Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹುಲಿ ಬದುಕಿದ ರೀತಿ....

ಹುಲಿ ಬದುಕಿದ ರೀತಿ....

ಇಂದು ಟಿಪ್ಪು ಸುಲ್ತಾನ್ ಹುತಾತ್ಮನಾದ ದಿನ

ಕುಮಾರ್ ಬುರಡಿಕಟ್ಟಿಕುಮಾರ್ ಬುರಡಿಕಟ್ಟಿ4 May 2023 12:11 PM IST
share
ಹುಲಿ ಬದುಕಿದ ರೀತಿ....
ಇಂದು ಟಿಪ್ಪು ಸುಲ್ತಾನ್ ಹುತಾತ್ಮನಾದ ದಿನ

ತಮ್ಮವರೇ ತಮಗೆ ಮೋಸ ಮಾಡಿದ್ದು ಟಿಪ್ಪುಗೆ ಅರಿವಾಗುತ್ತದೆ. ಸೋಲು ಖಚಿತವೆನಿಸುತ್ತದೆ. ಬ್ರಿಟಿಷರೊಂದಿಗೆ ರಾಜಿಮಾಡಿಕೊಂಡು, ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡರೆ ಮೈಸೂರು ರಾಜ್ಯದ ಸಿಂಹಾಸನದಲ್ಲಿ ಮುಂದುವರಿಯುವ ಅವಕಾಶ ಆಗಲೂ ಟಿಪ್ಪು ಎದುರಿಗಿರುತ್ತದೆ. ಆದರೆ, ಟಿಪ್ಪುಅಂತಹ ಯೋಚನೆಯನ್ನೇ ಮಾಡುವುದಿಲ್ಲ. ಬ್ರಿಟಿಷರನ್ನು ಭಾರತದ ಪ್ರಧಾನ ಶತ್ರುಗಳೆಂದು ಬಗೆದು ಬದುಕಿನುದ್ದಕ್ಕೂ ಅವರ ವಿರುದ್ಧ ಹೋರಾಡಿದ ಟಿಪ್ಪುಸುಲ್ತಾನ್ಗೆ ಕೊನೆ ಗಳಿಗೆಯಲ್ಲಿ ಸಿಂಹಾಸನಕ್ಕಾಗಿ, ವೈಯಕ್ತಿಕ ಜೀವಕ್ಕಾಗಿ ಶರಣಾಗಬೇಕೆಂದು ಅನ್ನಿಸುವುದೇ ಇಲ್ಲ. ಸಾಮಾನ್ಯ ಸೈನಿಕನಂತೆ ವೀರೋಚಿತವಾಗಿ ಕಾದಾಡಿದ ಈ ಮೈಸೂರು ಹುಲಿ 1799ರ ಮೇ 4ರಂದು ರಣರಂಗದಲ್ಲೇ ಹುತಾತ್ಮವಾಗುತ್ತದೆ. 

ಹೈದರ್ ಮತ್ತು ಟಿಪ್ಪುಆಳಿದ್ದು 1761ರಿಂದ 1799ರ ತನಕ. ಈ ಮೂವತ್ತೆಂಟು ವರ್ಷಗಳಲ್ಲಿ ಅವರು ಯುದ್ಧ ಮಾಡದ ಒಂದೇ ಒಂದು ವರ್ಷವೂ ಇಲ್ಲ ಎಂಬುದು ನಂಬಲು ಕಷ್ಟವಾದರೂ ನಂಬಲೇಬೇಕಾದ ಸತ್ಯ. ಅವರು ಸಿಂಹಾಸನದ ಮೇಲೆ ಕುಳಿತು ಕಳೆದ ಸಮಯಕ್ಕಿಂತಲೂ ರಣರರಂಗದಲ್ಲಿ ಕುದುರೆಯ ಮೇಲೆ ಕುಳಿತು ಕಳೆದ ಸಮಯವೇ ಹೆಚ್ಚು ಎಂದು ಚರಿತ್ರೆಕಾರರು ಬೊಟ್ಟುಮಾಡಿ ತೋರಿಸುತ್ತಾರೆ!

