ಕೈರಂಗಳದಲ್ಲಿ ಯು.ಟಿ.ಖಾದರ್ ಮತ ಯಾಚನೆ

ಉಳ್ಳಾಲ, ಮೇ 1: ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ನರಿಂಗಾನ, ಕೈರಂಗಳ ಬಾಳೆಪುಣಿ ಗ್ರಾಮಗಳ ವಿವಿಧ ಪ್ರದೇಶಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.
ಇದೇವೇಳೆ ಕೈರಂಗಳ ಗ್ರಾಮದ ಪಡಿಕಲ್ ನ ಕಾಂಗ್ರೆಸ್ ನ ಹಿರಿಯ ನಾಯಕ ಟಿ.ಕೆ.ಇಸ್ಮಾಯೀಲ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪ್ರಧಾನ ಕಾರ್ಯದರ್ಶಿ ಜಲೀಲ್, ರಫೀಕ್ ಮುದುಂಗಾರು ಕಟ್ಟೆ, ನಾಸಿರ್ ನಡುಪದವು, ನಾಸಿರ್ ಸಾಮಣಿಗೆ, ಹೈದರ್ ಕೈರಂಗಳ ಸಹಿತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜತೆಯಲ್ಲಿದ್ದರು.
Next Story







