ಟೋಕಿಯೋ ವಿಶ್ವವಿದ್ಯಾಲಯಕ್ಕೆ ಅತಿಥಿ ಉಪನ್ಯಾಸಕರಾಗಿ ಸೇರ್ಪಡೆಯಾದ ಜಾಕ್ ಮಾ

ಬೀಜಿಂಗ್: ಟೋಕಿಯೊ ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿನ ಸ್ವವಿವರ ಪುಟದಲ್ಲಿ ಆಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿ.ನ ಸಹ ಸಂಸ್ಥಾಪಕ ಜಾಕ್ ಮಾ ಟೋಕಿಯೋ ವಿಶ್ವವಿದ್ಯಾಲಯದ ಅಧೀನಕ್ಕೊಳಪಡುವ ಟೋಕಿಯೋ ಕಾಲೇಜಿಗೆ ಅತಿಥಿ ಉಪನ್ಯಾಸಕರಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ ಎಂದು timesofindia.com ವರದಿ ಮಾಡಿದೆ.
58 ವರ್ಷದ ಚೀನಾದ ಪ್ರತಿಷ್ಠಿತ ಉದ್ಯಮಿ ಜಾಕ್ ಮಾ ಮೇ 1ರಿಂದ ತಮ್ಮ ಹುದ್ದೆಗೆ ಸೇರ್ಪಡೆಯಾಗಲಿದ್ದು, ಹಲವಾರು ವಲಯಗಳಿಗೆ ಇದರಿಂದ ಕೊಡುಗೆ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಟೋಕಿಯೋ ಕಾಲೇಜ್ ಹೇಳಿಕೊಂಡಿದೆ. ಅವರು ಸಂಶೋಧನಾ ವಿಷಯಗಳು ಹಾಗೂ ಸಂಶೋಧನೆ ಕೈಗೊಳ್ಳುವ ಕುರಿತು, ಮುಖ್ಯವಾಗಿ ಸುಸ್ಥಿರ ಕೃಷಿ ಹಾಗೂ ಆಹಾರ ಉತ್ಪಾದನೆ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಜೊತೆಗೆ, ಉದ್ಯಮಶೀಲತೆ ಹಾಗೂ ಸಂಶೋಧನೆ ಕುರಿತೂ ಸೆಮಿನಾರ್‌ಗಳನ್ನು ಆಯೋಜಿಸಲಿದ್ದಾರೆ.
ಜಾಕ್ ಮಾ ಸಹ ಸಂಸ್ಥಾಪಕರಾಗಿರುವ ಆ್ಯಂಟ್ ಗ್ರೂಪ್ ಕೊ. ಸಾರ್ವಜನಿಕ ಕೊಡುಗೆ ನೀಡುವ ತನ್ನ ಪ್ರಾಥಮಿಕ ಯೋಜನೆಯನ್ನು ಹಿಂಪಡೆದ ನಂತರ, 2020ರಲ್ಲಿ ಚೀನಾ ನಿಯಂತ್ರಣ ಪ್ರಾಧಿಕಾರಿಗಳನ್ನು ಜಾಕ್ ಮಾ ಟೀಕಿಸಿದ್ದರು. ಅದಾದ ನಂತರ ಅವರು ಸಾರ್ವಜನಿಕವಾಗಿ ಅವರು ಕಾಣಿಸಿಕೊಂಡಿರಲಿಲ್ಲ.
ಇದಾದ ನಂತರ ಕಳೆದ ಮಾರ್ಚ್‌ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ಕಾಣಿಸಿಕೊಂಡಿದ್ದರು. ಜಾಕ್ ಮಾ ಯಾವ ಬಗೆಯ ಉಪನ್ಯಾಸ ಅಥವಾ ಸೆಮಿನಾರ್‌ಗಳನ್ನು ನೀಡಲಿದ್ದಾರೆ ಎಂಬ ಕುರಿತು ಟೋಕಿಯೋ ಕಾಲೇಜ್ ಈವರೆಗೆ ವಿವರ ಒದಗಿಸಿಲ್ಲ.