ಬ್ರಹ್ಮಾವರ: ಉತ್ತರ ಪ್ರದೇಶ ಮೂಲದ ಬಾಲಕ ನಾಪತ್ತೆ

ಬ್ರಹ್ಮಾವರ, ಮೇ 3: ಹೇರೂರು ಗ್ರಾಮದ ರಾಜೀವನಗರ ಕೊಳಂಬೆ ಎಂಬಲ್ಲಿ ವಾಸವಾಗಿರುವ ಉತ್ತರ ಪ್ರದೇಶದ ಮೂಲದ ಬಾಲಕನೊರ್ವ ಮೇ 2ರಂದು ರಾತ್ರಿ ವೇಳೆ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಉತ್ತರ ಪ್ರದೇಶ ಮೂಲದ ರೇಣು ಎಂಬವರು ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಕೊಳಂಬೆಯಲ್ಲಿ ವಾಸವಾಗಿದ್ದು, ಇವರ ಎರಡನೇ ಮಗ ಸೀತು ಕುಮಾರ್(13) ಎಂಬಾತ ಮನೆಯ ಬಳಿ ಮೆಹಂದಿ ಕಾರ್ಯಕ್ರಮಕ್ಕೆ ಹೋಗು ವುದಾಗಿ ಹೇಳಿ ಮನೆಯಿಂದ ಹೋದವನು ಮೆಹಂದಿ ಕಾರ್ಯಕ್ರಮಕ್ಕೂ ಹೋಗದೆ ವಾಪಾಸ್ಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





