ಉಡುಪಿ: ಏಕಕಾಲದಲ್ಲಿ ಐದು ಅನಾಥ ಶವಗಳ ಅಂತ್ಯಸಂಸ್ಕಾರ

ಉಡುಪಿ : ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಹಾಗೂ ಪೋಲಿಸರು ಏಕಕಾಲದಲ್ಲಿ ವಾರಸು ದಾರರಿಲ್ಲದ ಐದು ಶವಗಳ ಅಂತ್ಯ ಸಂಸ್ಕಾರವನ್ನು ಮಂಗಳವಾರ ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ನೆರವೇರಿಸಿದರು.
ಒಳರೋಗಿಯಾಗಿ ದಾಖಲಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಅಪರಿಚಿತ ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದರು. ಶವಗಳನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಡಲಾಗಿತ್ತು. ಮಾಧ್ಯಮ ಪ್ರಕಟಣೆ ನೀಡಿ ಕಾಲಮಿತಿ ಕಳೆದರೂ ಮೃತರ ವಾರಸುದಾರರು ಸಂಪರ್ಕಿಸದೆ ಇರುವುದರಿಂದ ಕಾನೂನಿನಂತೆ ಅಂತ್ಯಸಂಸ್ಕಾರ ನಡೆಸಲಾಯಿತು.
ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಕೇಶವ ಬಂಗೇರ ಗಂಗೊಳ್ಳಿ ಹೆಡ್ ಕಾನ್ಸ್ಟೇಬಲ್ ಕಾನೂನು ಪ್ರಕ್ರಿಯೆ ನಡೆಸಿದರು. ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಪ್ರದೀಪ್, ರಾಮದಾಸ್ ಪಾಲನ್, ಸಾಜೀ ಕುಮಾರ್ ಮೊದಲಾದವರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ನಗರ ಸಭೆ, ಅಣ್ಣಪ್ಪ ಪೂಜಾರಿ, ವಿಷ್ಣು ಪ್ಲವರ್, ಉದಯ ಕುಮಾರ್ ಉದ್ಯಮಿ ಸಹಕಾರ ನೀಡಿದರು.
Next Story