10 ಗಂಟೆಯ ಗಡುವು ಮುಗಿದಿದೆ ಎಂದು ಎ.ಆರ್. ರಹಮಾನ್ ಕಾರ್ಯಕ್ರಮ ನಿಲ್ಲಿಸಿದ ಪೊಲೀಸರು
ಪುಣೆ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಕಾರ ಎ.ಆರ್. ರಹಮಾನ್ (AR Rahman) ಅವರ ಸಂಗೀತ ಕಾರ್ಯಕ್ರಮ ನಿಗದಿತ ಸಮಯವಾದ ರಾತ್ರಿ 10 ಗಂಟೆಯನ್ನು ದಾಟಿದೆ ಎಂಬ ಕಾರಣಕ್ಕಾಗಿ ಪೊಲೀಸರು ಅದನ್ನು ನಿಲ್ಲಿಸಿದ ಘಟನೆ ನಡೆದಿದೆ.
ರವಿವಾರ ಈ ಸಂಗೀತ ಕಾರ್ಯಕ್ರಮ ನಡೆದಿತ್ತು. ಪೊಲೀಸ್ ಅಧಿಕಾರಿಯೊಬ್ಬರು ವೇದಿಕೆ ಹತ್ತಿ ರಹಮಾನ್ ಮತ್ತಿತರ ಕಲಾವಿದರಿಗೆ ಕಾರ್ಯಕ್ರಮ ನಿಲ್ಲಿಸಲು ಹೇಳುತ್ತಿರುವ ವೀಡಿಯೋ ವೈರಲ್ ಆಗಿದೆ.
ಪುಣೆಯ ರಾಜಾ ಬಹಾದುರ್ ಮಿಲ್ಸ್ ಎಂಬಲ್ಲಿ ನಡೆದ ಈ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಮಂದಿ ನೆರೆದಿದ್ದರು.
“ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಯಬೇಕೆಂದು ಸೂಚಿಸಲಾಗಿತ್ತು. ಈ ಕಾರಣ ಕಾರ್ಯಕ್ರಮವನ್ನು ನಿಲ್ಲಿಸಲು ಸೂಚಿಸಲಾಯಿತು, ಅವರು ಸೂಚನೆಯನ್ನು ಪಾಲಿಸಿ ಕಾರ್ಯಕ್ರಮ ನಿಲ್ಲಿಸಿದರು,” ಎಂದು ಸ್ಥಳೀಯ ಪೊಲೀಸ್ ಅಧಿಖಾರಿಗಳು ತಿಳಿಸಿದ್ದಾರೆ.
ವೀಡಿಯೋದಲ್ಲಿ ರಹಮಾನ್ ಅವರು ತಮ್ಮ ಕೈಗಡಿಯಾರ ತೋರಿಸಿ ವೇದಿಕೆಯಲ್ಲಿದ್ದ ಇತರ ಕಲಾವಿದರಿಗೆ ಪ್ರದರ್ಶನ ನಿಲ್ಲಿಸಲು ಸೂಚಿಸುವುದು ಕಾಣಿಸುತ್ತದೆ.
Video | Famous musician AR Rahman's performance in Pune's Maharashtra yesterday was stopped by the police. The event continued beyond the time limit, so the police stopped the event. pic.twitter.com/x6aLw25yfC
— MUMBAI NEWS (@Mumbaikhabar9) May 1, 2023