ಜನರಲ್ಲಿ ಕೋಮು ವಿಷಭಾವನೆ ಬಿತ್ತಿ ಪ್ರತ್ಯೇಕಿಸಿದ್ದೇ ಈಗಿನ ಶಾಸಕರ ಸಾಧನೆ: ಮಹಾಬಲ ಮಾರ್ಲ ಆರೋಪ

ಸುರತ್ಕಲ್: ಹಿಂದಿನ ಶಾಸಕರು ಕ್ಷೇತ್ರದಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದ ಜನರಲ್ಲಿ ಕೋಮು ವಿಷಭಾವನೆ ಬಿತ್ತಿ ಪ್ರತ್ಯೇಕಿಸಿದೇ ಈಗಿನ ಶಾಸಕರ ಸಾಧನೆ. ಮಾಜಿ ಶಾಸಕರು ಮಾಡಿದ್ದ ಮಾರುಕಟ್ಟೆ ಸಂಕೀರ್ಣವನ್ನು ಈಗಿನ ಶಾಸಕರು ಪೂರ್ಣಗೊಳಿಸಿಲ್ಲ. ಯಾಕೆಂದರೆ ಅದನ್ನು ಪೂರ್ಣಗೊಳಿಸಿದರೆ ಅದರಿಂದ ತನಗೆ ಯಾವುದೇ ಲಾಭ ಇಲ್ಲ ಎಂದು ಅದರ ಹತ್ತಿರವೇ ಸುಳಿದಿಲ್ಲ ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ ಆರೋಪಿಸಿದ್ದಾರೆ.
ಸುರತ್ಕಲ್ ಹೊಸಬೆಟ್ಟುವಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಹಿಂದಿನ ಶಾಸಕ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆನ್ನುವ ದೃಷ್ಠಿಯಿಂದ ಜೆಡಿಎಸ್‌ನಲ್ಲಿ ನಿಂತಿದ್ದಾರೆ. ಅವರು "ನಾನು ಮಾಡಿದ್ದು" ಎಂದು ಹೇಳಿಕೊಂಡು ಮತಯಾಚಚನೆ ಮಾಡುತ್ತಿದ್ದಾರೆ. ನಾನು ಎಂಬ ಪದ ಇಲ್ಲಿ ಉಲ್ಲೇಖವೇ ಆಗುವುದಿಲ್ಲ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ಸೊತ್ತು, ಜಾಗ, ಅಭಿವೃದ್ಧಿ ಕಾರ್ಯಗಳು ಮನಪಾದ ಸೊತ್ತಾಗಿದೆ. ಬಾವಾ ಅಧಿಕಾರದಲ್ಲಿದ್ದ ಸಂದರ್ಭ ಮನಪಾ ಸುರತ್ಕಲ್ ಮತ್ತು ಕೃಷ್ಣಾಪುರ, ಕಂಕನಾಡಿ, ಉರ್ವಾಸ್ಟೋರ್, ಉರ್ವಾ ಮಾರ್ಕೇಟ್ ಮತ್ತು ಸೆಂಟ್ರಲ್ ಮಾರುಕಟ್ಟೆಯನ್ನು ನಿರ್ಮಿಸಿದೆ. ಈ ಮಾರುಕಟ್ಟೆಗಳನ್ನು ಸರಕಾರದ ಅನುದಾನ ಮತ್ತು ಲೋನ್ ಪಡೆದುಕೊಂಡು, ಬಿಸಿಸಿ ಮಾದರಿಯಲ್ಲಿ ಮಾಡಲಾಗಿದೆ. ಮನಪಾ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಸರಕಾರ ಅನದಾನ ನೀಡುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಮನಪಾ ವ್ಯಾಪ್ತಿಯಲ್ಲಿ ಕೆಲವು ಮಾರುಕಟ್ಟೆಗಳನ್ನು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿತ್ತು. ಕೆಲವೊಂದು ಮಾರುಕಟ್ಟೆಯನ್ನು ಲೋನ್ ಪಡೆದು ಮಾಡಲಾಗಿದೆ. ಆದುದರಿಂದ ಮಾಜಿ ಶಾಸಕರು ಹೇಳುವಂತೆ ನಾನು ಮಾಡಿರುವುದು ಎನ್ನುವುದರಲ್ಲಿ ಅರ್ಥವಿಲ್ಲ. ಆ ಪದ ಮುಂದಿನ ದಿನಗಳಲ್ಲಿ ಬಳಕೆಯಾಗಬಾರದು ಎಂದು ಅವರು ಹೇಳಿದರು.
