Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮತದಾರರ ಮಾಹಿತಿ ಮಾರಾಟ: ಅನುಮಾನ, ಆತಂಕ

ಮತದಾರರ ಮಾಹಿತಿ ಮಾರಾಟ: ಅನುಮಾನ, ಆತಂಕ

ಆರ್. ಜೀವಿಆರ್. ಜೀವಿ3 May 2023 2:55 PM IST
share
ಮತದಾರರ ಮಾಹಿತಿ ಮಾರಾಟ: ಅನುಮಾನ, ಆತಂಕ

ಚಿಲುಮೆಯಂಥ ಸಂಸ್ಥೆ ಕದ್ದಿದ್ದ ಮಾಹಿತಿಯಾಗಲಿ, ಈಗ ಕೋರಮಂಗಲದ ಖಾಸಗಿ ಸಂಸ್ಥೆ ಸಂಗ್ರಹಿಸಿ ಮಾರಿರುವ ಮಾಹಿತಿಯಾಗಲಿ ಯಾರದೋ ಕೈಗೆ ಸಿಕ್ಕಿ ಆಗಬಹುದಾದ ಅವಾಂತರಗಳೇನು ಎಂಬುದು ಸಣ್ಣ ಪ್ರಶ್ನೆಯಲ್ಲ. ಇದು ಇಡೀ ಚುನಾವಣಾ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸುವ ವಿಚಾರವಲ್ಲವೇ? ನೇರವಾಗಿ ಮತದಾರರ ಬಂಡವಾಳಕ್ಕೇ ಕೈಹಾಕುವ ಇಂತಹ ಮಾಹಿತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂಥ ಅಪಾಯಕ್ಕೆ ಕಾರಣವಾಗಬಲ್ಲವು ಎಂಬುದನ್ನು ಊಹಿಸಿದರೇ ಭಯವಾಗುತ್ತದೆ.

ಚುನಾವಣೆ ಬಂದೇಬಿಡುತ್ತಿದೆ. ಗೆಲ್ಲುವುದಕ್ಕಾಗಿ ರಾಜಕೀಯ ಪಕ್ಷಗಳು ಪ್ರಚಾರದ ಜೊತೆಜೊತೆಗೇ ಇತರ ಕಸರತ್ತುಗಳಲ್ಲಿಯೂ ತೊಡಗಿವೆ. ಹೀಗಿರುವಾಗಲೇ ಆರೂವರೆ ಲಕ್ಷಕ್ಕೂ ಹೆಚ್ಚು ಮತದಾರರ ಮಾಹಿತಿ ಮಾರಾಟವಾಗಿದೆಯೇ ಎಂಬ ಅನುಮಾನ ಹೆಡೆಯೆತ್ತಿದೆ. ಬೆಂಗಳೂರಿನ ಕೋರಮಂಗಲದ ಖಾಸಗಿ ಸಂಸ್ಥೆಯೊಂದು 25 ಸಾವಿರ ರೂ.ಗಳಿಗೆ ಕೆಲವು ಕ್ಷೇತ್ರಗಳ ಮಾಹಿತಿಯನ್ನು ಮಾರಾಟ ಮಾಡಿಕೊಂಡಿರುವ ವಿಚಾರ ಬಯಲಾಗಿದೆ. ಸದ್ಯ, ಆ ಖಾಸಗಿ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆದಿದೆ. ಆದರೆ, ಆತಂಕದ ವಿಚಾರವೆಂದರೆ, ಏನೇನೆಲ್ಲ ಮಾಹಿತಿ ಸೋರಿಕೆಯಾಗಿ, ಯಾವ ಬಗೆಯ ಚುನಾವಣಾ ಅಕ್ರಮಕ್ಕೆ ಇದು ದಾರಿಮಾಡಿಕೊಟ್ಟಿರಬಹುದು ಎಂಬ ಸಂಗತಿ.

ಮತದಾರರ ಸಂಪೂರ್ಣ ವಿವರ ಮಾತ್ರವಲ್ಲದೆ, ಮತದಾರರು ಕಳೆದ ಬಾರಿ ಯಾವ ಪಕ್ಷವನ್ನು ಬೆಂಬಲಿಸಿದ್ದರು, ಈ ಬಾರಿ ಯಾವ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ಮಾಹಿತಿಯನ್ನೆಲ್ಲ ಕಲೆಹಾಕಿದ್ದ ಖಾಸಗಿ ಸಂಸ್ಥೆ, 25 ಸಾವಿರ ರೂ. ನೀಡಿದವರಿಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನೀಡುತ್ತಿತ್ತು ಎಂಬುದು ಈಗ ದಾಖಲಾಗಿರುವ ದೂರು.