ಅದರಲ್ಲೂ ಬ್ರಿಟಿಷರ ವಿರುದ್ಧ ಅವರು ನಡೆಸಿದ ನಾಲ್ಕು ವಸಾಹತುಶಾಹಿ ವಿರೋಧಿ ಯುದ್ಧಗಳು ಅತ್ಯಂತ ಪ್ರಮುಖವಾಗಿವೆ. ಈ ಯುದ್ಧಗಳಲ್ಲೇ ಅವರು ಬರೊಬ್ಬರಿ ಒಂಭತ್ತು ವರ್ಷಗಳನ್ನು ಕಳೆದರು! ಯುದ್ಧಗಳ ನಡುವಿನ ಅವಧಿಯಲ್ಲಿ ಮುಂದಿನ ಯುದ್ಧಕ್ಕಾಗಿನ ಸಿದ್ಧತೆಗಳು! ಹೀಗಾಗಿ, ತಮ್ಮ ಮೂವತ್ತೆಂಟು ವರ್ಷಗಳ ಆಡಳಿತದುದ್ದಕ್ಕೂ ಅವರ ಪ್ರಧಾನ ಧ್ಯೇಯ ಅಂತ ಇದ್ದದ್ದು ಬ್ರಿಟಿಷರನ್ನು ಈ ನೆಲದಿಂದ ಒದ್ದೋಡಿಸಿ ಭರತಖಂಡವನ್ನು ಸ್ವತಂತ್ರಗೊಳಿಸುವುದೇ ಆಗಿತ್ತು. ಶಸ್ತ್ರಾಸ್ತ್ರಗಳ ತಯಾರಿಕೆಯಿರಲಿ ಅಥವಾ ಅವುಗಳ ಬಳಕೆಯಿರಲಿ, ಸೈನಿಕರ ನೇಮಕಾತಿಯಿರಲಿ ಅಥವಾ ಅವರ ನಿಯೋಜನೆಯಿರಲಿ, ತೆರಿಗೆ ಸಂಗ್ರಹವಿರಲಿ ಅಥವಾ ಅದರ ಉಪಯೋಗವಿರಲಿ - ಅವು ಏನೇ ಮಾಡಿದರೂ ಅದು ಬ್ರಿಟಿಷರನ್ನು ಸೋಲಿಸಿ ಸಾಗರದಾಚೆಗೆ ಎಸೆಯುವ ಪ್ರಧಾನ ಉದ್ದೇಶಕ್ಕೆ ನೆರವಾಗುವಂತೆ ಮಾಡುತ್ತಿದ್ದರು. ಬ್ರಿಟಿಷರನ್ನು ಶತಗತಾಯ ಈ ನೆಲದಿಂದ ಹೊರ ದಬ್ಬುವುದಕ್ಕಾಗಿಯೇ ಟಿಪ್ಪು ಸುಲ್ತಾನ್ ಶಿಸ್ತುಬದ್ಧ 1,43,000 ಸೈನಿಕರನ್ನು ಸಜ್ಜುಗೊಳಿಸಿದ್ದ! ಅಂದಿನ ಕರ್ನಾಟಕದ ಜನಸಂಖ್ಯೆಯೇ ಹೆಚ್ಚೆಂದರೆ 35 ಲಕ್ಷವಿತ್ತು. ರಾಜ್ಯದ ಪ್ರತೀ 40 ಪ್ರಜೆಗಳಿಗೊಬ್ಬರಂತೆ ರೆಗ್ಯೂಲರ್ ಮೈಸೂರು ಸೈನ್ಯದಲ್ಲಿ ಒಬ್ಬ ಸೈನಿಕನಿದ್ದ! 1979ರಲ್ಲಿ ಟಿಪ್ಪು ಮಡಿದಾಗ ಬ್ರಿಟಿಷರಿಗೆ ಇಂದಿನ ಮದ್ದೂರಿನಲ್ಲಿ ಸಿಕ್ಕ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ನೋಡಿ ಬ್ರಿಟಿಷರು ದಂಗಾಗಿ ಹೋಗಿದ್ದರು. ಆ ಕಾರಣಕ್ಕೇನೇ ಅದಕ್ಕೆ ಮದ್ದೂರು (ಮದ್ದುಗುಂಡುಗಳ ಊರು) ಅಂತ ಹೆಸರು ಬಂದಿದ್ದು!

