ಮತದಾನಕ್ಕೆ 48 ಗಂಟೆ ಮೊದಲೇ ಮತಗಟ್ಟೆ ಸುತ್ತಮುತ್ತ ಪೊರಕೆ ನಿಷೇಧ: ಕಾರಣ ಇಲ್ಲಿದೆ...

ಬೆಂಗಳೂರು, ಮೇ 3: ಆಮ್ ಆದ್ಮಿ ಪಕ್ಷದ ಚಿಹ್ನೆ ಪೊರಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮತದಾನದ 48 ಗಂಟೆ ಮೊದಲು ಮತಗಟ್ಟೆ ಸುತ್ತಮುತ್ತ ಹಾಗೂ ಮತಗಟ್ಟೆಯಲ್ಲಿ ಸ್ವಚ್ಛತೆಗೆ ಬೇಕೆ ಬೇಕಿರುವ ಪೊರಕೆಯನ್ನು ಚುನಾವಣಾ ಆಯೋಗ ಬ್ಯಾನ್ ಮಾಡಿದೆ.
ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷಗಳ ಚಿಹ್ನೆಯಾಗಲಿ ಅಥವಾ ಪ್ರತಿನಿಧಿಸುವ ವಸ್ತು ಮತ್ತು ಚಿತ್ರಗಳನ್ನ ಮತದಾರರಿಂದ ಮರೆ ಮಾಚಬೇಕಿದೆ. ಹೀಗಾಗಿ ಚುನಾವಣೆಯ ನಿಯಮದ ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ಆಮ್ ಆದ್ಮಿ ಪಕ್ಷದ ಚಿಹ್ನೆಯಾಗಿರುವ ಪೊರಕೆಯನ್ನು ಬ್ಯಾನ್ ಮಾಡಿ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಚಿಹ್ನೆ ಕೈ ಎಂದು ಕೈ ಕತ್ತರಿಸಲಾಗುವುದೇ?: ಶಿವಮೊಗ್ಗ ಏರ್ಪೋರ್ಟ್ ಕೂಡ ಕಮಲಾಕಾರದಲ್ಲಿದ್ದು ಅದು ಕೂಡ ಮತದಾರರ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ, ಶಿವಮೊಗ್ಗ ಏರ್ಪೋರ್ಟ್ ಅನ್ನು ಕಾಣದಂತೆ ಪರದೆ ಮುಚ್ಚಬೇಕು ಎಂಬ ಕೂಗು ಕೆಲ ದಿನಗಳ ಹಿಂದೆ ಜೋರಾಗಿತ್ತು. ಇದಕ್ಕೆ ಕೆಲವರು ಕಾಂಗ್ರೆಸ್ ಚಿಹ್ನೆ ಕೈ ಎಂದು ಕೈ ಕತ್ತರಿಸಲಾಗುವುದೇ? ಎಂದು ಟೀಕೆ ಮಾಡಿದ್ದರು.