ಮಣಿಪುರ ಹಿಂಸಾಚಾರ: 'ಕಂಡಲ್ಲಿ ಗುಂಡಿಕ್ಕಲುʼ ಆದೇಶ

ಇಂಫಾಲ್: ಹಿಂಸಾಚಾರವು ತನ್ನ ರಾಜಧಾನಿಗೆ ಹರಡುತ್ತಿರುವಂತೆಯೇ ಮಣಿಪುರ ಸರಕಾರವು ತೀವ್ರವಾದ ಹಿಂಸಾಚಾರ ಸಂಭವಿಸಿದ್ದಲ್ಲಿ ʼಕಂಡಲ್ಲಿ ಗುಂಡಿಕ್ಕಲುʼ ಆದೇಶ ಹೊರಡಿಸಿದೆ ಎಂದು ndtv.com ವರದಿ ಮಾಡಿದೆ. ಸದ್ಯ ಮಣಿಪುರದಲ್ಲಿ ಹಲವಾರು ಸೈನಿಕರನ್ನು ನಿಯೋಜಿಸಲಾಗಿದೆ.
ಇಂದು ಸಂಜೆ ಮಣಿಪುರ ರಾಜ್ಯಪಾಲರು ಕಂಡಲ್ಲಿ ಗುಂಡು ಆದೇಶಕ್ಕೆ ಸಹಿ ಮಾಡಿದ್ದಾರೆ. ಆದೇಶಗಳನ್ನು ಹೊರಡಿಸಲು ರಾಜ್ಯದ ಮಾಜಿಸ್ಟ್ರೇಟರ್‌ಗಳಿಗೆ ಅಧಿಕಾರ ನೀಡಿದೆ. ಗಲಭೆ ನಿಯಂತ್ರಣಕ್ಕೆ ರ್ಯಾಪಿಡ್ ಆಕ್ಷನ್ ಫೋರ್ಸ್ ನ 500 ಸಿಬ್ಬಂದಿಯನ್ನು ಇಂಫಾಲ್ ಗೆ ಕಳುಹಿಸಲಾಗಿದೆ.
Next Story