ಇಡೀ ವಿಶ್ವದ ಚರಿತ್ರೆಯಲ್ಲೇ ಮೊತ್ತ ಮೊದಲ ಬಾರಿಗೆ ಕ್ಷಿಪಣಿಗಳನ್ನು ತಯಾರಿಸಿ ಬಳಸಿದವರು ಹೈದರ್ ಮತ್ತು ಟಿಪ್ಪು ಸುಲ್ತಾನ್. ವಿಶ್ವದ ಮೊತ್ತ ಮೊದಲ ಕ್ಷಿಪಣಿಗಳನ್ನು 1780ರಲ್ಲೇ ಬ್ರಿಟಿಷರ ವಿರುದ್ಧ ಹೈದರ್ ಬಳಸಿದ್ದ ಎಂಬುದನ್ನು ಹಾಗೂ ಅದನ್ನು ಅನುಕರಿಸಿ 1805ರಲ್ಲಿ ವಿಲಿಯಂ ಕಾಂಗ್ರೀವ್ ಎಂಬ ಬ್ರಿಟಿಷ್ ವಿಜ್ಞಾನಿ ಕ್ಷಿಪಣಿಗಳನ್ನು ರೂಪಿಸಿದ ಹಾಗೂ 1806ರ ಬೌಲೋಗ್ನ ಯುದ್ಧದಲ್ಲಿ ಅದನ್ನು ಬಳಸಲಾಯಿತು ಎಂದು ಕೆನೆತ್ ಮ್ಯಾಕ್ಸೆ ಅವರು ‘ಗಿನ್ನಿಸ್ ಹಿಸ್ಟರಿ ಆಫ್ ಲ್ಯಾಂಡ್ ವಾರ್ಫೇರ್’ ಪುಸ್ತಕದಲ್ಲಿ ಸ್ವಷ್ಟವಾಗಿ ದಾಖಲಿಸಿದ್ದಾರೆ. ಸುಮಾರು 1.4 ಕಿ.ಮೀ. ವರೆಗೆ ಚಿಮ್ಮಬಲ್ಲ ಈ ಕ್ಷಿಪಣಿ ತಂತ್ರಜ್ಞಾನದ ಬಗ್ಗೆ ಬ್ರಿಟಿಷರಿಗಿರಲಿ, ಇಡೀ ವಿಶ್ವಕ್ಕೇ ಗೊತ್ತಿರಲಿಲ್ಲ. ಹೈದರ್ ಅವುಗಳನ್ನು ಬಳಸಿದ ಬರೊಬ್ಬರಿ ಮೂವತ್ತೇಳು ವರ್ಷಗಳ ನಂತರವಷ್ಟೇ ಆ ತಂತ್ರಜ್ಞಾನವನ್ನು ಅರಿಯಲು ಬ್ರಿಟಿಷರಿಗೆ ಸಾಧ್ಯವಾಗಿದ್ದು. ಟಿಪ್ಪು ಮರಣದ ನಂತರವಷ್ಟೇ ಬ್ರಿಟಿಷರು ಶ್ರೀರಂಗಪಟ್ಟಣದಿಂದ ಆ ತಂತ್ರಜ್ಞಾನವನ್ನು ಕದ್ದು ನಕಲು ಮಾಡಿ ಹೊಸ ಕ್ಷಿಪಣಿಗಳನ್ನು ರೂಪಿಸಿದ್ದು.