ಕಳೆದ 4 ವರ್ಷದ ಅವದಿಯಲ್ಲಿ ದ.ಕ, ಉಡುಪಿಯ ಜನರು ಟೋಲ್‌ಗೇಟ್ ತೆರವಿಗೆ ಹೋರಾಟ ಮಾಡಿದ್ದಾರೆ. ಅದು ಸಾರ್ವಜನಿಕರ ಹಿತ ದೃಷ್ಠಿಯಿಂದ ಮಾಡಲಾಗಿದ್ದ ಧರಣಿ. ಆದರೆ ನಮ್ಮ ಶಾಸಕರು ಒಂದೇ ಒಂದು ದಿನ ಧರಣಿಯಲ್ಲಿ ಭಾಗವಹಿಸಿಲ್ಲ. ಇದರಿಂದ ತಿಳಿಯಬಹುದಾಗಿದೆ ಶಾಸಕರಿಗೆ ಜನರ ಬಗ್ಗೆ ಕಾಲಜಿ ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
4 ವರ್ಷಗಳ ಹಿಂದೆ ಜಿಲ್ಲಾಧಿಕಾರಿಯವರ ಮೂಲಕ ಹೆದ್ದಾರಿ ಪ್ರಾಧಿಕಾರ ಕೂಳೂರು ಸೇತುವೆ ಕಾಮಗಾರಿಗೆ ಆರಂಬಿಸಿದೆ. ಅದೂ ಇಂದಿಗೂ ಪೂರ್ಣಗೊಂಡಿಲ್ಲ. ಆದರೆ, ಇತ್ತೀಚೆಗೆ ಸುರತ್ಕಲ್ ಮೇಲ್ಸೇತುವೆಯ ಕೆಳ ಭಾಗದಲ್ಲಿ ಹೆದ್ದಾರಿಯ ಕಾಮಗಾರಿ ನಡೆದಿದೆ. ಅದಕ್ಕೆ ನಮ್ಮ ಶಾಸಕರು ಕಾಮಗಾರಿ ಆದೇಶ ಪತ್ರ ಪಡೆದು ಕೆಲಸ ಮುಗಿಸಲು ಸಾಧ್ಯವಾಗುವುದಾದರೆ, ಕೂಳೂರಿನಲ್ಲಿ ನಾಲ್ಕು ವರ್ಷವಾದರೂ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಶಾಸಕರಿಗೆ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಎಎಂಆರ್ ಡ್ಯಾಮ್ ನಲ್ಲಿ ನೀರಿನ ಮಟ್ಟ ಕಾಪಾಡಿಕೊಳ್ಳಲಾಗದೇ ಅದನ್ನು ವಾಣಿಜ್ಯ ಬಳಕೆಗೆ ಬಳಸಿ ಈಗ ಡ್ಯಾಂ ಖಾಲಿ ಮಡಿ ಕುಳಿತಿರುವುದು ಆಡಳಿತ ವೈಫಲ್ಯ, ದ.ಕ. ಜಿಲ್ಲೆಯಲ್ಲಿ ಧ್ವೇಷದ ವಾತಾವರಣ ನಿರ್ಮಾಣವಾದೆ. ಇದು ಇಲ್ಲಿನ ಶಿಕ್ಷಣ ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂದು ದೂರಿದ ಮಹಾಬಲ ಮಾರ್ಲ, ಕಾಂಗ್ರೆಸ್ ಟಿಕಿಟ್ ನೀಡಿರುವ ಸಮರ್ಥ ಅಭ್ಯರ್ಥಿ ಇನಾಯತ್ ಅಲಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮಾಡಬೇಕೆಂದು ಇದೇ ವೇಳೆ ಮತದಾರರಲ್ಲಿ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಟ್ಯಾನಿಯಾ ಲೋರಿಸ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಮನಪಾ ಸದಸ್ಯ ಅನಿಲ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಸಮೀರ್ ಕಾಟಿಪಳ್ಳ, ಪರಿಶಿಷ್ಟಜಾತಿ ಪಂಗಡಗಳ ಅಧ್ಯಕ್ಷ ಮಲ್ಲಿಕಾರ್ಜುನ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಉತ್ತರದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹೊಟ್ ರೋಡ್ ಶೋ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಪರವಾಗಿ ನಾಳೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹೊಟ್ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಸುರತ್ಕಲ್ ಬಳಿಯ ಕಾನ ಕ್ರಾಸ್ ನಿಂದ ಸುರತ್ಕಲ್ ಜಂಕ್ಷನ್ ವಿದ್ಯಾದಾಯಿನಿ ಶಾಲೆಯವರೆಗೆ ರೋಡ್ ಶೋ ನಡೆಯಲಿದ್ದು ಸಾರ್ವಜನಿಕರಲ್ಲಿ ಮತ ಯಾಚಿಸಲಿದ್ದಾರೆ. ಇನಾಯತ್ ಅಲಿ, ಸುರತ್ಕಲ್, ಗುರುಪುರ ಬ್ಲಾಕ್ ನ ಪ್ರಮುಖರು, ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಕಚೇರಿ ಪ್ರಕಟಣೆ ತಿಳಿಸಿದೆ.