ಮೇ 3ರಂದು ಪ್ರಧಾನಿ ಮೋದಿ ಮುಲ್ಕಿಗೆ ಭೇಟಿ: ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ

ಮಂಗಳೂರು : ಮುಲ್ಕಿ ಸಮೀಪದ ಕೊಲ್ನಾಡಿನಲ್ಲಿ ಮೇ 3ರಂದು ನಡೆಯುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಯ ಭದ್ರತೆಯ ದೃಷ್ಟಿಯಿಂದ ಹಾಗೂ ಸಂಚಾರ ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
1. ಉಡುಪಿಯಿಂದ ಮಂಗಳೂರು ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳು ಮುಲ್ಕಿ ವಿಜಯ ಸನ್ನಿಧಿಯ ಬಳಿ ಎಡಕ್ಕೆ ಚಲಿಸಿ ಕಿನ್ನಿಗೋಳಿ -ಕಟೀಲು-ಬಜ್ಪೆ-ಕಾವೂರು ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.
2. ಮಂಗಳೂರು ಕಡೆಯಿಂದ ಉಡುಪಿಗೆ ಹೋಗುವ ಎಲ್ಲಾ ರೀತಿಯ ವಾಹನಗಳು ಕೆಪಿಟಿ ಜಂಕ್ಷನ್ನಲ್ಲಿ ಬಲಕ್ಕೆ ಚಲಿಸಿ ಬೊಂದೇಲ್ - ಕಾವೂರು-ಬಜ್ಪೆ-ಕಟೀಲು-ಕಿನ್ನಿಗೋಳಿ-ಮುಲ್ಕಿ ಕಡೆಗೆ ಅಥವಾ ಕೂಳೂರು ಜಂಕ್ಷನ್ನಿಂದ ಬಲಕ್ಕೆ ಚಲಿಸಿ ಕಾವೂರು-ಬಜ್ಪೆ-ಕಟೀಲು -ಕಿನ್ನಿಗೋಳಿ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸುವುದು.
3. ಮಂಗಳೂರು, ಸುರತ್ಕಲ್ ಕಡೆಯಿಂದ ಉಡುಪಿಗೆ ಹೋಗುವ ವಾಹನಗಳು ಹಳೆಯಂಗಡಿ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಪಕ್ಷಿಕೆರೆ ಎಸ್-ಕೋಡಿ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸುವುದು.
ವಾಹನ ಸಂಚಾರ ನಿಷೇಧಿತ ಸ್ಥಳಗಳು (ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ)
1.ಹಳೆಯಂಗಡಿ ಜಂಕ್ಷನ್ನಿಂದ ಮುಲ್ಕಿ ವಿಜಯ ಸನ್ನಿಧಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಎರಡು ಬದಿಯ ರಸ್ತೆಗಳಲ್ಲಿ ಸಭಾ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಇತರೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿದೆ.
2. ರಾಷ್ಟ್ರೀಯ ಹೆದ್ದಾರಿಯ ಕೊಲ್ನಾಡು ಜಂಕ್ಷನ್ನಿಂದ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆ.ಎಸ್. ರಾವ್ ನಗರಕ್ಕೆ ಹೋಗುವ ರಸ್ತೆಗಳಲ್ಲಿ ಸಭಾ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿದೆ.
3. ಕಾರ್ನಾಡು ಬೈಪಾಸ್, ಕಾರ್ನಾಡು ಜಂಕ್ಷನ್ (ಕಿನ್ನಿಗೋಳಿ ರಸ್ತೆ), ಮುಲ್ಕಿ ರೈಲ್ವೆ ಸ್ಟೇಷನ್ ಕ್ರಾಸ್ (ಕಿನ್ನಿಗೋಳ ರಸ್ತೆ), ಎಸ್-ಕೋಡಿ ಕ್ರಾಸ್ (ಕಿನ್ನಿಗೋಳಿ ರಸ್ತೆ)ನಲ್ಲೂ ವಾಹನ ಸಂಚಾರ ನಿಷೇಧಿಸಲಾಗಿದೆ.
