ವಿಧಾನಸಭೆ ಚುನಾವಣೆ | ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯಾಂಶಗಳು

ಬೆಂಗಳೂರು, ಮೇ 2: ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಇಂದು ಬಿಡುಗಡೆಗೊಳಿಸಿದೆ. ಇದರಲ್ಲಿ ಈಗಾಗಲೇ ಘೋಷಿಸಿರುವ ಗೃಹಜ್ಯೋತಿ, ಅನ್ನ ಭಾಗ್ಯ, ಗೃಹಲಕ್ಷ್ಮೀ, ಯುವನಿಧಿ ಹಾಗೂ ಶಕ್ತಿ ಯೋಜನೆಯನ್ನು ಒಳಗೊಂಡಂತೆ ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ.
ರೈತರಿಗೆ ಬಡ್ಡಿರಹಿತ ಸಾಲ 3 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ವಿಸ್ತರಣೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ರೂ.11,500ರಿಂದ 15 ಸಾವಿರಕ್ಕೆ ಹೆಚ್ಚಳ, ಬಿಜೆಪಿ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ರದ್ದತಿಗೆ ಕ್ರಮ, ಕುವೆಂಪು, ಬಸವಣ್ಣ, ಪಂಪ ಮತ್ತು ಸಾಂವಿಧಾನಿಕ ನಿರ್ದೇಶನವಾದ ವೈಜ್ಞಾನಿಕ ಮನೋಭಾವವನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಸೇರಿದಂತೆ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದೆ.
ಪ್ರಣಾಳಿಕೆಯಲ್ಲಿರುವ ಮುಖ್ಯಾಂಶಗಳು
►ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್
►ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ
►ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ 2 ಸಾವಿರ ರೂ.
►ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ತೆ: ಪದವೀಧರರಿಗೆ 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂ.
►ಶಕ್ತಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ
►ಸರಕಾರದಲ್ಲಿ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ
►2006ರಿಂದ ನೇಮಕವಾದ ಪಿಂಚಣಿಗೆ ಅರ್ಹತೆಯುಳ್ಳ ಸರಕಾರಿ, ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿಯಡಿ ತರಲು ಕ್ರಮ.
►ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ನೌಕರರ ಖಾಯಮಾತಿ.
►ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ಸಂಘಟನೆಗಳ ನಿಷೇಧ ಸೇರಿದಂತೆ ಕಠಿಣ ಕಾನೂನು ಕ್ರಮ.
►ಅಂಗನವಾಡಿ ಕಾರ್ಯಕರ್ತೆಯರ ವೇತನ ರೂ.11,500ರಿಂದ 15 ಸಾವಿರಕ್ಕೆ ಹೆಚ್ಚಳ
►ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರೂ.ನಿಂದ 10 ಸಾವಿರ ರೂ.ಗೆ ಹೆಚ್ಚಳ.
►ಆಶಾ ಕಾರ್ಯಕರ್ತೆಯರ ಗೌರವಧನ 5 ಸಾವಿರದಿಂದ 8 ಸಾವಿರ ರೂ.ಗೆ ಹೆಚ್ಚಳ.
►ಬಿಸಿಯೂಟ ಅಡುಗೆ ಸಿಬ್ಬಂದಿಗೆ ಮಾಸಿಕ ಗೌರವಧನ 6 ಸಾವಿರ ರೂ.ಗೆ ಹೆಚ್ಚಳ.
►ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ತೆ
►ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ
►ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ
►ಕನಕಪುರದಲ್ಲಿ ಅತ್ಯಾಧುನಿಕ ವಿಶ್ವ ದರ್ಜೆಯ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯ ಸ್ಥಾಪನೆ
►ರೈತರಿಗೆ ಬಡ್ಡಿರಹಿತ ಸಾಲ 3 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ವಿಸ್ತರಣೆ.
►ಕನಿಷ್ಠ ಶೇ.3ರ ಬಡ್ಡಿದರದಲ್ಲಿ 15 ಲಕ್ಷ ರೂ. ವರೆಗೆ ಸಾಲ. ಸರಕಾರದಿಂದಲೇ ಬಡ್ಡಿ ವ್ಯತ್ಯಾಸ ಪಾವತಿ.
►ಬಿಜೆಪಿ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ರದ್ದತಿಗೆ ಕ್ರಮ
►ರೈತರ ವಿರುದ್ಧ ದಾಖಲಾಗಿರುವ ರಾಜಕೀಯ ಪ್ರೇರಿತ ಎಲ್ಲ ಪ್ರಕರಣಗಳು ವಾಪಸ್.
►ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯ್ದೆಯ ವಿಧಿಗಳ ತಿದ್ದುಪಡಿ.
►ಮಿಷನ್ ಕ್ಷೀರ ಕ್ರಾಂತಿ: ಪ್ರತಿ ದಿನ 15 ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿ ಸಾಧನೆಗೆ ಯೋಜನೆ.
►ಕ್ಷೀರಧಾರೆ: ಪ್ರತೀ ಲೀಟರ್ ಹಾಲಿನ ಸಬ್ಸಿಡಿಯನ್ನು 5 ರೂ.ನಿಂದ 7 ರೂ.ಗೆ ಹೆಚ್ಚಳ.
►ಜಾನುವಾರು ಸಾಕಣೆದಾರರಿಂದ ಪ್ತತಿ ಕೆ.ಜಿ.ಗೆ 3 ರೂ.ನಂತೆ ಸೆಗಣಿ ಖರೀದಿ.
►ಯಾವುದೇ ಭದ್ರತೆ ಪಡೆಯದೆ 2 ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಮಹಿಳೆಯರಿಗೆ ಬಡ್ಡಿರಹಿತ ಸಾಲ.
►ಮತ್ಸ್ಯಕ್ರಾಂತಿ: ಮೀನುಗಾರಿಕೆಯಿಂದ 12 ಸಾವಿರ ಕೋಟಿ ರೂ.ನ ಬ್ಲೂ ಎಕಾನಮಿ ಗುರಿ ಸಾಧಿಸಲು ಕಾರ್ಯಕ್ರಮ.
►ಮೀನುಗಾರಿಕಾ ಮಹಿಳೆಯರಿಗೆ 3 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ.
►ಮತ್ಸ್ಯಭಾಗ್ಯ: ಆಳ ಸಮುದ್ರ ಮೀನುಗಾರಿಕೆಗೆ ಪ್ರತೀ ವರ್ಷ 500 ಲೀಟರ್ ವರೆಗೆ ತೆರಿಗೆ ಮುಕ್ತ ಡೀಸೆಲ್.
►ಮತ್ಸ್ಯ ಆಶಾಕಿರಣ ಯೋಜನೆ: ಮೀನುಗಾರಿಕೆ ಸ್ಥಗಿತ ಅವಧಿಯಲ್ಲಿ ಎಲ್ಲಾ ಮೀನುಗಾರರಿಗೆ ತಿಂಗಳಿಗೆ 6 ಸಾವಿರ ರೂ. ಒದಗಿಸಲು ಕ್ರಮ.
►ನಾಡದೋಣಿ ಮೀನುಗಾರರಿಗೆ 10 ಸಾವಿರ ರೂ. ಹಣಕಾಸು ನೆರವು.
►ನೀರಾವರಿಗಾಗಿ ಮುಂದಿನ 5 ವರ್ಷಗಳಲ್ಲಿ 1.50 ಲಕ್ಷ ಕೋಟಿ ರೂ.
►BBMP ನಿರ್ವಹಣೆಗಾಗಿಯೇ ಸಮಗ್ರ ಶಾಸನ ಜಾರಿ
►BMTC ಬಸ್ ಗಳ ಸಂಖ್ಯೆ 10 ಸಾವಿರಕ್ಕೆ ಹೆಚ್ಚಳ
►KSRTC ಬಸ್ ಗಳ ಸಂಖ್ಯೆಯನ್ನು 15 ಸಾವಿಕ್ಕೆ ಹೆಚ್ಚಳ
►ಒಂದೇ ವೇದಿಕೆ ಅಡಿ ಸಾರಿಗೆ ವಿದ್ಯುತ್ ವಸತಿ ಒಳಚರಂಡಿ, ನೀರು ಸರಬರಾಜು ಸೌಕರ್ಯ
►ಬೆಂಗಳೂರು ನಗರದ ವಿವಿಧ ಪ್ರದೇಶಗಳಿಗೆ ರಾತ್ರಿ 1 ಗಂಟೆ ತನಕ ಬಸ್ ವ್ಯವಸ್ಥೆ
►ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಚಿನ್ನ ಮತ್ತು ವಜ್ರದ ಪಾರ್ಕ್ ಸ್ಥಾಪನೆ.
►ಸ್ಟಾರ್ಟ್ ಅಪ್ ನಿಧಿ: ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 10 ಕೋ.ರೂ. ನೀಡಿಕೆ.