ಈ ಪ್ರಕರಣವನ್ನು ಪಕ್ಷೇತರ ಅಭ್ಯರ್ಥಿಯೊಬ್ಬರು ಕೊಟ್ಟ ಮಾಹಿತಿ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ಪ್ರಕಟಿಸಿದ್ದು ‘ದಿ ನ್ಯೂಸ್ ಮಿನಿಟ್ (ಟಿಎನ್ಎಂ)’ ಎಂಬ ಡಿಜಿಟಲ್ ಸುದ್ದಿ ಮಾಧ್ಯಮ. ಅದು ತನ್ನ ವರದಿಯಲ್ಲಿ ಹೇಳಿರುವ ಅಂಶಗಳನ್ನು ಗಮನಿಸುವುದಾದರೆ,

ಮಾಹಿತಿ ಮಾರಾಟ ಮಾಡಿಕೊಂಡ ಸಂಸ್ಥೆಯ ವೆಬ್ಸೈಟ್ ಡ್ಯಾಷ್ಬೋರ್ಡ್ನಲ್ಲಿರುವಂತೆ ಅದರ ಬಳಿ ಇರುವುದು 6.5 ಲಕ್ಷ ಮತದಾರರ ಮಾಹಿತಿ.

ಅವರಲ್ಲಿ ಪುರುಷ ಮತದಾರರು-3,45,089

ಮಹಿಳಾ ಮತದಾರರು-2,93,000

ಇತರ ಮತದಾರರು-5,630

ಇದು ನಿರ್ದಿಷ್ಟ ಕ್ಷೇತ್ರದ ಮತದಾರರ ಮಾಹಿತಿಯೇ ಅಥವಾ ಬೇರೆಬೇರೆ ಕ್ಷೇತ್ರಗಳದ್ದೇ ಎಂಬುದು ಅಸ್ಪಷ್ಟ. ಆತಂಕಕಾರಿ ವಿಚಾರವೆಂದರೆ, ಮಾರಾಟಕ್ಕಿದ್ದ ಈ ಮಾಹಿತಿ ಪಟ್ಟಿ ಚುನಾವಣಾ ಆಯೋಗ ಅಧಿಕೃತವಾಗಿ ಮಾಹಿತಿ ಸಂಗ್ರಹಿಸಿಡುವ ಮತ್ತು ಚುನಾವಣಾಧಿಕಾರಿಗಳಿಗೆ ಮಾತ್ರವೇ ಬಳಸಲು ಅವಕಾಶವಿರುವ ERONET ಪೋರ್ಟಲ್ನಲ್ಲಿನ ಮಾಹಿತಿಯ ಮಾದರಿಯಲ್ಲಿಯೇ ಇದೆ. ಈ ವೆಬ್ಸೈಟ್ ನ ಡೊಮೈನ್ ನೋಂದಣಿಯಾಗಿರುವುದು ದಿಲ್ಲಿಯಲ್ಲಿ ಎಪ್ರಿಲ್ 2023ರಲ್ಲಿ.

