ತೀವ್ರಗೊಂಡ ಪ್ರತಿಭಟನೆ: ಬಿಜೆಪಿ ಅಥವಾ ಪ್ರಧಾನಿ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ ಎಂದ ಬೃಜ್ ಭೂಷಣ್

ಹೊಸ ದಿಲ್ಲಿ: ಮಹಿಳಾ ಕ್ರೀಡಾಪಟುಗಳಿಂದ ಗಂಭೀರ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬೃಜ್ ಭೂಷಣ್, ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ಸೂಚಿಸಿದರೆ ನನ್ನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು NDTV ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಬೃಜ್ ಭೂಷಣ್, "ಪ್ರಧಾನಿಯೇಕೆ ನನಗೆ ರಾಜೀನಾಮೆ ನೀಡಲು ಸೂಚಿಸುತ್ತಾರೆ? ಒಂದು ವೇಳೆ ಅವರು ನನಗೆ ಹಾಗೆ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ. ನನ್ನ ಪಕ್ಷದ ವರ್ಚಸ್ಸು ನನ್ನಿಂದಾಗಿ ಹಾಳಾಗಿದ್ದರೆ, ಒಂದು ವೇಳೆ ಪ್ರಧಾನಿ ಹಾಗೂ ನನ್ನ ಪಕ್ಷ(ಬಿಜೆಪಿ) ಸೂಚಿಸಿದರೆ ನಾನು ರಾಜೀನಾಮೆ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.
Next Story