ಟಿಪ್ಪುಮತ್ತು ಹೈದರ್ ಸೃಷ್ಟಿಸಿದ್ದ ಮಾಹಿತಿದಾರರ ಜಾಲವಂತೂ ಅದ್ಭುತವಾಗಿತ್ತು. ಮೈಸೂರು ರಾಜ್ಯದಾದ್ಯಂತ ಎಲ್ಲಿ ಏನೇ ನಡೆದರೂ ಅವರಿಗೆ ಕೂಡಲೇ ತಿಳಿಯುವಂತೆ ಸುಮಾರು ಒಂದು ಲಕ್ಷ ಮಾಹಿತಿದಾರರನ್ನು ಇಡೀ ರಾಜ್ಯದಾದ್ಯಂತ ಮತ್ತು ಹೊರಗಡೆ ಹರಡಿದ್ದರು. ಈ ವಿಸ್ತೃತ ಮಾಹಿತಿದಾರರ ಜಾಲದ ಕಾರಣದಿಂದಲೇ ಅವರು ತಿಂಗಳುಗಟ್ಟಲೇ ರಾಜಧಾನಿಯಿಂದ ದೂರದ ರಾಜ್ಯ ಗಡಿಗಳಲ್ಲಿ ಯುದ್ಧದಲ್ಲಿ ನಿರತರಾಗಿದ್ದರೂ ಆಡಳಿತ ಹಾದಿತಪ್ಪದಂತೆ ನೋಡಿಕೊಂಡಿದ್ದರು.

ಯುದ್ಧ ಮಾಡುತ್ತಿರುವಾಗಲೇ ಹೈದರ್ ಅಸ್ವಸ್ಥನಾಗುತ್ತಾನೆ. ತಾನು ಸಾಯುವ ಕೆಲವೇ ಗಂಟೆಗಳ ಮೊದಲು ಆತ ತನ್ನ ಮಗ ಟಿಪ್ಪುಸುಲ್ತಾನನಿಗೆ ಒಂದು ಪತ್ರವನ್ನು ಬರೆಸಿಟ್ಟು ಸಾಯುತ್ತಾನೆ. ವಾಸ್ತವದಲ್ಲಿ ಅದು ಹೈದರ್ನ ರಾಜಕೀಯ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ. ಹಿಂದುಸ್ಥಾನವನ್ನು ಬ್ರಿಟಿಷರಿಂದ ರಕ್ಷಿಸುವ ಶಕ್ತಿಯೀಗ ಹಿಂದೂಗಳಲ್ಲಿಲ್ಲವಾದ್ದರಿಂದ ಆ ಕೆಲಸವನ್ನು ನೀನೇ ಮಾಡಬೇಕು ಎಂದು ಟಿಪ್ಪುಗೆ ಆ ಪತ್ರದಲ್ಲಿ ಹೈದರ್ ಸ್ಪಷ್ಟವಾಗಿ ಹೇಳುತ್ತಾನೆ. ಟಿಪ್ಪುಆ ಕೆಲಸವನ್ನು ತನ್ನ ಕೊನೆಯ ಉಸಿರಿರುವ ತನಕವೂ ಮಾಡುತ್ತಲೇ ರಣರಂಗದಲ್ಲಿ ಸಾಯುತ್ತಾನೆ. ಕೇವಲ ಮೈಸೂರು ರಾಜ್ಯವನ್ನು ಮಾತ್ರವಲ್ಲ, ಇಡೀ ಹಿಂದುಸ್ಥಾನವನ್ನು ಬ್ರಿಟಿಷರಿಂದ ರಕ್ಷಿಸಬೇಕು, ಅದಕ್ಕಾಗಿ ಹಿಂದುಸ್ಥಾನದ ಎಲ್ಲಾ ರಾಜರನ್ನು ಬ್ರಿಟಿಷರ ವಿರುದ್ಧ ಒಗ್ಗೂಡಿಸಬೇಕು ಎಂಬ ಹೈದರ್ನ ಉಪದೇಶವನ್ನು ಪಾಲಿಸುವುದಕ್ಕೆ ಟಿಪ್ಪುಎಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ. ಆದರೆ, ಕೊನೆಗೂ ಅದರಲ್ಲಿ ಆತ ಸಫಲನಾಗುವುದಿಲ್ಲ.

