ಕೋಮು ಧ್ವೇಷದಿಂದ ಭಾರತ ವಿಶ್ವಗುರು ಆಗಲು ಸಾಧ್ಯವಿಲ್ಲ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಧ್ಮರಾಜ್

ಮುಲ್ಕಿ: ಮೇ 2: ದೇಶದಲ್ಲಿ ಕಾಂಗ್ರೆಸ್ ನಂತೆ ಸೌಹಾರ್ದದಿಂದ ರಾಜ್ಯಭಾರ ಮಾಡಿದಾಗ ಮಾತ್ರ ದೇಶ ವಿಶ್ವಗುರು ಆಗಲು ಸಾಧ್ಯ. ವಿನಹ ಕೋಮು ದ್ವೇಷ ಹರಡುವುದರಿಂದ ಸಾಧ್ಯವಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಹೇಳಿದ್ದಾರೆ.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕರ್ನಾಟಕ ರಾಜ್ಯದಲ್ಲಿ ನಡೆಯುವ ಚುನಾವಣೆ ದೇಶದ ದಿಕ್ಸೂಚಿ ಚುನಾವಣೆ ಎಂದು ನುಡಿದರು.
ಸಿದ್ದರಾಮಯ್ಯ ಸರಕಾರವಿದ್ದ ವೇಳೆ ಕಾಂಗ್ರೆಸ್ ನೀಡಿದ್ದ 168 ಭರವಸೆಗಳ ಪೈಕಿ 258 ಭರವಸೆಗಳನ್ನು ಈಡೇರಿಸಿತ್ತು. ಆದರೆ, ಬಳಿಕದ ಬಿಜೆಪಿ ಸರಕಾರ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಅಧಿಕಾರ ಹಿಡಿಯುವ ಒಂದೇ ಉದ್ದೇಶದಿಂದ ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ ವಿನಹ ರಾಜ್ಯದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಿಲ್ಲ ಎಂದು ಪದ್ಮರಾಜ್ ಆರೋಪಿಸಿದರು.
ಮೂಲ್ಕಿ ಮೂಡಬಿದ್ರೆ ವಿಧಾನಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಿಥುನ್ ರೈ ಇಲ್ಲಿನ ಯುವ ಜನತೆಗೆ ಉದ್ಯೋಗ ನೀಡುವ ಶಿಕ್ಷಣ ನೀಡುವ ಉತ್ತಮ ಉದ್ದೇಶದಿಂದ ಐಟಿ ಪಾರ್ಕ್, ಕ್ರೀಡಾಂಗಣ, ಸ್ಪೋರ್ಟ್ಸ್ ಹಾಸ್ಟೆಲ್ ಸೇರಿದಂತೆ ಕ್ಷೇತ್ರದ ಜನತೆಗೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ.
ಬಲ್ಗುಂಜೇ ಕೈಗಾರಿಕಾ ವಲಯ ಸ್ಥಾಪನೆ ಭೂಮಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಕ್ಷೇತ್ರದ ಶಾಸಕರೇ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು ಎಂಬ ಕುರಿತು ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿ ಉತ್ತರ ಲಭ್ಯವಾಗಿದೆ.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಿಂದುಳಿದಿರುವ ಬಿಲ್ಲವ ಸಮಾಜಕ್ಕೆ ಸತತ ಅನ್ಯಾಯಗಳನ್ನು ಮಾಡುತ್ತಿದ್ದ ಸಂದರ್ಭಗಳಲ್ಲಿ ಮುಲ್ಕಿ ಮೂಡಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಯಾರಿಗೂ ಕಾಯದೆ ತನ್ನ ಪ್ರತಿಭಟನೆಯನ್ನು ತಕ್ಷಣದಲ್ಲಿ ತೋರ್ಪಡಿಸುವ ಮೂಲಕ ನಾಯಕತ್ವದ ಗುಣವನ್ನು ಜನತೆಯ ಮುಂದಿರಿಸಿದ್ದಾರೆ. ಇಂತಹ ಜನಪರ ಕಾಳಜಿ ಉಳ್ಳ ನಾಯಕನಿಗೆ ಈ ಬಾರಿಯ ಚುನಾವಣೆಯಲ್ಲಿ ಮತಚಲಾಯಿಸಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲು ನೆರವಾಗಬೇಕೆಂದು ಪದ್ಮರಾಜ್ ಮನವಿ ಮಾಡಿಕೊಂಡರು
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೋಹನ್ ಕೋಟ್ಯಾನ್ ದೀಪಕ್ ಪೆರ್ಮುಧಿ ಗುರುರಾಜ ಪೂಜಾರಿ ತೋಕೂರು ಜನಾರ್ಧನ ಬಂಗೇರ ಪ್ರಮೋದ್ ಕುಮಾರ್ ಯೋಗೀಶ್ ಕೋಟ್ಯಾನ್ ಪ್ರವೀಣ್ ಬಲ್ಲೂರು, ಉಪಸ್ಥಿತರಿದ್ದರು.