►ಬ್ರಹ್ಮಾವರದಲ್ಲಿ ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಉತ್ತೇಜನ.
►ಇಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಖರೀದಿಗೆ ರಾಜ್ಯ GSTಯಲ್ಲಿ ರಿಯಾಯಿತಿ.
►ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಯುವಕರಿಗೆ 50 ಟ್ಯಾಕ್ಸಿಗಳಿಗೆ ಪರವಾನಿಗೆ ಮತ್ತು ಶೇ. 5 ಬಡ್ಡಿದರದಲ್ಲಿ ಸಹಾಯಧನ.
►20ಕ್ಕಿಂತ ಅಧಿಕ ನೌಕರರು ಇರುವ ಹೊಟೇಲ್ ಗಳಿಗೆ ಉದ್ಯಮದ ಸ್ಥಾನಮಾನ.
►ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ.
►ಕುವೆಂಪು, ಬಸವಣ್ಣ, ಪಂಪ ಮತ್ತು ಸಾಂವಿಧಾನಿಕ ನಿರ್ದೇಶನವಾದ ವೈಜ್ಞಾನಿಕ ಮನೋಭಾವವನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆ.
RTEಯಡಿಯಲ್ಲಿ ಶಾಲೆಗಳ ಪ್ರವೇಶಾತಿಗೆ ಇರುವ ಆದಾಯ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಳ
►ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿಯಲ್ಲಿ ಹಮಾಲಿಗಳು, ಮೀನುಗಾರರು, ನೇಕಾರ ಸಮುದಾಯ, ಕಟ್ಟಡ ಕಾರ್ಮಿಕರು ಮನೆಕೆಲಸದವರು ಹಾಗೂ ಇತರ ಅಸಂಘಟಿತ ಕ್ಷೇತ್ರಗಳಿಗೆ ವಿಸ್ತರಣೆ.
►ಪ್ರತೀ 100 ಕಿ.ಮೀ.ಗೆ ಒಂದರಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರ್ವಸಜ್ಜಿತ ಟ್ರೂಮಾ ಕೇಂದ್ರ ಸ್ಥಾಪನೆ
►5 ವರ್ಷಗಳಲ್ಲಿ ಎಲ್ಲಾ SC-ST ಕುಟುಂಬಗಳಿಗೆ ಮನೆ ನೀಡಲಾಗುವುದು. ಸರಕಾರದಿಂದಲೇ ಮನೆಗಳ ನಿರ್ಮಾಣ.
►ಬುಡಕಟ್ಟು ಸಮುದಾಯದ 100 ಸಾಧಕರಿಗೆ ತಲಾ 1 ಲಕ್ಷ ರೂ. ಮೊತ್ತದ 'ಆದಿವಾಸಿ ಸಿರಿ' ಪ್ರಶಸ್ತಿ ಗೌರವ.
►ಮಂಗಳಮುಖಿ ಮಂಡಳಿ ಸ್ಥಾಪನೆ
►ಎಲ್ಲ 25 ಸಾವಿರ ಪೌರಕಾರ್ಮಿಕರ ಸೇವೇ ಖಾಯಂ ಮತ್ತು ಸರಕಾರಿ ಸೌಲಭ್ಯಗಳ ವಿಸ್ತರಣೆ
►ಬೀದಿಬದಿ ವ್ಯಾಪಾರಿಗಳಿಗೆ ಒಂದು ಬಾರಿಯ ನೆರವಿನ ರೂಪದಲ್ಲಿ 20 ಸಾವಿರ ರೂ. ಅನುದಾನ.
►ಶ್ರವಣ ಕುಮಾರ ಹಿರಿಯ ನಾಗರಿಕರ ಕಲ್ಯಾಣ ನಿಧಿ ಸ್ಥಾಪನೆಗೆ 3,000 ಕೋಟಿ ರೂ. ಹೂಡಿಕೆ.
ಹಿರಿಯ ನಾಗರಿಕರಿಗೆ 2 ವರ್ಷಗಳಿಗೊಮ್ಮೆ ರಾಜ್ಯದ 15 ಪವಿತ್ರ ಸ್ಥಳಗಳು ಹಾಗೂ ದೇಶದ 10 ಯಾತ್ರಾ ತಾಣಗಳಿಗೆ ಉಚಿತ ಪ್ರವಾಸ.
►ಪತ್ರಕರ್ತರ ಕಲ್ಯಾಣ ನಿಧಿಗೆ 500 ಕೋ.ರೂ. ಮೀಸಲು.