ವೆಬ್ಸೈಟ್ ಗೆ  ಲಾಗಿನ್ ಆದೊಡನೆ, ಸ್ವಾಗತ ಎಂಬ ಸಂದೇಶ ಬರುತ್ತಿತ್ತು. 25 ಸಾವಿರ ಹಾಗೂ 500 ರೂ. ಸೇವಾ ಶುಲ್ಕ ನೀಡಿ, ಕ್ಷೇತ್ರದ ಮತದಾರರ ಮಾಹಿತಿ ಮತ್ತು ಮೊಬೈಲ್ ನಂಬರ್ ಪಡೆಯಿರಿ. ಈ ಮಾಹಿತಿ ಪಡೆದು ಚುನಾವಣೆಯಲ್ಲಿ ಗೆಲ್ಲಿ. ನಿಮ್ಮ ಪ್ರಣಾಳಿಕೆಯನ್ನು ವಾಟ್ಸ್ಆ್ಯಪ್, ವಾಯ್ಸ್ ಕಾಲ್ ಮತ್ತು ಎಸ್ಎಂಎಸ್ ಮೂಲಕ ಕ್ಷೇತ್ರದ ಎಲ್ಲ ಮತದಾರರಿಗೆ ಕಳಿಸಿ ಎಂಬ ಸಂದೇಶದ ಜೊತೆಗೇ, ಹಣ ಪಾವತಿಗೆ ಸ್ಕ್ಯಾನ್ ಮಾಡಬೇಕಾದ ಬಾರ್ಕೋಡ್ ಇರುವ ಪಾಪ್ ಅಪ್ ಸಂದೇಶ ಕಾಣಿಸಿಕೊಳ್ಳುತ್ತಿತ್ತು. 25 ಸಾವಿರ ರೂ. ಕೊಟ್ಟ ಯಾರಿಗೇ ಆದರೂ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಕೊಡಲಾಗುತ್ತಿತ್ತು. ಪ್ರತೀ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನೀಡಲು 25 ಸಾವಿರ ಮತ್ತು 500 ರೂ. ಸೇವಾ ಶುಲ್ಕವನ್ನು ಸಂಸ್ಥೆ ನಿಗದಿ ಮಾಡಿತ್ತು. ಒಂದು ವೇಳೆ ಸೋತರೆ ಹಣ ವಾಪಸ್ ಎಂದೂ ವೆಬ್ಸೈಟ್ ನಲ್ಲಿ ಹೇಳಲಾಗಿತ್ತು.

ಬಹಿರಂಗವಾಗಿರುವ ಮಾಹಿತಿ

ಮತದಾರರ ಹೆಸರು, ಭಾವಚಿತ್ರ, ವಿಳಾಸ, ಜಾತಿ, ಲಿಂಗ, ವಯಸ್ಸು, 

ಮನೆಯಲ್ಲಿರುವ ಇತರ ಮತದಾರರ ವಿವರ ಹಾಗೂ ಮೊಬೈಲ್ ನಂಬರ್ ಇತ್ಯಾದಿ

ERONETನಲ್ಲಿ ದಾಖಲಾಗುವ ಮತದಾರರ ಮಾಹಿತಿ 13 ಕಾಲಂಗಳಲ್ಲಿ ಇರುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆಗೆ ಸಲ್ಲಿಸಲಾಗಿರುವ ಫಾರ್ಮ್-6 ಅರ್ಜಿಗಳನ್ನೂ ಅಲ್ಲಿ ಸಂಗ್ರಹಿಸಿಡಲಾಗಿರುತ್ತದೆ. ಅದರೊಳಗೆ ದೂರವಾಣಿ, ವಿಳಾಸ, ಕುಟುಂಬದ ವಿವರ ಸೇರಿದಂತೆ ಮತದಾರರ ಎಲ್ಲ ಮಾಹಿತಿಗಳಿರುತ್ತವೆ. ಚುನಾವಣಾ ಆಯೋಗ ಎಲ್ಲಿಯೂ ಮತದಾರರ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸಿರುವುದಿಲ್ಲ.

ಈಗ ಖಾಸಗಿ ಸಂಸ್ಥೆ ಮಾರಾಟಕ್ಕಿಟ್ಟಿದ್ದ ಮಾಹಿತಿಯಲ್ಲಿ, ERONETನಲ್ಲಿನ 13 ಕಾಲಂಗಳ ಮಾಹಿತಿಯಲ್ಲಿ 8 ಕಾಲಂಗಳನ್ನು ಯಥಾವತ್ತಾಗಿ ಕಾಪಿ ಪೇಸ್ಟ್ ಮಾಡಿದಂತಿದೆ ಎಂಬ ಚುನಾವಣಾ ಆಯೋಗದ ಅಧಿಕಾರಿಯೊಬ್ಬರ ಅಭಿಪ್ರಾಯವೂ ಟಿಎನ್ಎಂ ವರದಿಯಲ್ಲಿದೆ.

ಇದು ಒಳಗಿದ್ದವರದೇ ಕೆಲಸವಾಗಿರಬೇಕು ಇಲ್ಲವೇ ಹ್ಯಾಕ್ ಮಾಡಿರಬೇಕು ಎಂಬ ಅನುಮಾನವೂ ಎದ್ದಿದೆ.