"ಬಿಜೆಪಿಯಿಂದ ಬಿಲ್ಲವರ ಮೂಲೆಗುಂಪು"
ಕಳೆದ ಬಾರಿಯ ಗಣರಾಜ್ಯೋತ್ಸವ ಪರೇಡ್ ಸಂದರ್ಭ ವಿಶ್ವಕ್ಕೆ ಶಾಂತಿ ಸಮಾಧಾನವನ್ನು ಸಾರಿದ್ದ ಅಂಬೇಡ್ಕರ್ ಅವರು ಸಂವಿಧಾನ ರಚಿಸಲು ಪ್ರೇರಣೆಯಾಗಿದ್ದ ನಾರಾಯಣ ಗುರುಗಳ ಸ್ಥಬ್ಧ ಚಿತ್ರವನ್ನು ತೆಗೆದುಹಾಕುವಂತೆ ಬಿಜೆಪಿ ಸರಕಾರ ಟಾಕೀತು ಮಾಡಿತ್ತು. ಈ ವೇಳೆ ರಾಜ್ಯ ಸರ್ಕಾರ ಯಾವುದೇ ಆಕ್ಷೇಪಗಳನ್ನು ಸಲ್ಲಿಸಲು ಸಲ್ಲಿಸಲು ವಿಫಲವಾಗಿತ್ತು.
ಆರ್ಥಿಕವಾಗಿ ಹಿಂದುಳಿದಿರುವ ಬಿಲ್ಲವ ಸಮಾಜಕ್ಕೆ ನಿಗಮ ಸ್ಥಾಪಿಸಲು ಹಲವು ಬಾರಿ ವಿನಂತಿಸಿದ ಬಳಿಕ ಚುನಾವಣೆಯ ಮುನ್ಸೂಚನೆ ಬಂದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆಯಷ್ಟೇ ನಿಗಮ ಸ್ಥಾಪನೆ ಮಾಡಿದೆ. ಬಿಲ್ಲವರ ಕಣ್ಣಿಗೆ ಮಣ್ಣೆರೆಚುವ ಜೀವ ಸಲುವಾಗಿ ಸ್ಥಾಪಿಸಲಾಗಿರುವ ನಿಗಮಕ್ಕೆ ಸರಕಾರ ನೂರು ರೂಪಾಯಿಯ ಅನುದಾನವನ್ನೂ ನೀಡಿಲ್ಲ. ಜೊತೆಗೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ್ಯರ ಹೆಸರು ಇಡಬೇಕೆನ್ನುವ ಬೇಡಿಕೆಯನ್ನು ಈಡೇರಿಸದೇ ಬಿಜೆಪಿ ಬಿಲ್ಲವ ಸಮುದಾಯವನ್ನು ಮೂಲೆಗುಂಪು ಮಾಡಿದೆ ಎಂದು ಪದ್ಮರಾಜ್ ಆಕ್ರೋಶ ವ್ಯಕ್ತಪಡಿಸಿದರು.