ವಾಹನ ನಿಲುಗಡೆ ನಿಷೇಧಿಸಿದ ಸ್ಥಳಗಳು
1. ಹಳೆಯಂಗಡಿ ಜಂಕ್ಷನ್ನಿಂದ ಮುಲ್ಕಿ ವಿಜಯ ಸನ್ನಿಧಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.
2. ರಾಷ್ಟ್ರೀಯ ಹೆದ್ದಾರಿಯಿಂದ ಕೆ.ಎಸ್. ರಾವ್ ನಗರಕ್ಕೆ ಹೋಗುವ ರಸ್ತೆ, ಕೊಲ್ನಾಡು ಜಂಕ್ಷನ್ನಿಂದ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆ.ಎಸ್.ರಾವ್ ನಗರಕ್ಕೆ ಹೋಗುವ ರಸ್ತೆ ಹಾಗೂ ಕಾರ್ನಾಡು ಬೈಪಾಸಿನಿಂದ ಕಾರ್ನಾಡು ಜಂಕ್ಷನ್ಗೆ ತೆರಳುವ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.
ವಾಹನ ನಿಲುಗಡೆ ಸ್ಥಳಗಳು
1. ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಬೆಳಗ್ಗೆ 9ರೊಳಗಾಗಿ ಸಾರ್ವಜನಿಕರನ್ನು ಕಾರ್ಯಕ್ರಮ ಸ್ಥಳದ ಪ್ರವೇಶ ದ್ವಾರದ ಬಳಿ ಇಳಿಸಿ ಜಾಗತಿಕ ಬಂಟರ ಸಂಘದ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆಗೊಳಿಸುವುದು.
2. ಉಡುಪಿಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಕಾರ್ನಾಡು ಬೈಪಾಸಿನಲ್ಲಿ ಸಾರ್ವಜನಿಕರನ್ನು ಯು-ಟರ್ನ್ ಮಾಡಿ ಜಾಗತಿಕ ಬಂಟರ ಸಂಘದ ಬಳಿಯ ಪಡುಬೈಲು ಪಾರ್ಕಿಂಗ್ ಸ್ಥಳದಲ್ಲಿ ಬಸ್ಸುಗಳನ್ನು ನಿಲುಗಡೆಗೊಳಿಸುವುದು.
3. ಮಂಗಳೂರು ಹಾಗೂ ಉಡುಪಿಯಿಂದ ಆಗಮಿಸುವ ಸಾರ್ವಜನಿಕ ಲಘು ವಾಹನಗಳು ಹಾಗೂ ದ್ವಿ-ಚಕ್ರ ವಾಹನಗಳು ಕಾರ್ಯಕ್ರಮ ಸ್ಥಳದ ಎದುರಿನ ಅಂದರೆ ಉಡುಪಿ ಎಡಬದಿಯಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
4. ಮಂಗಳೂರು ಕಡೆಯಿಂದ ಆಗಮಿಸುವ ಸಾರ್ವಜನಿಕ ಲಘು ವಾಹನಗಳು ಹಾಗೂ ದ್ವಿ-ಚಕ್ರ ವಾಹನಗಳು ಮಂಗಳೂರು- ಉಡುಪಿ ರಸ್ತೆಯ ಎಡಬದಿಯಲ್ಲಿರುವ ಸುಂದರ್ ರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡುವುದು.
5. ಕಾರ್ಯಕ್ರಮಕ್ಕೆ ಆಗಮಿಸುವ ವಿಐಪಿ ವಾಹನಗಳು ಕಾರ್ಯಕ್ರಮ ಸ್ಥಳದ ಪಶ್ಚಿಮ ಬದಿಯಲ್ಲಿನ ಅಂದರೆ ಮಂಗಳೂರು ಉಡುಪಿ ರಸ್ತೆಯ ಎಡಬದಿಯಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೊಳಿಸುವುದು. (ಗುಂಡಾಲು ಗುತ್ತು ನಿಲುಗಡೆ ಸ್ಥಳ)