ಮತದಾರರ ಜೊತೆ ನೇರ ಸಂಪರ್ಕ ಸಾಧಿಸಲು ಅನುಕೂಲವಾಗುವಂತಿರುವ ಮಾಹಿತಿ ಇದಾಗಿರುವುದರಿಂದ, ಲಂಚವಾಗಿ ಮತದಾರರಿಗೆ ನೇರ ಯುಪಿಐ ವರ್ಗಾವಣೆ ಮಾಡುವಲ್ಲಿಯೂ ಖಾಸಗಿ ಸಂಸ್ಥೆ ಭಾಗಿಯಾಗಿರಬಹುದು ಎಂಬ ಸಂಶಯವೂ ವ್ಯಕ್ತವಾಗಿದೆ.

HDFC,ICICI ಮತ್ತುAXIS ಬ್ಯಾಂಕ್ ಗಳಲ್ಲಿನ ವಿವಿಧ ಖಾತೆಗಳಿಗೆ ಜೋಡಿಸಲಾಗಿರುವ ಮತ್ತು ಒಬ್ಬನೇ ವ್ಯಕ್ತಿಯ ಹೆಸರಿನಲ್ಲಿರುವ ಹಲವಾರು ಯುಪಿಐ ಐಡಿಗಳನ್ನು ಕೂಡ ವೆಬ್ಸೈಟ್ ಗೆ ಲಿಂಕ್ ಮಾಡಲಾಗಿರುವುದನ್ನು ಟಿಎನ್ಎಂ ವರದಿ ಬಹಿರಂಗಪಡಿಸಿದೆ.

ವೆಬ್ಸೈಟ್ ನಲ್ಲಿ ಲಭ್ಯವಿದ್ದ ಪಟ್ಟಿಯಲ್ಲಿನ ಕೆಲವು ಮತದಾರರನ್ನು ಟಿಎನ್ಎಂ ಸಂಪರ್ಕಿಸಿದಾಗ, ಅವರೆಲ್ಲ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರೆಂಬುದು ಗೊತ್ತಾಗಿದೆ. ಅವರಲ್ಲಿ ಕೆಲವರಿಗೆ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು, ರಾಜಕೀಯ ಪಕ್ಷದವರೆಂದು ಹೇಳಿಕೊಂಡು ಈಗಾಗಲೇ ಕರೆ ಬಂದಿದ್ದುದನ್ನು ಅವರು ಹೇಳಿರುವುದಾಗಿಯೂ ಟಿಎನ್ಎಂ ವರದಿ ಉಲ್ಲೇಖಿಸಿದೆ.

ಮಾಹಿತಿ ಖರೀದಿಸಿದವರು ಎಲ್ಲಾ ಮತದಾರರಿಗೆ ಒಂದೇ ಬಾರಿಗೆ ಆಡಿಯೊ ಸಂದೇಶ ಕಳುಹಿಸುವುದಕ್ಕೂ ಪೋರ್ಟಲ್ ಅವಕಾಶ ಮಾಡಿತ್ತೆಂಬುದನ್ನೂ ಟಿಎನ್ಎಂ ವರದಿ ಹೇಳಿದೆ. ವಾಟ್ಸ್‌ ಆ್ಯಪ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಪ್ರಚಾರಕ್ಕೂ ಅವಕಾಶವಿದ್ದುದು, ಚುನಾವಣೆ ದಿನಕ್ಕೆಂದೇ ಪ್ರತ್ಯೇಕ ಡ್ಯಾಷ್ಬೋರ್ಡ್ನ ಬೂತ್ವಾರು ಮತದಾರರ ವಿವರ ಮತ್ತು ಮತದಾನವಾದ ಮತ್ತು ಆಗದ ವಿವರಗಳನ್ನು ನೀಡುವುದಕ್ಕೆಂದು ಪೋರ್ಟಲ್ ಹೊಂದಿತ್ತೆಂಬುದನ್ನೂ ಟಿಎನ್ಎಂ ವರದಿ ಹೇಳಿದೆ.