1792ರಲ್ಲಿ ನಡೆದ ಮೂರನೇ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಯುದ್ಧದಲ್ಲಿ ಟಿಪ್ಪುಸೋಲುತ್ತಾನೆ. ಇದರಿಂದ ಮೈಸೂರು ರಾಜ್ಯದ ಅರ್ಧದಷ್ಟು ಭಾಗವನ್ನು ಕಳೆದುಕೊಳ್ಳಬೇಕಾಯಿತಲ್ಲದೇ ಯುದ್ಧ ನಷ್ಟವಾಗಿ ಕೇವಲ ಬ್ರಿಟಿಷರಿಗೆ ಮಾತ್ರವಲ್ಲದೆ ಅವರೊಂದಿಗೆ ಕೈಜೋಡಿಸಿದ ಮರಾಠರಿಗೂ ಅಪಾರ ಪ್ರಮಾಣದ ಹಣ ನೀಡಬೇಕಾಗಿ ಬರುತ್ತದೆ. ನಷ್ಟ ಪರಿಹಾರವಾಗಿ 3,30,00,000 ಹಣವನ್ನು ನೀಡುವುದಕ್ಕೆ ಟಿಪ್ಪುಬಳಿ ಅಷ್ಟೊಂದು ಹಣ ಇರುವುದಿಲ್ಲ. ಅದನ್ನು ಪೂರ್ತಿಯಾಗಿ ನೀಡುವ ತನಕ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಳುಗಳಾಗಿ ಬ್ರಿಟಿಷರಿಗೆ ಒಪ್ಪಿಸುತ್ತಾನೆ ಟಿಪ್ಪುಸುಲ್ತಾನ್! ರಾಜ್ಯದ ರಕ್ಷಣೆಗಾಗಿ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ತನ್ನ ಸ್ವಂತ ಮಕ್ಕಳನ್ನೇ ಒತ್ತೆಯಾಳುಗಳಾಗಿ ಇಟ್ಟ ರಾಜ ಕೇವಲ ಭಾರತದಲ್ಲಲ್ಲ, ಇಡೀ ವಿಶ್ವದಲ್ಲೇ ಎಲ್ಲೂ ಕಾಣಸಿಗುವುದಿಲ್ಲ. ಈ ಯುದ್ಧದಲ್ಲಿ ಕೇವಲ ಹಣ ಮಾತ್ರವಲ್ಲದೇ ಅರ್ಧದಷ್ಟು ರಾಜ್ಯ, 70 ಕೋಟೆಗಳು, 800 ಫಿರಂಗಿಗಳನ್ನು ಟಿಪ್ಪುಕಳೆದುಕೊಳ್ಳುತ್ತಾನೆ. ಜೊತೆಗೆ ಅವನ 50,000 ಧೀರ ಸೈನಿಕರೂ ಕೊಲ್ಲಲ್ಪಡುತ್ತಾರೆ. ಯುದ್ಧ ಮುಗಿದ ತಕ್ಷಣವೇ ಶ್ರೀರಂಗಪಟ್ಟಣದಿಂದ ಹೊರಟ ಟಿಪ್ಪುಮರಾಠರನ್ನು ಭೇಟಿಯಾಗಿ ‘‘ನಾನು ಎಂದೂ ನಿಮ್ಮ ಶತ್ರುವಲ್ಲ. ಬ್ರಿಟಿಷರು ನಮ್ಮಿಬ್ಬರ ಸಮಾನ ಶತ್ರುಗಳು.’’ ಎನ್ನುತ್ತಾನೆ.

