ಸುಳ್ಯ: ಕಾಂಗ್ರೆಸ್ ಮುಖಂಡನ ಮನೆಯಿಂದ ಚಿನ್ನಾಭರಣ ಕಳವು

ಸುಳ್ಯ, ಮೇ 4: ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಅವರ ಮನೆಗೆ ಕಳ್ಳರು ನುಗ್ಗಿ ಚಿನ್ನ ಆಭರಣವನ್ನು ಕಳವುಗೈದ ಘಟನೆ ವರದಿಯಾಗಿದೆ.
ಸಂಶುದ್ದೀನ್ ಮತ್ತು ಮನೆಯವರು ಕುಟುಂಬ ಸಮೇತವಾಗಿ ಮಂಗಳೂರಿಗೆ ತೆರಳಿದ್ದರು. ಬುಧವಾರ ರಾತ್ರಿ ಮನೆಗೆ ಹಿಂದಿರುಗಿ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಹಾಗು ಶ್ವಾನ ದಳವನ್ನು ಕರೆಸಲಾಗಿದೆ.
ಕಳವಾದ ಸೊತ್ತಿನ ಮೌಲ್ಯ ತಿಳಿದುಬಂದಿಲ್ಲ.
Next Story