ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ಬೆಂಗಳೂರು, ಮೇ 2: ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆಯ ವೇಳಾಪಟ್ಟಿಯು ಪ್ರಕಟವಾಗಿದ್ದು, ಪರೀಕ್ಷೆಗಳು ಮೇ 22ರಿಂದ ಜೂನ್ 2ರ ವರೆಗೆ ನಡೆಯಲಿವೆ.
ಮೇ 22ರಂದು ಕನ್ನಡ, ಅರೇಬಿಕ್ ಭಾಷಾ ಪರೀಕ್ಷೆಗಳು, ಮೇ 23ರಂದು ರಸಾಯನಶಾಸ್ತ್ರ, ಮೇ 24ರಂದು ಇಂಗ್ಲೀಷ್, ಮೇ 25ರಂದು ಸಮಾಜಶಾಸ್ತ್ರ, ಮೇ 26 ಇತಿಹಾಸ ಹಾಗೂ ಸಂಖ್ಯಾಶಾಸ್ತ್ರ, ಮೇ 27ರಂದು ಹಿಂದಿ ಪರೀಕ್ಷೆಗಳು ನಡೆಯಲಿವೆ.
ಮೇ 29ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ, ಮೇ 30ರಂದು ಲೆಕ್ಕಶಾಸ್ತ್ರ, ಮೇ 31ರಂದು ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ ಜೂ.1ರಂದು ವ್ಯವಹಾರ ಅಧ್ಯಯನ ಹಾಗೂ ಜೂ.2ರಂದು ಅರ್ಥಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
ವೇಳಾಪಟ್ಟಿಯನ್ನು https://kseab.karnataka.gov.in/ ರಲ್ಲಿ ವೀಕ್ಷಿಸಬಹುದು ಎಂದು ಕರ್ನಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ತಿಳಿಸಿದೆ.
Next Story