ಮೂರನೇ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಯುದ್ಧದಿಂದ ಟಿಪ್ಪು ತುಂಬಾ ಬಸವಳಿದಿದ್ದ. ಆತ ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೊಮ್ಮೆ ಸೆಡ್ಡು ಹೊಡೆದರೆ ತಮಗೆ ಉಳಿಗಾಲವಿಲ್ಲ ಎಂಬುದು ಬ್ರಿಟಿಷರಿಗೆ ಮನವರಿಕೆಯಾಗಿತ್ತು. ನೇರ ಮತ್ತು ನ್ಯಾಯಯುತ ಯುದ್ಧದಲ್ಲಿ ವೀರೋಚಿತವಾಗಿ ಕಾದಾಡುವ ಶಿಸ್ತುಬದ್ಧ ಮೈಸೂರು ಸೈನ್ಯವನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಆದ್ದರಿಂದಲೇ ಅವರು ಟಿಪ್ಪುಸೈನ್ಯ ಮತ್ತು ಆಸ್ಥಾನದಲ್ಲಿದ್ದ ಕೆಲವರನ್ನು ರಹಸ್ಯವಾಗಿ ಖರೀದಿಸಿ ಟಿಪ್ಪುವಿರುದ್ಧ ಮೋಸದ ಯುದ್ಧಕ್ಕೆ ಸಿದ್ಧವಾಗುತ್ತಾರೆ. 1799ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಕೋರ್ಟ್ ಡೈರೆಕ್ಟರ್ ಸೆಲೆಕ್ಟ್ ಕಮಿಟಿಗೆ ಜನರಲ್ ವೆಲ್ಲೆಸ್ಲಿ ಬರೆದ ಪತ್ರದಲ್ಲಿ ಟಿಪ್ಪುಆಡಳಿತದ ಕೆಲವು ಪ್ರಮುಖರು ತಮ್ಮೊಂದಿಗೆ ಕೈಜೋಡಿಸಿರುವ ಬಗ್ಗೆ, ಯುದ್ಧದ ನಿರ್ಣಾಯಕ ಸಂದರ್ಭದಲ್ಲಿ ಅವರೆಲ್ಲರೂ ಟಿಪ್ಪುವಿರುದ್ಧ ತಮಗೆ ಸಹಾಯ ಮಾಡುವ ಬಗ್ಗೆ ವೆಲ್ಲೆಸ್ಲಿ ಖಾತರಿಯಾಗಿ ಹೇಳಿದ್ದ. ಮೈಸೂರು ಸೈನ್ಯದ ಸೇನಾಧಿಪತಿ ಮೀರ್ ಸಾದಿಕ್ ಮತ್ತು ಟಿಪ್ಪುಆಡಳಿತದ ಪ್ರಮುಖ ಮಂತ್ರಿ ಪೂರ್ಣಯ್ಯ ಅವರನ್ನು ಖರೀದಿಸಿದ ಮೇಲೆ ಬ್ರಿಟಿಷರ ಮೋಸ-ವಂಚನೆಗಳ ಯೋಜನೆಗೆ ಅಂತಿಮ ರೂಪ ಬರುತ್ತದೆ. 1799ರಲ್ಲಿ ಬ್ರಿಟಿಷರು ಬೃಹತ್ ಸೈನ್ಯದೊಂದಿಗೆ ಎರಡು ದಿಕ್ಕಿನಿಂದ ಮೈಸೂರು ರಾಜ್ಯಕ್ಕೆ ಮುತ್ತಿಗೆ ಹಾಕುತ್ತಾರೆ. ಜನರಲ್ ವೆಲ್ಲೆಸ್ಲಿ ನೇತೃತ್ವದ ಬ್ರಿಟಿಷ್ ಸೈನ್ಯ ಬಾಂಬೆ ಕಡೆಯಿಂದ ಹೊರಟರೆ ಹೈದರಾಬಾದಿನ ನಿಜಾಮರ ಸೈನ್ಯವನ್ನೂ ಒಳಗೊಂಡ ಪ್ರಧಾನ ಬ್ರಿಟಿಷ್ ಸೇನೆ ಜನರಲ್ ಹ್ಯಾರಿಸ್ ನೇತೃತ್ವದಲ್ಲಿ ಮದ್ರಾಸ್ನಿಂದ ಹೊರಡುತ್ತದೆ. ಬ್ರಿಟಿಷ್ ಸೇನಾ ತುಕಡಿಗಳು ತಮ್ಮ ನೆಲೆಗಳನ್ನು ಬಿಟ್ಟ ಕೇವಲ ಎರಡೇ ತಿಂಗಳಲ್ಲಿ ಶ್ರೀರಂಗಪಟ್ಟಣದ ಹೊಸ್ತಿಲಿಗೆ ಬಂದು ನಿಲ್ಲುತ್ತವೆ. ಹಾದಿಯುದ್ದಕ್ಕೂ ಒಂದಾದ ಮೇಲೆ ಒಂದರಂತೆ ಮೈಸೂರು ರಾಜ್ಯದ ಕೋಟೆಗಳು ಸೋತು ಬ್ರಿಟಿಷರ ವಶವಾಗುತ್ತವೆ. ಉನ್ನತ ಮಟ್ಟದಲ್ಲೇ ಹಲವರು ತಮ್ಮೊಂದಿಗೆ ಕೈಜೋಡಿಸಿ ಟಿಪ್ಪುವಿರುದ್ಧ ನಿಂತರೂ ವೀರೋಚಿತವಾಗಿ ಕಾದಾಡುತ್ತಿದ್ದ ಮೈಸೂರು ಸೇನೆಯನ್ನು ಕಂಡು ವೆಲ್ಲೆಸ್ಲಿ, ಹ್ಯಾರಿಸ್ ನಿಜಕ್ಕೂ ಹೌಹಾರುತ್ತಾರೆ. ತಮ್ಮವರೇ ತಮಗೆ ಮೋಸ ಮಾಡಿದ್ದು ಟಿಪ್ಪುಗೆ ಅರಿವಾಗುತ್ತದೆ. ಸೋಲು ಖಚಿತವೆನಿಸುತ್ತದೆ. ಬ್ರಿಟಿಷರೊಂದಿಗೆ ರಾಜಿಮಾಡಿಕೊಂಡು, ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡರೆ ಮೈಸೂರು ರಾಜ್ಯದ ಸಿಂಹಾಸನದಲ್ಲಿ ಮುಂದುವರಿಯುವ ಅವಕಾಶ ಆಗಲೂ ಟಿಪ್ಪು ಎದುರಿಗಿರುತ್ತದೆ. ಆದರೆ, ಟಿಪ್ಪುಅಂತಹ ಯೋಚನೆಯನ್ನೇ ಮಾಡುವುದಿಲ್ಲ. ಬ್ರಿಟಿಷರನ್ನು ಭಾರತದ ಪ್ರಧಾನ ಶತ್ರುಗಳೆಂದು ಬಗೆದು ಬದುಕಿನುದ್ದಕ್ಕೂ ಅವರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ಗೆ ಕೊನೆ ಗಳಿಗೆಯಲ್ಲಿ ಸಿಂಹಾಸನಕ್ಕಾಗಿ, ವೈಯಕ್ತಿಕ ಜೀವಕ್ಕಾಗಿ ಶರಣಾಗಬೇಕೆಂದು ಅನ್ನಿಸುವುದೇ ಇಲ್ಲ. ಸಾಮಾನ್ಯ ಸೈನಿಕನಂತೆ ವೀರೋಚಿತವಾಗಿ ಕಾದಾಡಿದ ಈ ಮೈಸೂರು ಹುಲಿ 1799ರ ಮೇ 4ರಂದು ರಣರಂಗದಲ್ಲೇ ಹುತಾತ್ಮವಾಗುತ್ತದೆ. ಆ ಒಂದೇ ದಿನ ಹನ್ನೊಂದು ಸಾವಿರ ಮೈಸೂರು ಸೈನಿಕರ ಮಾರಣಹೋಮ ನಡೆದು ಕಾವೇರಿ ಕೆಂಪಾಗಿ ಹರಿಯುತ್ತದೆ.

ಹುಲಿಯ ಜಾಡು ಹಿಡಿದು-ಕೃತಿಯಿಂದ)

share
ಕುಮಾರ್ ಬುರಡಿಕಟ್ಟಿ
ಕುಮಾರ್ ಬುರಡಿಕಟ್ಟಿ
Next Story
X