ವಿದ್ಯುತ್ ಆಘಾತಕ್ಕೆ ಒಳಗಾಗಿ ವ್ಯಕ್ತಿ ಮೃತ್ಯು

ಮಣಿಪಾಲ, ಮೇ 2: ಮರದಲ್ಲಿರುವ ಹೆಬ್ಬಲಸು ಕೊಯ್ಯುತ್ತಿದ್ದಾಗ ಕಬ್ಬಿಣದ ಕೊಕ್ಕೆ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ವ್ಯಕ್ತಿಯೊಬ್ಬರು ಆಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮೇ 1ರಂದು ಬೆಳಗ್ಗೆ 10.30ಕ್ಕೆ ಸಗ್ರಿ ಚಕ್ರತೀರ್ಥ ಎರಡನೇ ಕ್ರಾಸ್‌ನಲ್ಲಿ ನಡೆದಿದೆ.
ಮೃತರನ್ನು ಸಗ್ರಿ ಚಕ್ರತೀರ್ಥ ನಿವಾಸಿ ದಾಮೋದರ ಪ್ರಭು(53) ಎಂದು ಗುರುತಿಸಲಾಗಿದೆ.
ಡ್ರೈವರ್ ಕೆಲಸ ಮಾಡಿಕೊಂಡಿದ್ದ ಇವರು, ಮನೆಯ ಸಮೀಪದ ಮರಕ್ಕೆ ಏಣಿಯನ್ನು ಹಾಕಿ ಕಬ್ಬಿಣದ ಕೊಕ್ಕೆಯಿಂದ ಹೆಬ್ಬಲಸನ್ನು ತೆಗೆಯುತ್ತಿದ್ದರು. ಈ ವೇಳೆ ಕಬ್ಬಿಣಕದ ಕೊಕ್ಕೆಯು ಮರದ ಸಮೀಪವಿದ್ದ ವಿದ್ಯುತ್ ತಂತಿಗೆ ತಾಗಿದ್ದು, ಇದರ ಪರಿಣಾಮ ಪರಿಣಾಮ ದಾಮೋದರ ಪ್ರಭು ವಿದ್ಯುತ್ ಶಾಕ್ ಹೊಡೆದು ಮರದಿಂದ ನೆಲಕ್ಕೆ ಬಿದ್ದು ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





