ಮಂಗಳೂರು: ಮಂಗಳಮುಖಿಗೆ ಹಲ್ಲೆ ಆರೋಪ; ಪ್ರಕರಣ ದಾಖಲು

ಮಂಗಳೂರು: ನಗರದ ಕುಂಟಿಕಾನ ಬಳಿ ಮಂಗಳಮುಖಿಯೊಬ್ಬರಿಗೆ ನಾಲ್ಕು ಮಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಎ.30ರ ಮಧ್ಯರಾತ್ರಿ ಮಂಗಳಮುಖಿಯ ಬಳಿ ಬಂದ ನಾಲ್ಕು ಮಂದಿ ಯುವಕರು ವ್ಯವಹಾರ ಕುದುರಿಸಿದ ಬಳಿಕ ‘ನಿನಗೆ ಅಷ್ಟು ದುಡ್ಡು ಯಾಕೆ ಕೋಡಬೇಕು? ಎಂದು ಕೇಳಿ ಅವಾಚ್ಯ ಶಬ್ದದಿಂದ ಬೈದಿರುವುದಲ್ಲದೆ, ಒಬ್ಬ ಕಲ್ಲಿ ನಿಂದ ತಲೆಗೆ, ಇನ್ನೊಬ್ಬ ಪೈಪ್‌ನಿಂದ ಬೆನ್ನಿಗೆ ಹೊಡೆದು ಮತ್ತಿಬ್ಬರು ಕಲ್ಲು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭ ಮಂಗಳಮುಖಿಯ ಬ್ಯಾಗ್ ನೆಲಕ್ಕೆ ಬಿದ್ದಿದ್ದು, ಅದನ್ನು ಹೆಕ್ಕಿ ಪರಿಶೀಲಿಸಿದಾಗ 6000 ರೂ. ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಯುವಕರು ಹಲ್ಲೆ ನಡೆಸಿದ್ದರಿಂದ ಮಂಗಳಮುಖಿಗೆ ಗಾಯ ವಾಗಿದ್ದು, ಮಾಹಿತಿ ತಿಳಿದ ಇನ್ನೋರ್ವ ಮಂಗಳಮುಖಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
Next Story