ಕಳೆದ ನವೆಂಬರ್  ನಲ್ಲಿ ಚಿಲುಮೆ ಎಂಬ ಎನ್ಜಿಒ ಸಾವಿರಾರು ಮತದಾರರ ಮಾಹಿತಿ ಸಂಗ್ರಹಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅದೇ ಮಾದರಿಯಲ್ಲಿಯೇ ಈ ಕೋರಮಂಗಲದ ಖಾಸಗಿ ಸಂಸ್ಥೆ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ ಮತದಾರರ ಮಾಹಿತಿ ಸಂಗ್ರಹಿಸಿರುವ ಅನುಮಾನ ಮೂಡಿದೆ.

ಚಿಲುಮೆ ಸಂಸ್ಥೆ ಮತದಾರರ ಆಧಾರ್ ನಂಬರ್, ಫೋನ್ ನಂಬರ್, ವಿಳಾಸ, ವೋಟರ್ ಐಡಿ ಸಂಖ್ಯೆ, ಈ-ಮೇಲ್ ವಿಳಾಸದ ಜೊತೆಗೆ ಜಾತಿ, ಮಾತೃಭಾಷೆ, ವೈವಾಹಿಕ ವಿಚಾರ, ವಯಸ್ಸು, ಲಿಂಗ, ಉದ್ಯೋಗ, ಶೈಕ್ಷಣಿಕ ಅರ್ಹತೆ ವಿವರಗಳನ್ನೂ ಸಂಗ್ರಹಿಸಿತ್ತು. ಗೆದ್ದ ಜನಪ್ರತಿನಿಧಿಗಳ ಕೆಲಸದ ವಿಚಾರವಾಗಿ ಜನರ ಅಭಿಪ್ರಾಯವೇನು, ಯಾವ ಪಕ್ಷದ ಬಗ್ಗೆ ಏನು ಅಭಿಪ್ರಾಯ ಜನರಲ್ಲಿದೆ ಎಂಬುದನ್ನೂ ಅದು ಈ ಮಾಹಿತಿ ಸಂಗ್ರಹಣೆ ಸಂದರ್ಭದಲ್ಲಿಯೇ ತಿಳಿದುಕೊಂಡಿತ್ತು. 

ಬರುವ ಚುನಾವಣೆಯಲ್ಲಿ ಜನರ ಒಲವು ಯಾರ ಕಡೆ ಇರಲಿದೆ ಎಂಬ ಸುಳಿವು ಪಡೆಯುವ ಯತ್ನವೂ ಅವೆಲ್ಲದರ ಹಿಂದಿದ್ದುದು ಬಹಿರಂಗವಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣೆಗೆ ಖಾಸಗಿ ಸಂಸ್ಥೆಗೆ ಅನುಮತಿ ಕೊಡುವ ಮೂಲಕ ಸರಕಾರವೇ ಮತದಾರರ ಮಾಹಿತಿ ಕಳವು ಮಾಡಿದೆ ಎಂಬ ಆರೋಪವೂ ದೊಡ್ಡ ಮಟ್ಟದಲ್ಲಿಯೇ ಕೇಳಿಬಂದಿತ್ತು.

ಬಿಜೆಪಿಯ ನಂದೀಶ್ ರೆಡ್ಡಿ 2018ರ ಚುನಾವಣೆ ವೇಳೆ ಮತದಾರರ ಮಾಹಿತಿಗಾಗಿ ಇದೇ ಚಿಲುಮೆ ಸಂಸ್ಥೆಗೆ 18 ಲಕ್ಷ ರೂ. ಕೊಟ್ಟಿದ್ದರು ಎಂಬ ವಿಚಾರವೂ ಅವರದೇ ಅಫಿಡವಿಟ್ ಮೂಲಕ ಬಯಲಾಗಿತ್ತು.

ಈಗಲೂ ಮತ್ತೊಮ್ಮೆ ಆತಂಕ ತಲೆದೋರಿರುವುದು, ಕೋರಮಂಗಲದ ಖಾಸಗಿ ಸಂಸ್ಥೆ ಯಾರಿಗೆಲ್ಲ ಮತದಾರರ ಮಾಹಿತಿ ಮಾರಾಟ ಮಾಡಿರಬಹುದು, ಎಷ್ಟು ಕ್ಷೇತ್ರಗಳ ಮತದಾರರ ಮಾಹಿತಿ ಅದರ ಬಳಿ ಇತ್ತು, ಅವೆಲ್ಲ ಬೇರೆಯವರಿಗೆ ಮಾರಾಟವಾಗಿ, ಚುನಾವಣಾ ಅಕ್ರಮಕ್ಕೆ ದಾರಿಯಾಗಿರಬಹುದೆ ಎಂಬೆಲ್ಲ ಪ್ರಶ್ನೆಗಳ ಕಾರಣದಿಂದ.

