ಜೆಇಇ: ಉಡುಪಿ ಇಬ್ಬರಿಗೆ ಶೇ.99 ಅಂಕ

ಉಡುಪಿ, ಮೇ 4: ಇಲ್ಲಿನ ಆಕಾಶ್ ಬೈಜೂಸ್‌ನ ಇಬ್ಬರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಯುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಒಟ್ಟಾರೆ ಶೇ.99ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ.
ರಾಘವ್ ಯಾದಗಿರಿ ಶೇ.99.44 ಹಾಗೂ ಸುಬ್ರಹ್ಮಣ್ಯ ನಾಯಕ್ ಶೇ. 99.31 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಜೆಇಇಯಲ್ಲಿ ಉತ್ತಮ ಸಾಧನೆ ಮಾಡಲು ಕಠಿಣ ಪರಿಶ್ರಮದೊಂದಿಗೆ ಕಟ್ಟುನಿಟ್ಟಾದ ವೇಳಾಪಟ್ಟಿಯ ಮೂಲಕ ಆಕಾಶ್ ಬೈಜೂಸ್ ಸಹಾಯ ಮಾಡಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
Next Story





