ಕಾರು ಕಳವುಗೈದ ಆರೋಪ: ಕೇರಳದ ನಾಲ್ವರು ಮಂಗಳೂರಿನಲ್ಲಿ ಸೆರೆ

ಮಂಗಳೂರು, ಮೇ 4: ಕಾರು ಕಳವುಗೈದು ಬಳಿಕ ಮಂಗಳೂರಿಗೆ ಆಗಮಿಸಿದ್ದ ನಾಲ್ಕು ಮಂದಿಯನ್ನು ಪಾಂಡೇಶ್ವರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ಕಾರಿನ ಚಾಲಕ ಎರ್ನಾಕುಳಂ ಜಿಲ್ಲೆಯ ಆಲುವಾ ನಿವಾಸಿ ರಿಯಾಝ್ (23), ಅದಿಪಿಲಿಕವಮ್ ಗ್ರಾಮದ ತಸ್ಸೀನ್ ಟಿ. ಎಚ್. ಯಾನೆ ತಸ್ಸೀರ್(25), ಕಲ್ಲಿಕೋಟೆಯ ತಾಯದಿಮ್ ಪರಂಬುವಿನ ಎಂ.ಕೆ. ಕ್ರಿಸ್ಟೋಪರ್ (30), ಎರ್ನಾಡ್ ಗ್ರಾಮದ ಅಜಿತ್ ಕೆ. (22) ಎಂದು ಗುರುತಿಸಲಾಗಿದೆ.
ಪಾಂಡೇಶ್ವರ ಎಸ್ಸೈ ಮನೋಹರ್ ಪ್ರಸಾದ್ ಪಿ. ಬುಧವಾರ ಸಂಜೆ 6ಕ್ಕೆ ಸಿಬ್ಬಂದಿಯ ಜೊತೆ ಗಸ್ತು ನಿರತರಾಗಿದ್ದ ವೇಳೆ ಬಂದರ್ ದಕ್ಷಿಣ ದಕ್ಕೆ ಪರಿಸರದಲ್ಲಿ ಒಂದು ಸಿಲ್ವರ್ ಬಣ್ಣದ ಕಾರಿನಲ್ಲಿ ನಾಲ್ಕು ಮಂದಿ ಯುವಕರು ಸಂಶಯಾಸ್ಪದ ರೀತಿಯಲ್ಲಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ತನಿಖೆ ನಡೆಸಿದರು.
ಈ ಸಂದರ್ಭ ಆರೋಪಿಗಳು ಈ ಕಾರನ್ನು ವಾರದ ಹಿಂದೆ ಕಳವು ಮಾಡಿರುವುದಾಗಿ ಒಪ್ಪಿಕೊಂಡರು. ಇದರ ಬೆಲೆ 1 ಲಕ್ಷ ರೂ. ಆಗಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story