ಹೀಗೆ ಮತದಾರರ ಮಾಹಿತಿ ಬಹಿರಂಗವಾಗಿಯೇ ಬಿಕರಿಯಾಗಿದ್ದರೂ ಯಾಕೆ ರಾಜಕೀಯ ಪಕ್ಷಗಳಾಗಲೀ, ಗೋದಿ ಮೀಡಿಯಾಗಳಾಗಲೀ ಅದರ ಬಗ್ಗೆ ಮೌನ ವಹಿಸಿವೆ ಎಂಬುದು ಮತ್ತೊಂದು ದೊಡ್ಡ ಪ್ರಶ್ನೆಯಾಗಿದೆ.

ಹಾಗಾದರೆ ರಾಜಕೀಯ ಪಕ್ಷಗಳೂ ಈ ಮಾಹಿತಿಯ ಫಲಾನುಭವಿಗಳಾಗಿವೆಯೇ? ಅದನ್ನು ಕೊಂಡುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಅವು ಯತ್ನಿಸಿವೆಯೆ?

ಈ ಆತಂಕ ಇನ್ನೂ ಹೆಚ್ಚಾಗಿರುವುದು, ಲೋಕಸಭಾ ಚುನಾವಣೆಗೆ ಇನ್ನೊಂದೇ ವರ್ಷವಿದೆ ಎಂಬ ಕಾರಣಕ್ಕೆ. ವಾಟ್ಸ್ ಆ್ಯಪ್ ಬಳಸಿಕೊಂಡು ಮತದಾರರಿಗೆ ಆಮಿಷ, ಲಂಚ, ಕಡೆಗೆ ಬೆದರಿಕೆ ಒಡ್ಡುವ ಸಾಧ್ಯತೆಯೂ ಇಲ್ಲದಿಲ್ಲ.

2016ರಲ್ಲಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ರನ್ನು ಗೆಲ್ಲಿಸಲು ಬ್ರಿಟನ್ ಮೂಲದ ಆನ್ಲೈನ್ ವಿಶ್ಲೇಷಣಾ ಕಂಪೆನಿ ಕೇಂಬ್ರಿಡ್ಜ್ ಅನಾಲಿಟಿಕಾ 5 ಕೋಟಿಗೂ ಹೆಚ್ಚು ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕದ್ದು ಅಕ್ರಮವಾಗಿ ಬಳಸಿಕೊಂಡಿದ್ದ ವರದಿ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿತ್ತು.

ಚಿಲುಮೆಯಂಥ ಸಂಸ್ಥೆ ಕದ್ದಿದ್ದ ಮಾಹಿತಿಯಾಗಲಿ, ಈಗ ಕೋರಮಂಗಲದ ಖಾಸಗಿ ಸಂಸ್ಥೆ ಸಂಗ್ರಹಿಸಿ ಮಾರಿರುವ ಮಾಹಿತಿಯಾಗಲಿ ಯಾರದೋ ಕೈಗೆ ಸಿಕ್ಕಿ ಆಗಬಹುದಾದ ಅವಾಂತರಗಳೇನು ಎಂಬುದು ಸಣ್ಣ ಪ್ರಶ್ನೆಯಲ್ಲ. ಇದು ಇಡೀ ಚುನಾವಣಾ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸುವ ವಿಚಾರವಲ್ಲವೇ? ನೇರವಾಗಿ ಮತದಾರರ ಬಂಡವಾಳಕ್ಕೇ ಕೈಹಾಕುವ ಇಂತಹ ಮಾಹಿತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂಥ ಅಪಾಯಕ್ಕೆ ಕಾರಣವಾಗಬಲ್ಲವು ಎಂಬುದನ್ನು ಊಹಿಸಿದರೇ ಭಯವಾಗುತ್ತದೆ.

share
ಆರ್. ಜೀವಿ
ಆರ್. ಜೀವಿ
Next Story
X