶಾಹಿ ಒಡ್ಡುವ ಸವಾಲುಗಳಿಗೆ ಉತ್ತರಿಸಲಾಗದ ಸ್ಥಿತಿ ಇದೆ.

ಮೋದಿ ಸರಕಾರ ನವ ಉದಾರವಾದಿ ನೀತಿಗಳನ್ನು ಯಾವುದೇ ಅಳುಕಿಲ್ಲದೇ ಜಾರಿ ಮಾಡುತ್ತಿದೆ. 29 ಕಾರ್ಮಿಕ ಕಾನೂನುಗಳನ್ನು ರದ್ದು
ಮಾಡಿ, ಸರಕಾರಿ ಶಾಲೆಗಳನ್ನು ಮುಚ್ಚಿ ವಿಲೀನ ಎಂದು ಕರೆದಂತೆ, ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾಡಿ ಸಂಹಿತೆಯಲ್ಲಿ ವಿಲೀನ
ಗೊಳಿಸಲಾಗಿದೆ ಎನ್ನುತ್ತಿದೆ. ಈ ಮೂಲಕ ಕಾರ್ಮಿಕರ ಸಂವಿಧಾನಬದ್ಧ ನಾಗರಿಕ ಹಕ್ಕುಗಳನ್ನು ಕಸಿದುಕೊಂಡಿದೆ. ಉದಾಹರಣೆಗೆ ದಿನದ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಏರಿಕೆ ಮಾಡಲಾಗಿದೆ.
ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಲು ಅನುಮತಿಸಲಾ ಗಿದೆ. ರಾಜ್ಯಗಳಲ್ಲಿನ ಶೇ.90.76 ಕಾರ್ಖಾನೆಗಳು ಮತ್ತು ರಾಷ್ಟ್ರಮಟ್ಟದ ಶೇ.95.58 ಕಾರ್ಖಾನೆಗಳು ಸರಕಾರದ ಅನುಮತಿ ಇಲ್ಲದೇ ಲೇ ಆಫ್, ರಿಟ್ರೀಚ್‌ಮೆಂಟ್ ಹಾಗೂ ಮುಚ್ಚುವ ಮುಕ್ತ ಅವಕಾಶ ನೀಡಿದೆ.
ಮುಂದುವರಿದು, ಖಾಯಂ ಉದ್ಯೋಗದ ಬದಲಾಗಿ, , NEEM, NETAF, FTE, OJT  ಇತ್ಯಾದಿ ಹೆಸರಿನಲ್ಲಿ ಕಾರ್ಮಿಕರನ್ನು ನೇಮಕ ಮಾಡಿ
ಕೊಳ್ಳಲು ಅನುವು ಮಾಡಿಕೊಡಲಾಗಿದೆ. ಸಾಮಾಜಿಕ ಭದ್ರತೆಯ ಇಎಸ್‌ಐ, ಪಿಎಫ್, ಪೆನ್ಷನ್ ಇತ್ಯಾದಿಗಳಿಂದ ಕಾರ್ಮಿಕರನ್ನು ಹೊರಗಿ
ಡಲಾಗುತ್ತಿದೆ. ಈ ಸಂಹಿತೆಗಳ ಹಿಂದಿನ ಉದ್ದೇಶ ಬಂಡವಾಳದಾರರು ಕಾರ್ಮಿಕ ವರ್ಗವನ್ನು ಗುಲಾಮರಂತೆ ಅಗ್ಗದ ಕೂಲಿಗೆ ದುಡಿಸಿಕೊಳ್ಳು
ವುದೇ ಆಗಿದೆ. ಇದನ್ನು ದೃಢಪಡಿಸುವಂತೆ ಮಾಲಕರ ಲಾಭ ಪ್ರಮಾಣ ವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಂಡವಾಳದಾರರ ಗರಿಷ್ಠ ಲಾಭದ ದುರಾಸೆಯು ಕಾರ್ಮಿಕರ ಕೊಳ್ಳುವ ಶಕ್ತಿಯನ್ನು ಕಸಿದಿದೆ. ನಿರುದ್ಯೋಗ ವ್ಯಾಪಕವಾಗಿ ಬೆಳೆಯುತ್ತಿದೆ. ಜನರ ಜೀವನಮಟ್ಟ ಬಡತನರೇಖೆಯ ಕೆಳಗೆ ಇಳಿಯುತ್ತಿದೆ.

ಅಸಂಘಟಿತ ವಲಯದ ಕಾರ್ಮಿಕರ ಸ್ಥಿತಿ ಅರಣ್ಯರೋದನವಾಗಿದೆ. ಇವರಿಗೆ ಕಾನೂನಿನ ಯಾವುದೇ ರಕ್ಷಣೆ ಇಲ್ಲದಂತೆ ಮಾಡಲಾಗಿದೆ. ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲಾಗಿದೆ ಯಾದರೂ, ಈ ಮಂಡಳಿಗೆ ರಾಜ್ಯ ಸರಕಾರದಿಂದ ಯಾವುದೇ ಬಿಡುಗಾಸೂ ನೀಡುತ್ತಿಲ್ಲ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಾವಿರಾರು ಕೋಟಿ ರೂಪಾಯಿ ಸೆಸ್ ಸಂಗ್ರಹವಾಗುತ್ತಿದ್ದರೂ, ಅದು ನೈಜ ಕಾರ್ಮಿಕರಿಗೆ ತಲುಪುತ್ತಿಲ್ಲ. ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಬದಲಾಗುತ್ತಿರುವ ಉದ್ಯೋಗ ಸ್ವರೂಪ, ಹೊಸ ರೀತಿಯ ಸಮಸ್ಯೆ ಗಳನ್ನು ಸೃಷ್ಟಿಸುತ್ತಿದೆ. ಆ್ಯಪ್ ಆಧಾರಿತ ಉದ್ಯೋಗಗಳಲ್ಲಿ ಮಾಲಕ  ಕಾರ್ಮಿಕ ಸಂಬಂಧಗಳೇ ಇಲ್ಲದಂತಹ ಉದ್ಯೋಗಗಳಿಂದ ಶೋಷಣೆ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ.

