ಗಾಂಧೀಜಿ ಮೊಮ್ಮಗ ಅರುಣ್ ಗಾಂಧಿ ನಿಧನ

ಹೊಸದಿಲ್ಲಿ,ಮೇ 2: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ಅರುಣ್ ಗಾಂಧಿ ಮಂಗಳವಾರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿದ್ದು ಅಲ್ಪಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು.
ಅರುಣ್ ಗಾಂಧಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕೊಲ್ಹಾಪುರದಲ್ಲಿ ಮಂಗಳವಾರ ಸಂಜೆ ನಡೆಯಿತು. ಪುತ್ರ ತುಷಾರ್ಗಾಂಧಿ ಅಂತ್ಯಕ್ರಿಯೆ ನೆರವೇರಿಸಿದರು.
ಅರುಣ್ ಗಾಂಧಿ ಅವರು 1934ರ ಎಪ್ರಿಲ್ 14ರಂದು ದರ್ಬಾನ್ ನಲ್ಲಿ ಮಣಿಲಾಲ್ ಗಾಂಧಿ ಹಾಗೂ ಸುಶೀಲಾ ಮಶ್ರುವಾಲಾ ದಂಪತಿಗೆ ಜನಿಸಿದರು. ಸಾಹಿತಿ ಹಾಗೂ ಸಾಮಾಜಿಕ- ರಾಜಕೀಯ ಹೋರಾಟಗಾರನಾಗಿ ಅರುಣ್ ಗಾಂಧಿ ಗಮನಸೆಳೆದಿದ್ದರು.
Next Story





