ಚಿಕ್ಕಮಗಳೂರು ನಗರದಲ್ಲಿ ರಾಹುಲ್‍ಗಾಂಧಿ ರೋಡ್‍ಶೋ

ಚಿಕ್ಕಮಗಳೂರು, ಮೇ 2: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಚಿಕ್ಕಮಗಳೂರು ಐದು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮತ್ತು ದಾವಣಗೆರೆ ಹರಿಹರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಮಂಗಳ ವಾರ ಮಧ್ಯಾಹ್ನ 3ಗಂಟೆಗೆ ಚಿಕ್ಕಮಗಳೂರು ನಗರಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದರು. ರಾಹುಲ್ ಗಾಂಧಿಯ ವರು ಹೆಲಿಪ್ಯಾಡ್‍ಗೆ ಆಗಮಿಸುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಅವರನ್ನು ಸ್ವಾಗತಿಸಿದರು.
ಹೆಲಿಪ್ಯಾಡ್‍ನಿಂದ ನೇರವಾಗಿ ರೋಡ್ ಶೋನಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿಯವರು ನಗರದ ಹನುಮಂತಪ್ಪ ವೃತ್ತದಿಂದ ರೋಡ್ ಶೋ ಆರಂಭಿಸಿದ್ದರು. ತೆರದ ವಾಹನದಲ್ಲಿ ರೋಡ್ ಶೋ ನಡೆಸಿದ ಅವರು ಹನುಮಂತಪ್ಪ ವೃತ್ತದಿಂದ ಆಜಾದ್‍ಪಾರ್ಕ್ ವರೆಗೂ ರೋಡ್ ಶೋ ನಡೆಸಿದರು.
ನಂತರ ಆಜಾದ್‍ಪಾರ್ಕ್ ವೃತ್ತದಲ್ಲಿ ತೆರೆದ ವಾಹನದಲ್ಲೇ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಬಿ.ಎಲ್.ಶಂಕರ್ ಹಿಂದಿ ಭಾಷೆಯನ್ನು ಕನ್ನಡಕ್ಕೆ ತರ್ಜುನೆ ಮಾಡಿದರು. ಮಾಜಿ ಸಚಿವೆ ಡಾ|ಮೋಟಮ್ಮ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ, ಕಡೂರು ಕ್ಷೇತ್ರದ ಅಭ್ಯರ್ಥಿ ಕೆ.ಎಸ್.ಆನಂದ್, ತರೀಕೆರೆ ಕ್ಷೇತ್ರದ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್, ಶೃಂಗೇರಿ ಕ್ಷೇತ್ರದ ಟಿ.ಡಿ.ರಾಜೇಗೌಡ, ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿ ನಯನ ಮೋಟಮ್ಮ ಸೇರಿದಂತೆ ಅನೇಕರು ಇದ್ದರು.
ಆಜಾದ್ ಪಾರ್ಕ್ ವೃತ್ತದಲ್ಲಿ ಚುನಾವಣಾ ಪ್ರಚಾರದ ಬಹಿರಂಗಸಭೆ ಆಯೋಜಿಸಲಾಗಿತ್ತು. ಗ್ರಾಮೀಣ ಪ್ರದೇಶ ಸೇರಿದಂತೆ ನಗರ ಪ್ರದೇಶದಿಂದ ರಾಹುಲ್ ಗಾಂಧಿಯವರ ಭಾಷಣ ಕೇಳಲು ತುಂಬಿದ್ದರು. ಉರಿ ಬಿಸಿಲು ಲೆಕ್ಕಿ ಸದೇ ಭಾಷಣ ಆಲಿಸಿದರು. ನಗರದ ಹನುಮಂತಪ್ಪ ವೃತ್ತದಿಂದ ರೋಡ್ ಶೋ ಆರಂಭವಾಗುತ್ತಿದ್ದಂತೆ ಹನು ಮಂತಪ್ಪ ವೃತ್ತದಲ್ಲಿ ಜನಸಾಗರವೇ ತುಂಬಿತ್ತು. ತೆರೆದ ವಾಹನದಲ್ಲಿ ರಾಹುಲ್ ಗಾಂಧಿ ಜನರತ್ತಾ ಕೈಬಿಸುತ್ತಾ ಮುಂದೇ ಸಾಗುತ್ತಿದ್ದರೇ ರಸ್ತೆಯ ಎರಡು ಇಕ್ಕೆಲಗಳಲ್ಲಿ ನಿಂತು ಜನರು ವೀಕ್ಷಿಸಿದರು. ಆಜಾದ್‍ಪಾರ್ಕ್ ವೃತ್ತದಲ್ಲಿ ಜನಸಾಗರವೇ ನೆರೆದಿತ್ತು.
ಬೀಗಿ ಬಂದೋಬಸ್ತ್: ರಾಹುಲ್‍ಗಾಂಧಿ ಆಗಮದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬೀಗಿ ಪೋಲಿಸ್ ಬಂದೋಬಸ್ತ್ ನಿಯೋಜಿ ಸಿತ್ತು. ರೋಡ್ ಶೋ ನಡೆಯುವ ಎಂ.ಜಿ.ರಸ್ತೆಯಲ್ಲಿ ವಾಹನ ಸಂಚಾರ ನಿಷೇದಿಸಲಾಗಿತ್ತು. ಅಡ್ಡರಸ್ತೆ ಗಳಿಗೆ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿತ್ತು. ಐ.ಜಿ.ರಸ್ತೆ ಮತ್ತು ಮಾರ್ಕೇಟ್ ರಸ್ತೆಗಳಲ್ಲಿ ವಾಹನ ದಟ್ಟಣೆ ಏರ್ಪ ಟ್ಟಿತ್ತು. ಸಿಆರ್‍ಪಿಎಫ್ ಸಿಬ್ಬಂದಿಯನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು.
ಚಿಕ್ಕಮಗಳೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ, ತರೀಕೆರೆ ಕ್ಷೇತ್ರ ಜಿ.ಎಚ್.ಶ್ರೀನಿವಾಸ್, ಶೃಂಗೇರಿ ಕ್ಷೇತ್ರ ಟಿ.ಡಿ.ರಾಜೇಗೌಡ, ಮೂಡಿಗೆರೆ ಕ್ಷೇತ್ರದ ನಯನಾ ಮೋಟಮ್ಮ, ಕಡೂರು ಕ್ಷೇತ್ರದ ಕೆ.ಎಸ್.ಆನಂದ್, ಮುಖಂಡರಾದ ಬಿ.ಎಲ್.ಶಂಕರ್, ಮಾಜಿ ಸಚಿವೆ ಮೋಟಮ್ಮ, ಮಾಜಿ ಎಮ್ಮೆಲ್ಸಿ ಗಾಯತ್ರಿಶಾಂತೇಗೌಡ, ಡಾ.ಕೆ.ಪಿ.ಅಂಶುಮಂತ್, ಗಾಯತ್ರಿ ಶಾಂತೇಗೌಡ ಮತ್ತಿತರರು ರೋಡ್ ಶೋ ವೇಳೆ ರಾಹುಲ್‍ಗಾಂಧಿಗೆ ಸಾಥ್ ನೀಡಿದ್ದರು.







