ಧಾರ್ಮಿಕ ಸ್ವಾತಂತ್ರ್ಯ ವಿಚಾರದಲ್ಲಿ ಭಾರತವನ್ನು ಕಪ್ಪುಪಟ್ಟಿಗೆ ಸೇರಿಸಲು ಅಮೆರಿಕ ಸರ್ಕಾರಿ ಸಮಿತಿ ಸಲಹೆ
"ಮೋದಿ ನೇತೃತ್ವದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿ ಹದಗೆಟ್ಟಿದೆ"

ವಾಷಿಂಗ್ಟನ್: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿ ಮತ್ತಷ್ಟು ಹದಹೆಟ್ಟಿದ್ದು, ಧಾರ್ಮಿಕ ಸ್ವಾತಂತ್ರ್ಯ ವಿಚಾರದಲ್ಲಿ ಭಾರತವನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಅಮೆರಿಕದ ಸರ್ಕಾರಿ ಸಮಿತಿ ತನ್ನ ಆಗ್ರಹವನ್ನು ಪುನರುಚ್ಚರಿಸಿದೆ ಎಂದು timesofindia ವರದಿ ಮಾಡಿದೆ.
ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಬಗೆಗಿನ ಸಮಿತಿ ಶಿಫಾರಸ್ಸುಗಳನ್ನು ಮಾಡಬಹುದೇ ವಿನಃ ನೀತಿ ರೂಪಿಸುವ ಅಧಿಕಾರ ಇದಕ್ಕೆ ಇಲ್ಲ. ಅದ್ದರಿಂದ ಅಮೆರಿಕ- ಭಾರತ ನಡುವಿನ ಪಾಲುದಾರಿಕೆ ಮತ್ತಷ್ಟು ವಿಸ್ತರಣೆ ಹಂತದಲ್ಲಿರುವ ಕಾರಣದಿಂದ ಈ ಶಿಫಾರಸ್ಸನ್ನು ರಕ್ಷಣಾ ಇಲಾಖೆ ಒಪ್ಪಿಕೊಳ್ಳುವ ಸಾಧ್ಯತೆ ಕ್ಷೀಣ ಎನ್ನಲಾಗಿದೆ. ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆತಂಕ ಇರುವ ಪ್ರತಿ ದೇಶಗಳನ್ನು ಸಮಿತಿ ಪ್ರತಿ ವರ್ಷ ಪಟ್ಟಿ ಮಾಡುತ್ತದೆ.
ಈ ಸಮಿತಿ ಸದಸ್ಯರನ್ನು ಅಮೆರಿಕದ ಅಧ್ಯಕ್ಷರು ನೇಮಕ ಮಾಡುತ್ತಾರೆ ಹಾಗೂ ಅಮೆರಿಕ ಕಾಂಗ್ರೆಸ್‌ನ ಮುಖಂಡರು, ಚೀನಾ, ಇರಾನ್, ಮ್ಯಾನ್ಮಾರ್, ಪಾಕಿಸ್ತಾನ, ರಷ್ಯಾ ಹಾಗೂ ಸೌದಿ ಅರೇಬಿಯಾ ಸೇರಿದಂತೆ ರಕ್ಷಣಾ ಇಲಾಖೆಯ ಎಲ್ಲ ನಿಯೋಜನೆಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ರಕ್ಷಣಾ ಇಲಾಖೆ ಭಾರತ, ನೈಜೀರಿಯಾ ಹಾಗೂ ವಿಯೇಟ್ನಾಂ ಅನ್ನು ಕೂಡಾ ಸೇರಿಸಬೇಕು ಎಂದು ಶಿಫಾರಸ್ಸು ಮಾಡಿದ್ದರು.
ಸಮಿತಿಯ ವಾರ್ಷಿಕ ವರದಿಯಲ್ಲಿ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರನ್ನು ಗುರಿ ಮಾಡಿ ಅವರ ಆಸ್ತಿ ಪಾಸ್ತಿಗಳನ್ನು ನಾಶಪಡಿಸುವುದನ್ನು ಉಲ್ಲೇಖಿಸಲಾಗಿದೆ. ಜತೆಗೆ ಮೋದಿಯವರ ಬಿಜೆಪಿ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳನ್ನು ಕೂಡಾ ಪರಿಗಣಿಸಿದೆ.
"ತಾರತಮ್ಯದ ಕಾನೂನುಗಳನ್ನು ಜಾರಿಗೊಳಿಸುವ ಕ್ರಮ ಮುಂದುವರಿದಿದ್ದು, ಗುಂಪುಗಳು ಬೆದರಿಕೆ ಹಾಕುವ ಮತ್ತು ಹಿಂಸಾಸಂಸ್ಕೃತಿಗೆ ಇದು ಅನುಕೂಲ ಮಾಡಿಕೊಡುತ್ತಿದೆ" ಎಂದು ವರದಿಯಲ್ಲಿ ವಿವರಿಸಲಾಗಿದೆ. ಸತತ ನಾಲ್ಕು ವರ್ಷಗಳಿಂದ ಸಮಿತಿ ಈ ಶಿಫಾರಸ್ಸುಗಳನ್ನು ಮಾಡುತ್ತಿರುವುದು ಭಾರತವನ್ನು ಕೆರಳಿಸಿದ್ದು, ಸಮಿತಿ ಪಕ್ಷಪಾತಿ ನಿಲುವು ತಾಳಿದೆ ಎಂದು ದೂರಿದೆ.







