ಮೇ 4: ಉಚಿತ ಅಸ್ತಮಾ ತಪಾಸಣಾ ಶಿಬಿರ

ಮಂಗಳೂರು: ಎಸ್‌ಡಿಎಂ ಆಯುವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ವಿಶ್ವ ಅಸ್ತಮಾ ದಿನದ ಪ್ರಯುಕ್ತ ಹೊರ ರೋಗಿ ವಿಭಾಗದಲ್ಲಿ ಮೇ4ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಉಚಿತ ಅಸ್ತಮಾ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಉಸಿರಾಟದ ತೊಂದರೆ, ದೀರ್ಘಾವಧಿಯ ಉಬ್ಬಸ, ದಮ್ಮು, ಶ್ವಾಸಕೋಶದ ಅಲರ್ಜಿ, ಕೆಮ್ಮು, ನೆಗಡಿ, ಗೊರಕೆ ಸಂಬಂಧಪಟ್ಟ ತೊಂದರೆಗಳಿಗೆ ಉಚಿತ ತಪಾಸಣೆ, ಯೋಗ ಮತ್ತು ಪಥ್ಯಾಹಾರ ಸಲಹೆ ಹಾಗೂ ರಿಯಾಯಿತಿ ದರದಲ್ಲಿ ಪ್ರಯೋಗಾಲಯ ಪರೀಕ್ಷೆಗಳು ಮತ್ತು ಔಷಧಾಲಯದ ಸೇವೆಗಳು ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