ಕಾರ್ಪೊರೇಟ್ ಬಂಡವಾಳದಾರರನ್ನು ಸಂತುಷ್ಟಗೊಳಿಸುವಾಗಲೇ ಕಾರ್ಮಿಕರ ನಡುವೆ ಎದ್ದುಬರುವ ಅತೃಪ್ತಿಯನ್ನು ಶಮನಗೊಳಿಸಲು ಕ್ಷುಲ್ಲಕ ಘಟನೆಗಳನ್ನು ಕೋಮುವಾದೀಕರಿಸಿ, ಧರ್ಮದ ಉನ್ಮಾದದಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡಲಾಗುತ್ತಿದೆ. ಕಾರ್ಮಿಕರಲ್ಲಿ ಅಂಧಾ ಭಿಮಾನ ಮೂಡಿಸುವ ವಿಚಾರಗಳನ್ನು ಸರಣಿಯಾಗಿ ಬಿತ್ತಲಾಗುತ್ತಿದೆ. ಇದರ ಪರಿಣಾಮ, ಕಾರ್ಮಿಕ ವಿರೋಧಿ ನೀತಿಗಳನ್ನು ಎಗ್ಗಿಲ್ಲದೆ ಜಾರಿ ಮಾಡುತ್ತಿರುವ ರಾಜಕೀಯ ಪಕ್ಷಗಳನ್ನೇ ಕಾರ್ಮಿಕರು ಬೆಂಬಲಿಸುವ
ದುರದೃಷ್ಟಕರ ಸ್ಥಿತಿ ನಿರ್ಮಾಣವಾಗಿದೆ. ತನ್ನ ಶತ್ರುವನ್ನು ಗುರುತಿಸಿ ಕೊಂಡು, ಶತ್ರುವಿನ ವಿರುದ್ಧ ಹೋರಾಡಬೇಕಾದ ಕಾರ್ಮಿಕ ವರ್ಗ, ಶತ್ರುವನ್ನೇ ಮಿತ್ರ ಎಂದು ನಂಬಿ ಮೋಸ ಹೋಗುತ್ತಿದೆ. ಮುಂದುವ
ರಿದು ಕಾರ್ಮಿಕರಲ್ಲಿ ಹೋರಾಟದ ಮನೋಭಾವವೇ ಬರಿದಾಗುವಂತೆ ಮಾಡಲಾಗಿದೆ. ಹೋರಾಟ ನಡೆಸದೇ ಸವಲತ್ತು ಪಡೆಯಬೇಕೆಂಬ ಮನೋಸ್ಥಿತಿ ಬೆಳೆದಿದೆ.

ಇಂತಹ ದಯನೀಯ ಸ್ಥಿತಿಗೆ ಕಾರ್ಮಿಕರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಕಾರ್ಮಿಕರನ್ನು ಕಾರ್ಮಿಕ ವರ್ಗವಾಗಿ, ಸೈದ್ಧಾಂತಿಕವಾಗಿ, ರಾಜಕೀಯವಾಗಿ ಸಂಘಟಿಸಬೇಕಿದ್ದ ರಹದಾರಿಯನ್ನು ಕೈಬಿಟ್ಟ ನಾಯಕತ್ವ, ಕೇವಲ ಸಂಬಳ, ಸವಲತ್ತುಗಳ ಹಿಂದೆ ಬಿದ್ದ ಪರಿಣಾಮ, ಅಂತಿಮವಾಗಿ ಸಾಧಿಸಬೇಕಾದ ಗುರಿ, ಸಾಮಾಜಿಕ ಕರ್ತವ್ಯದ ಪರಿವೇ
ಇಲ್ಲದಂತೆ ವರ್ತಿಸುತ್ತಿರುವ ಕಾರ್ಮಿಕ ವರ್ಗವು, ತನ್ನ ಎದುರಿಗಿರುವ ಶತ್ರುವನ್ನು ಗುರುತಿಸಲಾಗದಷ್ಟು ಕುರುಡಾಗಿದೆ! ಚಳವಳಿಗಳ ನಾಯಕತ್ವ ವಹಿಸಿದವರು ಈ ಬಗ್ಗೆ ತೆರೆದ ಮನಸ್ಸಿನಿಂದ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಜರೂರಿದೆ.

share
ಲಿಂಗರಾಜು ಮಳವಳ್ಳಿ, ಬೆಂಗಳೂರು
ಲಿಂಗರಾಜು ಮಳವಳ್ಳಿ, ಬೆಂಗಳೂರು
Next Story
X