ಮಂಗಳೂರು ದಕ್ಕೆ ಪ್ರದೇಶದಲ್ಲಿ ಲೋಬೊ ಮತಯಾಚನೆ

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೊ ಸೋಮವಾರ ಬಂದರು ಮೀನುಗಾರಿಕಾ ದಕ್ಕೆ ಪ್ರದೇಶಕ್ಕೆ ಭೇಟಿ ಅಲ್ಲಿನ ಮುಖಂಡರು, ಕಾರ್ಮಿಕರನ್ನು ಭೇಟಿ ಮಾಡಿ ಮತಯಾಚಿಸಿದರು.
ಅಲ್ಲದೆ ದಕ್ಕೆ ಪರಿಸರದ ಸಮಸ್ಯೆಗಳ ಬಗ್ಗೆ, ಕಾರ್ಮಿಕರು, ಮಾಲಕರು ಎದುರಿಸುವ ಸಮಸ್ಯೆಗಳು ಹಾಗೂ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ಪಡೆಡುಕೊಂಡರು.
ಈ ಸಂದರ್ಭ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪ್ರದೇಶ ಕಾಂಗ್ರೆಸ್ ಒಬಿಸಿ ಉಪಾಧ್ಯಕ್ಷ ಚೇತನ್ ಬೆಂಗ್ರೆ, ಮಾಜಿ ಮೇಯರ್ ಅಶ್ರಫ್,ಜಿಲ್ಲಾ ಕಾಂಗ್ರೆಸ್ ಮೀನುಗಾರಿಕಾ ಘಟಕ ಅಧ್ಯಕ್ಷ ಹರೀಶ್ ಅಮೀನ್ ಬೆಂಗ್ರೆ, ವಾರ್ಡ್ ಅಧ್ಯಕ್ಷ ಅಶ್ರಫ್ ಅಬೂಬಕ್ಕರ್, ಮಾಜಿ ಅಧ್ಯಕ್ಷ ಆಸೀಫ್ ಅಹ್ಮದ್ ಬೆಂಗ್ರೆ, ಅಸ್ಲಾಂ ಬೆಂಗ್ರೆ, ರಾಜೇಶ್ ಅಮೀನ್, ಮಾಜಿ ಕಾರ್ಪೊರೇಟರ್ ಶಕುಂತಳಾ ಬೆಂಗ್ರೆ, ಸತೀಶ್ ಕೋಟ್ಯಾನ್, ರಮಾನಂದ ಪೂಜಾರಿ, ಇಮ್ರಾನ್ ಎ.ಆರ್., ಮಜೀದ್ ಪಿ.ಪಿ., ಸವಾನ್ ಜೆಪ್ಪು, ಸರಿತಾ ಪುತ್ರನ್, ಸಲಿಂ ಪಾಂಡೇಶ್ವರ ಮತ್ತಿತರರು ಪಾಲ್ಗೊಂಡಿದ್ದರು.