ಕೊಪ್ಪದಲ್ಲಿ ನಂದಿನಿ ಬೂತ್ ಗೆ ತೆರಳಿ ಸಿಹಿ ಸವಿದ ಜೈರಾಮ್ ರಮೇಶ್
ಶೃಂಗೇರಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಪರ ಮತಯಾಚನೆ

ಶೃಂಗೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡರ ಪರ ಮತಯಾಚನೆ ಮಾಡಿದರು.
ರವಿವಾರ ಕೊಪ್ಪ ಪಟ್ಟಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಜೈರಾಮ್ ರಮೇಶ್, ಬಳಿಕ ಕೊಪ್ಪ ಬಸ್ ನಿಲ್ದಾಣದ ಸಮೀಪದ ನಂದಿನಿ ಹಾಲಿನ ಬೂತಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮತ್ ಜೊತೆ ತೆರಳಿ ನಂದಿನಿ ಉತ್ಪನ್ನಗಳ ಸಿಹಿ ತಿನಿಸುಗಳನ್ನು ಸವಿದರು.
ಈ ಕುರಿತ ಫೋಟೊ ಒಂದನ್ನು ಟ್ವಟರ್ ನಲ್ಲಿ ಹಂಚಿಕೊಂಡಿರುವ ಜೈರಾಮ್ ರಮೇಶ್, 'ಕಾಂಗ್ರೆಸ್ ಸರ್ಕಾರ ಸದ್ಯದಲ್ಲೇ ಬರುವುದರಿಂದ ಹೆಮ್ಮೆಯ ನಂದಿನಿ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿದೆಯೆಂದು ಕೊಪ್ಪದ ನಂದಿನಿ ಬೂತ್ ಮಾಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟರು' ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಸದ್ಯದಲ್ಲೇ ಬರುವುದರಿಂದ, ಹೆಮ್ಮೆಯ ನಂದಿನಿ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿದೆಯೆಂದು ಕೊಪ್ಪದ ನಂದಿನಿ ಬೂತ್ ಮಾಲೀಕ ನೆಮ್ಮದಿಯ ನಿಟ್ಟುಸಿರು ಬಿಟ್ಟರು. pic.twitter.com/ZKL9rfjqgP
— Jairam Ramesh (@Jairam_Ramesh) April 30, 2023







.jpeg)

